Advertisement

5 ಜಿಲ್ಲೆ ಕೈಮುಖಂಡರ ಸಭೆಗೆ ಸಜ್ಜು

07:45 PM Jul 24, 2021 | Team Udayavani |

ತುಮಕೂರು: ಕಾಂಗ್ರೆಸ್‌ ಪಕ್ಷ ಸಂಘಟನೆಯಉದ್ದೇಶದಿಂದ ಐದು ದಿನಕರ್ನಾಟಕ ರಾಜ್ಯದಪ್ರವಾಸ ಕೈಗೊಂಡಿರುವ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಗಳಾದ ರಣದೀಪ್‌ ಸುರ್ಜೆವಾಲ್‌ ಅವರುಜು.24ರಂದು ತುಮಕೂರು ವಿಭಾಗದ ಕಾಂಗ್ರೆಸ್‌ ಮುಖಂಡರೊಂದಿಗೆ ಸಭೆ ಮತ್ತು ಸಂವಾದ ನಡೆಸಲಿರುವ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್‌ನಿಂದ ಸಕಲ ಸಿದ್ಧತೆಗಳು ನಡೆದಿದೆ.ಮುಂಬರಲಿರುವ ಜಿಪಂ, ತಾಪಂ,ವಿಧಾನಪರಿಷತ್‌ ಚುನಾವಣೆಗಳ ಜೊತಗೆಸಿಂದಗಿ ಮತ್ತು ಹಾನಗಲ್‌ ವಿಧಾನಸಭಾಕ್ಷೇತ್ರಗಳ ಉಪಚುನಾವಣೆ ಕುರಿತಂತೆ ಚರ್ಚೆನಡೆಸಲು ಜು.24ರಂದು ಬೆಳಗ್ಗೆ 9.30ರಿಂದಸಂಜೆ 6 ಗಂಟೆಯವರೆಗೆ ಎಚ್‌ಎಂಟಿಕಾರ್ಖಾನೆಯ ಪಕ್ಕದಲ್ಲಿರುವ ಹರ್ಬನ್‌ರೇಸಾರ್ಟ್‌ನಲ್ಲಿ ನಡೆಯಲಿದ್ದು, ಅದಕ್ಕಾಗಿಶುಕ್ರವಾರ ತಯಾರಿಗಳು ಪೂರ್ಣಗೊಂಡಿದೆ.ತುಮಕೂರು, ಚಿತ್ರದುರ್ಗ,ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಪಕ್ಷದಮುಖಂಡರು, ಶಾಸಕರು, ಮಾಜಿ ಶಾಸಕರು,ಮಾಜಿ ಸಂಸದರು, ಪಕ್ಷದ ಮುಂಚೂಣಿಘಟಕಗಳ ಅಧ್ಯಕ್ಷರು ಸೇರಿ 150ಕ್ಕೂ ಹೆಚ್ಚುಮುಖಂಡರ ಜೊತೆ ಪಕ್ಷ ಸಂಘಟನೆಯ ಕುರಿತು ಇಲ್ಲಿ ಚರ್ಚೆ ನಡೆಸಲಿದ್ದಾರೆ.

