ತುಮಕೂರು: ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನಲ್ಲಿಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆತರಬೇತಿ ಮತ್ತು ಉದ್ಯೋಗ ಘಟಕದ ವತಿಯಿಂದ ಉನ್ನತಕೌಶಲ್ಯ ಮತ್ತು ಕೇಂದ್ರಿಕೃತ ತರಬೇತಿ ನೀಡುವ ಉದ್ದೇಶದಿಂದ ಜಪಾನಿನ ಬಹುರಾಷ್ಟ್ರೀಯಕಾರ್ಪೊàರೇಟ್ ಕಂಪನಿಯಾದ ಸಿಸ್ಟಮ್ಸ್ ಕನ್ಸಲ್ಟೆಂಟ್ಸ್ ಇನ್‌ಫಾರ್ಮೆಷನ್ ಇಂಡಿಯಾ ಲಿಮಿಟೆಡ್‌ನೊಂದಿಗೆಒಡಂಬಡಿಕೆ ಒಪ್ಪಂದ ಮಾಡಿ ಕೊಳ್ಳಲಾಗಿದೆ ಎಂದುಶ್ರೀದೇವಿ ಛಾರಿಟಬಲ್ ಟ್ರಸ್ಟ್‌ನ ಮಾನವ ಸಂಪನ್ಮೂಲಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್ ತಿಳಿಸಿದರು.
ಒಡಂಬಡಿಕೆಯ ಅನ್ವಯ ಅಂತಿಮ ವರ್ಷದವಿದ್ಯಾರ್ಥಿಗಳಿಗೆ ಅಗತ್ಯವಾದ ಇಂಟರ್ನ್ಶಿಷ್ ಮತ್ತುಪ್ರಾಜೆಕ್ಟ್ ಕಾರ್ಯಗತಗೊಳಿಸಲು ಬೇಕಾದ ತಾಂತ್ರಿಕತರಬೇತಿ ನೀಡಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕಾಗಿಸುಮಾರು 464 ಗಂಟೆಗಳ ತರಬೇತಿ ಅಗತ್ಯವಿದ್ದು, ಎಸ್.ಸಿ.ಐ.ಐ. ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿಅಲೆಕ್ಸಾಂಡರ್ ವರ್ಕಿ ಮತ್ತು ಜನರಲ್ ಮ್ಯಾನೇಜರ್‌ಪ್ರಸಾದ್ ತಮ್ಮ ಸಂಸ್ಥೆಯಿಂದ ಸಂಪೂರ್ಣ ವ್ಯವಸ್ಥೆ ಹಾಗೂತರಬೇತಿ ನೀಡಲು ಒಪ್ಪಿಗೆಯಲ್ಲಿ ತಿಳಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್‌ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ 30ವಿದ್ಯಾರ್ಥಿಗಳಿಗೆ ಪ್ರಥಮ ತಂಡದಲ್ಲಿ ವೈಯುಕ್ತಿಕ ವ್ಯಾಸಂಗದಪ್ರಾಜೆಕ್ಟ್ಗಳನ್ನು ಮಾಡಲು ಅನುವು ಮಾಡಿಕೊಡಲಾಗಿದ್ದು,ಉತ್ತಮ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಎಸ್.ಸಿ.ಐ.ಐ.ಕಂಪನಿಯಲ್ಲಿ ಉದ್ಯೋಗವನ್ನು ಒದಗಿಸುವುದಾಗಿ ಎಂದುತಿಳಿಸಿದರು.
ಸೇವಾ ಕ್ಷೇತ್ರದಲ್ಲಿ ಕಾರ್ಯಾಚರಣೆ: ಜಪಾನಿನಟೋಕಿಯೋ ನಗರದಲ್ಲಿ ಕೇಂದ್ರ ಕಚೇರಿಯನ್ನು 1960ರಲ್ಲಿಪ್ರಾರಂಭಿಸಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 50 ವರ್ಷಗಳಯಶಸ್ವಿ ಚರಿತ್ರೆಯನ್ನು ಹೊಂದಿರುವ ಎಸ್.ಸಿ.ಐ.ಐ.ಕಂಪನಿಯು ರಿಸರ್ಚ್ ಮತ್ತು ಡೆವಲಪ್‌ಮೆಂಟ್, ಕೌÉಡ್‌ಕಂಪ್ಯೂಟಿಂಗ್, ಅಪ್ಲಿಕೇಷನ್ ಡೆವಲಪ್‌ಮೆಂಟ್,ಇ-ಕಾಮರ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಛಾಪುಮೂಡಿಸಿ, 2005ರಲ್ಲಿ ಭಾರತದ ಕಚೇರಿಯನ್ನು ಪ್ರಾರಂಭಿಸಿವಿಶ್ವದೆಲ್ಲೆಡೆ ಸೇವಾ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಈಗ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನೊಂದಿಗೆ ಒಡಂಬಡಿಕೆ ಒಪ್ಪಂದಮಾಡಿಕೊಂಡಿರುವುದು ಸಂತಸದ ವಿಷಯವೆಂದುಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ ತಿಳಿಸಿದರು.ತರಬೇತಿ ಮತ್ತು ಉದ್ಯೋಗ ವಿಭಾಗದ ಅಧಿಕಾರಿಯಾದಅಂಜನ್‌ಮೂರ್ತಿ, ಕಂಪ್ಯೂಟರ್‌ಸೈನ್ಸ್ ವಿಭಾಗದ ಮುಖ್ಯಸ್ಥಪೊ›.ಸಿ.ವಿ.ಷಣ್ಮುಖಸ್ವಾಮಿ, ಎಲೆಕ್ಟ್ರಾನಿಕ್ಸ್ ಮತ್ತುಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ ಪೊ›.ಐಜಾಜ್‌ಅಹಮದ್ ಷರೀಫ್, ಸಿವಿಲ್ ಇಂಜಿನೀಯರಿಂಗ್‌ವಿಭಾಗದ ಪೊ›.ಡಾ.ಸಿ.ನಾಗರಾಜ್ ಹಾಜರಿದ್ದರು.