ತುರುವೇಕೆರೆ: ತಾಲೂಕಿನ ಕುರುಬರಹಳ್ಳಿ ಬ್ಯಾಲ ಗ್ರಾಮದಲ್ಲಿಪಶುಪಾಲನಾ ಹಾಗೂ ಪಶುವೈದ್ಯ ಇಲಾಖಾ ವತಿಯಿಂ ಮಿಶ್ರತಳಿ ಕರುಗಳ ಪ್ರದರ್ಶನ ಹಾಗೂ ಬರಡು ರಾಸುಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಸುಮಾರು 120ಕ್ಕೂ ಹೆಚ್ಚು ರಾಸುಗಳು ಹಾಗೂ 25 ಮಿಶ್ರತಳಿ ಕರುಗಳು ಪಾಲ್ಗೊಂಡಿದ್ದು ಎಲ್ಲಾ ರಾಸುಗಳಿಗೆ ಜಂತು ನಾಶಕ ಔಷಧಿ ನೀಡಿ ಲವಣಾಂಶ ಮಿಶ್ರಣ ವಿತರಿಸಲಾಯಿತು. ಗೆದ್ದ ರಾಸುಗಳಿಗೆ ತಾಲೂಕು ಪಂಚಾಯಿತಿ ಸದಸ್ಯ ರವಿಕುಮಾರ್ ಹಾಗೂ ಸಂಪಿಗೆ ಹೊಸಳ್ಳಿ ಗ್ರಾಪಂ ಅಧ್ಯಕ್ಷ ನಾಗರಾಜು ಬಹುಮಾನ ವಿತರಿಸಿದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಕೆ.ನಾಗರಾಜು ಮಾತನಾಡಿ, ರೈತರು ತಮ್ಮ ರಾಸುಗಳಿಗೆ ಸಕಾಲಕ್ಕೆ ಔಷಧಿ ಹಾಗೂ ಚುಚ್ಚುಮದ್ದು ಹಾಕಿಸುವ ಮೂಲಕ ರಾಸುಗಳಿಗೆ ಹರಡುವ ಎಲ್ಲಾ ರೋಗಗಳನ್ನು ದೂರವಿಡಬಹುದಾಗಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸರ್ಕಾರದ ಸವಲತ್ತು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಬಂಗರ ಪಲ್ಕೆ ಫಾಲ್ಸ್ ದುರಂತ: ಯುವಕ ನಾಪತ್ತೆಯಾದ ಸ್ಥಳಕ್ಕೆ ದ.ಕ ಜಿಲ್ಲಾಧಿಕಾರಿ ಭೇಟಿ
ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವರಾಜ್, ಹರಳಪ್ಪ, ಚಂದ್ರಶೇಖರ್, ಶಿವರುದ್ರಯ್ಯ, ಹೇಮಾವತಿ ಶಿವಾನಂದ್, ವಿಮಲಮೋಹನ್ ಕುಮಾರ್, ಪಶುವೈದ್ಯ ಇಲಾಖಾಧಿ ಕಾರಿಗಳಾದ ಡಾ.ಮಹೇಶ್.ಎನ್, ಡಾ.ರೇವಣಸಿದ್ದಪ್ಪ, ವರ್ಷಾ ಗ್ರೂಪ್‌ನ ಚಂದ್ರಕುಮಾರ್ ಇತರರು ಇದ್ದರು.