Advertisement

ದಢೇಸುಗೂರಿನ ಪುಷ್ಕರೋತ್ಸವದಲ್ಲಿ ತುಂಗಭದ್ರಾ ಆರತಿ

03:29 PM Dec 01, 2020 | Suhan S |

ಸಿಂಧನೂರು: ದಢೇಸುಗೂರಿನ ತುಂಗಭದ್ರಾ ನದಿ ದಂಡೆಯ ಶಿವನ ದೇಗುಲದ ಬಳಿ ಆಯೋಜಿಸಿರುವ 12 ದಿನಗಳ ತುಂಗಭದ್ರಾ ಪುಷ್ಕರೋತ್ಸವದಲ್ಲಿ ಸೋಮವಾರ ತುಂಗಭದ್ರಾ ಆರತಿಯುಅಪಾರ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

Advertisement

ಪ್ರತಿ ದಿನವೂ ನಡೆಯುವ ಆರತಿ ಹಾಗೂ ಪಿಂಡ ಪ್ರಧಾನ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.ಕಾರ್ತಿಕ ಸೋಮವಾರದಂದು ಕೂಡ ವಿಶೇಷವಾಗಿ ತಂಗಭದ್ರಾ ಆರತಿಯನ್ನು ವೀಕ್ಷಿಸಲು ಹೆಚ್ಚಿನ ಭಕ್ತರು ಸೇರಿದ್ದರು. ನದಿ ತಟದಲ್ಲಿ ನಕ್ಷತ್ರ ಆರತಿ, ಪಂಚ ಆರತಿ,ಜಲ ಆರತಿ, ದ್ವಿಹಾರತಿ, ತ್ರಿಹಾರತಿಗಳನ್ನು ಬೆಳಗಲಾಯಿತು. ಅರ್ಚಕರು ವೇದಘೋಷ ಮೊಳಗಿಸಿದರು.

ವಿಶೇಷ ಸನ್ಮಾನ: ತುಂಗಭದ್ರಾ ಪುಷ್ಕರದ 11ನೇ ದಿನದ ನಿಮಿತ್ತ ಪುಷ್ಕರ ಉತ್ಸವ ಸಮಿತಿ ವತಿಯಿಂದ ಹಲವರನ್ನು ಸನ್ಮಾನಿಸಲಾಯಿತು. ಎಂ.ಸಿ.ಅಂಕಯ್ಯ, ವೈ.ನರೇಂದ್ರನಾಥ, ನಲ್ಲಾ ವೆಂಕಟೇಶ್ವರರಾವ್‌, ಬಳ್ಳಾರಿಯ ಪಶುವೈದ್ಯಾಧಿ ಕಾರಿ ರಾಜಶೇಖರ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಸಹ ಪ್ರಾಧ್ಯಾಪಕಿ ಕೃಷ್ಣವೇಣಿ, ಕೋಟಿ ಬೂದಿಹಾಳ ಕ್ಯಾಂಪ್‌, ಮಲ್ಲಿನವೆಂಕಟೇಶ್ವರರಾವ್‌, ಜಿ.ಗುನ್ನೇಶ್ವರರಾವ್‌, ನೆಕ್ಕಂಟಿ ನಾಗೇಶ್ವರರಾವ್‌, ಕಮ್ಮಾವಾರಿ ಸಂಘದ ಅಧ್ಯಕ್ಷ ಮುರುಳಿಕೃಷ್ಣ, ನಿರ್ದೇಶಕತಾಳೂರಿ ರಾಮಕೃಷ್ಣ, ಖಜಾಂಚಿ ಕರಟೂರಿ ವೆಂಕಟೇಶ್ವರರಾವ್‌, ಪಿ.ಸತ್ಯಬಾಬು, ಕೆ.ಗಣಪತಿ, ಜಯರಾಂ, ಕಾನುಮೆಲ್ಲಿಕೃಷ್ಣಮೂರ್ತಿ, ವಾಸು ಪಿಡಬ್ಲ್ಯಡಿ ಕ್ಯಾಂಪ್‌, ಹನುಮರೆಡ್ಡಿ ಗೋಪಾಲಕೃಷ್ಣ, ಸಾಯಿರಾಮಕೃಷ್ಣ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಕಮ್ಮಾವಾರಿ ಸಂಘದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next