Advertisement

ಯೋಗ, ಆಹಾರ ಕ್ರಮ, ಜೀವನ ಶೈಲಿಯಿಂದ ಥೈರಾಯ್ಡ ಹತೋಟಿ

11:16 PM Jun 20, 2023 | Team Udayavani |

ಒಮ್ಮೆ ಥೈರಾಯ್ಡ ಸಮಸ್ಯೆ ಬಂದರೆ ಅದಕ್ಕೆ ತೆಗೆದುಕೊಳ್ಳುವ ಮಾತ್ರೆಗಳು ಜೀವನವಿಡೀ ಬಳಸಲೇ ಬೇಕೆಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಥೈರಾಯ್ಡ ಸಮಸ್ಯೆಗೆ ಜೀವನಪೂರ್ತಿ ಮಾತ್ರೆ ಸೇವಿಸುವುದರ ಮೂಲಕವೇ ಸರಿಪಡಿಸಿ ಕೊಳ್ಳಬೇಕೆ? ಎಂಬ ಈ ಪ್ರಶ್ನೆಗೆ ಹೌದು ಎನ್ನಲೇಬೇಕಾಗುತ್ತದೆ, ಏಕೆಂದರೆ ನಮ್ಮ ಆಹಾರದ ಪದ್ಧತಿ ಅಥವಾ ಜೀವನಶೈಲಿಯಿಂದ ಬಂದ ಈ ತೊಂದರೆಯನ್ನು ಸರಿಪಡಿಸಕೊಳ್ಳಲು ಕಾಯಿಲೆಯ ಮೂಲದ ಗೋಜಿಗೆ ಹೋಗದೆ ಥೈರಾಯ್ಡ ಬರುವುದಕ್ಕೆ ಮುಂಚೆ ಇದ್ದ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಥೈರಾಯ್ಡ ಸಮಸ್ಯೆ ಬಂದ ನಂತರವೂ ಮುಂದುವರಿಸಿಕೊಂಡು (ಕಾಯಿಲೆಯ ಮೂಲವನ್ನು ಹಾಗೆಯೇ ಉಳಿಸಿ) ಥೈರಾಯ್ಡ ಹಾರ್ಮೋನುಗಳ ನಿಯಂತ್ರಣಕ್ಕೆ ಮಾತ್ರೆಗಳನ್ನು ಸೇವಿಸಲಾರಂಭಿಸಿದರೆ ಜೀವನಪೂರ್ತಿ ತೆಗೆದು ಕೊಳ್ಳುವುದು ಮಾತ್ರವಲ್ಲದೆ ಕಾಲಕಾಲಕ್ಕೆ ಮಾತ್ರೆಗಳ ಪ್ರಮಾಣವನ್ನು ಕೂಡ ಹೆಚ್ಚಿಸಲೇಬೇಕಾಗುತ್ತದೆ.

Advertisement

ನಾವು ಸರಿಯಾದ ಯೋಗ ಜೀವನಶೈಲಿ ಮತ್ತು ಆಹಾರ ಕ್ರಮವನ್ನು ಅಳವಡಿಸಿಕೊಳ್ಳದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ನಮ್ಮಲ್ಲಿನ ಮೂಲವಾದ ತಪ್ಪನ್ನು ಸರಿಪಡಿಸಿ ಕೊಂಡಿದ್ದೇ ಆದರೆ ನಾವು ಥೈರಾಯ್ಡ ಸಮಸ್ಯೆಯನ್ನು ಬರದಂತೆ ತಡೆಯ ಬಹುದು ಮಾತ್ರವಲ್ಲದೆ ಬಂದಂತಹ ಥೈರಾಯ್ಡ ಸಮಸ್ಯೆಯಿಂದ ಹಾರ್ಮೋನ್‌ಗಳನ್ನು ಸಮಸ್ಥಿತಿ ಯಲ್ಲಿ ಉತ್ಪತ್ತಿಯಾಗುವಂತೆ ಮಾಡಿಕೊಂಡರೆ ಔಷಧಗಳ ಡೋಸೇಜ್‌ ಕಡಿಮೆಯಾಗುತ್ತಾ ಸಾಗಿ, ಪೂರ್ಣವಾಗಿ ನಿಲ್ಲುತ್ತದೆ ಮತ್ತು ಥೈರಾಯ್ಡ ಮಾತ್ರೆಗಳನ್ನು ಜೀವನಪರ್ಯಂತ ನುಂಗುವ ಸಮಸ್ಯೆ ಕೂಡ ಇರುವುದಿಲ್ಲ.

