Advertisement

ಬಿರುಗಾಳಿ ಬದಲು ತುಂತುರು ಮಳೆ

11:27 PM May 09, 2018 | |

ನವದೆಹಲಿ: ಧೂಳು ಬಿರುಗಾಳಿಯ ನಿರೀಕ್ಷೆಯಲ್ಲಿದ್ದ ರಾಷ್ಟ್ರ ರಾಜಧಾನಿ ನವದೆಹಲಿಯ ಜನರಿಗೆ ಬುಧವಾರ ತುಂತುರು ಮಳೆಯ ದರ್ಶನವಾಗಿದೆ. ಹವಾಮಾನ ಇಲಾಖೆ ಪ್ರಕಾರ 0.8 ಮಿಲಿಮೀಟರ್‌ನಷ್ಟು ಮಳೆ ಬಿದ್ದಿದೆ. ಇದೇ ವೇಳೆ ದೆಹಲಿಯಲ್ಲಿ ಬುಧವಾರ, ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳುವ ಮೂಲಕ ಜನರನ್ನು ಭೀತಿಗೊಳಿಸಿದ್ದಕ್ಕಾಗಿ ಹಲವಾರು ಟೀಕೆಗಳು ವ್ಯಕ್ತವಾಗಿದೆ.

Advertisement

ಕರ್ನಾಟಕದಲ್ಲಿ ಮಳೆ: ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು ಹಾಗೂ ಕೇರಳದಲ್ಲಿ ಮೇ 10 ಹಾಗೂ 11ರಂದು ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಭೂಕಂಪ: ರಿಕ್ಟರ್‌ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಿಸಿರುವ ಭೂಕಂಪವು ಆಫ್ಘಾನಿಸ್ತಾನ-ತಜಕಿಸ್ತಾನ ಗಡಿ ಭಾಗದಲ್ಲಿ ಸಂಭವಿಸಿದೆ. ನವದೆಹಲಿ, ಪಂಜಾಬ್‌ ಸೇರಿ ಹಲವೆಡೆ ಕಂಪನ ಅನುಭವವಾಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next