Advertisement

ಅಲ್ಲದೆ, ಪಕ್ಷದ ಮುಖಂಡಅಭಿಪ್ರಾಯವನ್ನು ಸಂಗ್ರಹಿಸಲು ಸಂವಾದಕಾರ್ಯಕ್ರಮವನ್ನು ನಡೆಸುವರು, ಈಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕಸಿದ್ದರಮಯ್ಯ, ಮಾಜಿ ಉಪಮುಖ್ಯಮಂತ್ರಿಡಾ.ಜಿ.ಪರಮೇಶ್ವರ್‌, ಕಾರ್ಯಾಧ್ಯಕರು, ‌Òಕೆಪಿಸಿಸಿ ಮಾಜಿ ಅಧ್ಯಕ್ಷರು, ಮಾಜಿ ಸಚಿವರು,ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್‌ಸದಸ್ಯರು, ಮಾಜಿ ಸದಸ್ಯರು, ಐದುಜಿಲ್ಲೆಗಳ ಜಿಲ್ಲಾಧ್ಯಕ್ಷರುಭಾಗವಹಿಸಲಿದ್ದಾರೆ.ಮುಖಂಡರಿಂದ ಪರಿಶೀಲನೆ:ನಗರದ ಹರ್ಬನ್‌ ರೇಸಾಟ್‌ìನಲ್ಲಿ ಜು.24ರಂದುನಡೆಯುತ್ತಿರುವ ಕಾಂಗ್ರೆಸ್‌ಮುಖಂಡರ ಸಭೆ ಹಿನ್ನೆಲೆ ಶುಕ್ರವಾರ ಕೆಪಿಸಿಸಿ ಕಾರ್ಯಾಧ್ಯಕ್ಷಸಲೀಂ ಅಹಮದ್‌ ನೇತೃತ್ವದಲ್ಲಿಕಾರ್ಯಕ್ರಮದ ಸಿದ್ಧತೆಗಳನ್ನುಪರಿಶೀಲನೆ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷಸಲೀಂ ಅಹಮದ್‌ಮಾತನಾಡಿ, ಐದುಜಿಲ್ಲೆಗಳ ಅಧ್ಯಕ್ಷರು,ಪದಾಧಿಕಾರಿಗಳು, ಹಾಲಿ,ಮಾಜಿ ಶಾಸಕರು,ಸಂಸದರು, ಮುಂಚೂಣಿಘಟಕಗಳ ಅಧ್ಯಕ್ಷರು,ಪದಾಧಿಕಾರಿಗಳುಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮಹತ್ವದ ಸಭೆ: ಮೊದಲನೇಯದಾಗಿ ಐದುಜಿಲ್ಲೆಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿತಲಾ ಒಂದು ಗಂಟೆಗಳ ಕಾಲ ರಣದೀಪ್‌ಸುಜೇìವಾಲ ಮಾತುಕತೆ ನಡೆಸಿ, ಅವರಅಹವಾಲು ಸ್ವೀಕರಿಸಿ, ಮುಂಬರುವ ಜಿಪಂ,ತಾಪಂ ಚುನಾವಣೆ, ಸ್ಥಳೀಯ ಸಂಸ್ಥೆಗಳಚುನಾವಣೆಗೆ ಹೇಗೆ ತಯಾರಿ ನಡೆಸಬೇಕುಎಂಬುದರ ಬಗ್ಗೆ ಮಾರ್ಗದರ್ಶನನೀಡಲಿದ್ದಾರೆ. ಈ ಸಭೆಯ ಮೂಲಕ ಇಡೀರಾಜ್ಯಕ್ಕೆ ಒಂದು ಸಂದೇಶವನ್ನು ಕಾಂಗ್ರೆಸ್‌ನಿಂದ ನೀಡಲಿದ್ದೇವೆ.

ಈಗಾಗಲೇ ಐದುಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ವಿವಿಧವಿಭಾಗಗಳ ಅಧ್ಯಕ್ಷರು, ಪದಾಧಿಕಾರಿಗಳುಆಂತರಿಕ ಸಭೆಗಳನ್ನು ಮಾಡಿಕೊಂಡುಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸುಜೇìವಾಲ ಅವರನ್ನು ಅದ್ಧೂರಿಯಾಗಿಸ್ವಾಗತಿಸಲು ಅಗತ್ಯ ಸಿದ್ಧತೆಗಳನ್ನುಮಾಡಿಕೊಂಡಿದ್ದಾರೆ. ಅವರೊಂದಿಗೆ ಎಲ್ಲಮುಖಂಡರು ಕೈಜೋಡಿಸಿದ್ದಾರೆ.

Advertisement

ಕರ್ನಾಟಕ ಪಾಲಿಗೆ ಇದೊಂದು ಮಹತ್ವದ ಸಭೆ ಎಂದು ತಿಳಿಸಿದರು.ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿಶಾಸಕ ಕೆ.ಎನ್‌.ರಾಜಣ್ಣ, ಡಾ.ಎಸ್‌.ರಫೀಕ್‌ಅಹಮದ್‌, ಎಸ್‌. ಷಪಿಅಹಮದ್‌,ಕೆ.ಷಡಾಕರಿ, ‌Ò ಕೆಪಿಸಿಸಿ ವಕ್ತಾರರಾದಮುರಳೀಧರ ಹಾಲಪ್ಪ, ಆರ್‌.ನಾರಾಯಣ್‌,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ,ಕ್ರಿಬೊRà ನಿರ್ದೇಶಕ ಆರ್‌.ರಾಜೇಂದ್ರ, ಇಕ್ಬಾಲ್‌ಅಹಮದ್‌, ಮಂಜುನಾಥ್‌, ಕೆಂಚೇಗೌಡ,ಬಲರಾಮ್‌, ದೇವರಾಜ್‌ ರಾಘವೇಂದ್ರಸ್ವಾಮಿ, ಶಶಿ ಹುಲಿಕುಂಟೆ, ಸೇರಿದಂತೆ ಹಲವುಸ್ಥಳೀಯ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next