ನಾವೆಲ್ಲರು ಇಂದಿನ ಹೆಚ್ಚೆಚ್ಚು ಸೇವಿಸುತ್ತಿರುವ ಆಹಾ ರದಲ್ಲಿ ಕೇವಲ ಕಾರ್ಬೋಹೈಡ್ರೇಟ್‌ಗಳನ್ನು ಮಾತ್ರವೇ ಸೇವಿಸುತ್ತಿರುವುದು ದೇಹಕ್ಕೆ ಅಗತ್ಯ ಪ್ರಮಾಣದ ಟೈರೋಸಿನ್‌ ಪೋ›ಟೀನನ್ನು ನೀಡದಿರು ವುದು ಹೈಪೋ ಥೈರಾಯ್ಡ ತೊಂದರೆಗೆ ಮೂಲ ಕಾರಣವೆನಿಸುತ್ತದೆ. ಮಾನಸಿಕ ಒತ್ತಡವೂ ಕೂಡ ಹಾರ್ಮೋನ್‌ಗಳ ಮೇಲೆ ಪ್ರಭಾವವನ್ನು ಬೀರುವು ದರಿಂದ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವು ದರಿಂದ ಹಾರ್ಮೋನ್‌ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ನಾವು ಸೇವಿಸುವ ಆಹಾರವು ಹೆಚ್ಚಿನದಾಗಿ ನೈಸರ್ಗಿಕವಾಗಿದ್ದರೆ ಇದು ಸೋಡಿಯಂ, ಟೈರೋಸಿನ್‌, ವಿಟಮಿನ್‌ ಮತ್ತು ಮಿನರಲ್‌ಗ‌ಳ ಆಗರವಾಗಿರುತ್ತದೆ. ಇಂತಹ ಆಹಾರವನ್ನು ದೇಹಕ್ಕೆ ನೀಡುವುದರಿಂದ ನಾವು ಬಹಳಷ್ಟು ತೊಂದರೆಗಳನ್ನು ತಡೆಯಬಹುದಾಗಿದೆ. ಹೇಗೆ ಎಂಬುದು ಮುಂದೆ ತಿಳಿಯೋಣ

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನೀರನ್ನು ಸೇವಿಸುವುದು ನಂತರದಲ್ಲಿ ನೈಸರ್ಗಿಕವಾಗಿ ಬೆಳೆದ ತರಕಾರಿಗಳ ಮಿಶ್ರಣವನ್ನು ಜ್ಯೂಸ್‌ನ ರೂಪದಲ್ಲಿ ದೇಹಕ್ಕೆ ಸೇವಿಸು ವುದು. ಇದು ದೇಹಕ್ಕೆ ಅಗತ್ಯ ಪ್ರಮಾಣದ ಮೈಕ್ರೋನ್ಯೂಟ್ರಿಯೆಂಟ್ಸ್‌ಗಳನ್ನು ಒದಗಿಸುತ್ತದೆ. ಮಾತ್ರವಲ್ಲದೆ, ದೇಹದ ಶುಭ್ರತೆಗೆ ಸಹಕಾರಿ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ಇದು ಥೈರಾಯ್ಡ ಸಮಸ್ಯೆಗೆ ಉತ್ತಮವಾದ ಪರಿಹಾರವನ್ನು ಒದಗಿಸುತ್ತದೆ.

Advertisement

ಈ ಜ್ಯೂಸ್‌ ಕುಡಿದ ಗಂಟೆಯ ನಂತರದಲ್ಲಿ ಹಸಿವು ಆರಂಭವಾಗುತ್ತದೆ, ಈ ರೀತಿಯ ಹಸಿವು ಉಂಟಾದ ಬಳಿಕ ಫೀನೈಲ್‌ಅಲಾನಿನ್‌ ಪೋ›ಟೀನ್‌ ಅಧಿಕವಿರುವ ಸಹಜ ಆಹಾರ ಎಂದರೆ ನೆನೆಸಿದ ಕಾಳುಗಳು ಮತ್ತು ಬೀಜ ಗಳು. ಅತ್ಯುತ್ತಮವಾದ ಈ ಪೋ›ಟೀನ್‌ಗಳ ಆಗರ ಚೆನ್ನಾಗಿ ಫೀನೈಲ್‌ಅಲಾನಿನ್‌ ಅನ್ನು ದೇಹಕ್ಕೆ ನೀಡುವುದರಿಂದ ಇದು ಥೈರಾಯ್ಡ ಹಾರ್ಮೋನ್‌ಗಳ ಉತ್ಪತ್ತಿಗೆ ಬಹು ಚೆನ್ನಾಗಿ ನೆರವಾಗಿ ಥೈರಾಯ್ಡ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ನೀಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಬಹಳಷ್ಟು ಸಂಶೋಧನೆಗಳು ದೃಢಪಡಿಸಿವೆ. ಇದರೊಟ್ಟಿಗೆ ಈ ನೆನೆಸಿದ ಕಾಳುಗಳು ಅಥವಾ ಬೀಜಗಳು ಆಂಟಿಆಕ್ಸಿಡೆಂಟ್‌ಗಳ ಆಗರಗಳಾಗಿರುವುದರಿಂದ ಥೈರಾಯ್ಡ ಗ್ರಂಥಿಯ ಉರಿಯೂತವನ್ನು ಕಡಿಮೆಗೊಳಿಸಿ ಅದನ್ನು ಶಕ್ತಿಯುತಗೊಳಿಸುತ್ತದೆ ಮತ್ತು ತೊಂದರೆಯು ವೃದ್ದಿಯಾಗದಂತೆ ಹಾಗೂ ಗ್ರಂಥಿಯ ಆರೋಗ್ಯವನ್ನು ಹೆಚ್ಚಿಸುವುದರಲ್ಲಿ ನೆರವಾಗುತ್ತದೆ.

