ಗಂಗಾವತಿ: ಬುಧುವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಗಂಗಾವತಿ ನಗರ ಸೇರಿದಂತೆ ತಾಲೂಕಿನಾದ್ಯಂತ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ .
ಗಂಗಾವತಿ ನಗರದಲ್ಲಿ ರಾತ್ರಿ 10 ಗಂಟೆಯಿಂದ ಆರಂಭವಾದ ಬಿರುಗಾಳಿ ಮಳೆಗೆ ಗಂಗಾವತಿಯಲ್ಲಿ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಗ್ರಾಮೀಣ ಭಾಗದಲ್ಲಿ 15 ವಿದ್ಯುತ್ ಕಂಬಗಳು, 8 ಟ್ರಾನ್ಸಫಾರ್ಮಾರಗಳು ನೆಲಕ್ಕುರುಳಿವೆ.
ತಾಲೂಕಿನ ಆನೆಗೊಂದಿ ಭಾಗದಲ್ಲಿ ಭತ್ತ ಕಟಾವು ಮಾಡಿ ಉತ್ಸವ ಜಾಗದಲ್ಲಿ ಒಣಗಿಸಲು ಹಾಕಿದ್ದ ಭತ್ತದ ರಾಶಿಗಳಿಗೆ ಮಳೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಬಾಳೆ ಬೆಳೆ ಬಿರುಗಾಳಿಗೆ ನೆಲಕ್ಕೆ ಉರುಳಿದ್ದು ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬುಧವಾರ ರಾತ್ರಿ 10 ಗಂಟೆಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿದ್ದು ಗುರುವಾರ ಬೆಳಿಗ್ಗೆ 10 ಗಂಟೆಯಾದರೂ ಇನ್ನೂ ವಿದ್ಯುತ್ ಬಂದಿಲ್ಲ. ಇದರಿಂದ ಗಂಗಾವತಿ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಕುಡಿಯುವ ನೀರು, ತೊಂದರೆಯಾಗಿದೆ.
ಗಂಗಾವತಿ ನಗರದ ಕೋರ್ಟ್ ಎದುರಿಗಿನ ಬೃಹತ್ ಮರ ಹಾಗೂ ಜಯನಗರ ಮತ್ತು ಸರೋಜನಗರ ಸೇರಿದಂತೆ ಹಲವು ಭಾಗದಲ್ಲಿ ಗಿಡಮರಗಳು ಧರೆಗೆ ಉರುಳಿವೆ .ಇದರಿಂದ ಸಂಚಾರ ಅಸ್ತವ್ಯಸ್ತವಾಗಿದ್ದು ನಗರ ಸಭೆ ಮತ್ತು ಅರಣ್ಯ ಇಲಾಖೆಯವರು ಸಮರೋಪಾದಿಯಲ್ಲಿ ಮರಗಳನ್ನು ಕಡಿತು ಸಂಚಾರಕ್ಕೆ ರಸ್ತೆಗಳನ್ನು ಮುಕ್ತ ಮಾಡುತ್ತಿದ್ದಾರೆ.
ಇದನ್ನೂ ಓದಿ: SSLC ಫಲಿತಾಂಶ ಪ್ರಕಟ; ಶೇ. 73.40 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ; ಉಡುಪಿ ಜಿಲ್ಲೆ ಪ್ರಥಮ