ಮಧ್ಯಾಹ್ನ ಮತ್ತು ಸಂಜೆಯ ಊಟವನ್ನು ಥ್ರಿ ಕೋರ್ಸ ಮೀಲ್‌ (ಮೂರು ಹಂತದ ಸೇವನೆ)ಯನ್ನಾಗಿಸುವುದು ಅತ್ಯಗತ್ಯವಾಗಿದೆ. ಆಹಾರವನ್ನು ಸೇವಿಸುವ ವಿಧಾನದಲ್ಲಿ ಮೊದಲು ಹಣ್ಣುಗಳು ನಂತರ ತರಕಾರಿಗಳು ತದನಂತರ ಬೇಯಿಸಿದ ಆಹಾರವನ್ನು ತಿನ್ನುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು.

ಹಣ್ಣುಗಳು ದೇಹಕ್ಕೆ ಅವಶ್ಯವಿರುವ ವಿಟಮಿನ್‌ ಮತ್ತು ಮಿನರಲ್‌ಗ‌ಳನ್ನು ದೇಹಕ್ಕೆ ಒದಗಿಸುವುದಲ್ಲದೆ ಇದರ ಜೀರ್ಣದ ಸಮಯವು ಕಡಿಮೆ ಅಂದರೆ 20 ರಿಂದ 30 ನಿಮಿಷಗಳು, ಇದರಲ್ಲಿನ ನಾರಿನ ಪ್ರಮಾಣವು ಆಹಾರ ವನ್ನು ಜಠರದಿಂದ ಮತ್ತು ಕರುಳಿನಿಂದ ಸರಾಗವಾಗಿ ಮುಂದೂಡಲು ಅನುವು ಮಾಡಿಕೊಡುತ್ತದೆ. ಹಣ್ಣಿನ ರಸವು ಹೆಚ್ಚಿನ ಜೀರ್ಣರಸಗಳ ಉತ್ಪತ್ತಿಗೆ ಕಾರಣವಾಗಿ ಆಹಾರವನ್ನು ಚೆನ್ನಾಗಿ ಜೀರ್ಣಿಸಲು ಸಹಕಾರಿಯಾಗಿದೆ.

ತರಕಾರಿಗಳು ಅಥವಾ ಇದರ ಸಲಾಡ್‌ಗಳ ಜೀರ್ಣದ ಸಮಯವು 30 ರಿಂದ 40 ನಿಮಿಷಗಳು. ಇವುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುವುದಲ್ಲದೆ ನಾರಿನಾಂಶವನ್ನು ನೀಡುತ್ತವೆ. ಇಲ್ಲಿ ತರಕಾರಿಗಳನ್ನು ಚೆನ್ನಾಗಿ ಬಾಯಿಯಲ್ಲಿ ನುರಿಸಿ ಸೇವಿಸುವುದು. ಒಂದರಿಂದ ಮೂರು ತರಕಾರಿಗಳ ಮಿಶ್ರಣವನ್ನು ತೆಗೆದುಕೊಳ್ಳುವುದು ಬಹಳ ಉಪಯುಕ್ತ ಅಭ್ಯಾಸ ಮತ್ತು ಈ ಪದ್ದತಿಯು ಥೈರಾಯ್ಡ ಸಮಸ್ಯೆಯನ್ನು ಬಹು ಬೇಗ ಹತೋಟಿಗೆ ತರುತ್ತದೆ.

ಡಾ| ವಿಂಧ್ಯ ಗಂಗಾಧರ ವರ್ಮ, ಮೆಡಿಕಲ್‌ ಡೈರೆಕ್ಟರ್‌, ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ದಾವಣಗೆರೆ -ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next