ತುಮಕೂರು: ಪ್ರಸಕ್ತ ಸಾಲಿನ ಲಿಂಕ್ ಡಾಕ್ಯುಮೆಂಡ್ ಕಾರ್ಯಕ್ರಮ, 15ನೇ ಹಣಕಾಸು ಯೋಜನೆ ಸೇರಿ ವಿವಿಧ ಕಾಮಗಾರಿಗಳ540 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಜಿಪಂ ಆಡಳಿತಾಧಿಕಾರಿಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಕೇಶ್ ಸಿಂಗ್‌ಅನುಮೋದನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ನಡೆದ ವಿವಿಧ ಸ್ಥಾಯಿ ಸಮಿತಿ ಮತ್ತುಸಾಮಾನ್ಯ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು, ವಿವಿಧಇಲಾಖೆಯಡಿ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಆಡಳಿತಾತ್ಮಕಅನುಮೋದನೆ ನೀಡಲಾಗಿದೆ. ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳುಇಲಾಖಾವಾರು ರೂಪಿಸಿರುವ ಕಾರ್ಯಕ್ರಮಗಳನ್ನು ತ್ವರಿತವಾಗಿಅನುಷ್ಠಾನಗೊಳಿ ಸಬೇಕು ಎಂದರು.
ಶಾಲಾ ಮಕ್ಕಳಿಗಾಗಿ ರೂಪಿಸಿರುವ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮಕ್ಕಳಿಗೆ ನೀಡಲಾಗುವ ಉಚಿತಆಹಾರ ಧಾನ್ಯಗಳ ವಿತರಣೆಗೆ ಸೂಕ್ತ ಕ್ರಮವಹಿಸಬೇಕು. ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವಿದ್ಯಾ ರ್ಥಿಗಳುವಸತಿ ನಿಲಯಗಳನ್ನು ಉತ್ತಮವಾಗಿ ನಿರ್ವ ಹಣೆ ಮಾಡಬೇಕು.ಅಲ್ಲದೆ ಬಾಡಿಗೆಕಟ್ಟಡದಲ್ಲಿ ನಡೆ ಯುವ ಹಾಸ್ಟೆಲ್‌ಗಳ ಸ್ಥಿತಿಗತಿಗಳನ್ನುಗಮನಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆವಿಶೇಷ ತರಗತಿಗಳನ್ನು ನಡೆಸಲು ಸೂಕ್ತ ಕ್ರಮವಹಿಸ ಬೇಕೆಂದುಅಧಿಕಾರಿಗಳಿಗೆ ನಿದೇರ್ಶನ ನೀಡಿದರು.ಅಂಕಿ-ಅಂಶಕ್ರೂಢೀಕರಿಸಿ: ಜಿಲ್ಲೆಯಲ್ಲಿಕೃಷಿ ಇಲಾಖೆಯಡಿ ರೈತರಿಗೆನೀಡಲಾಗುವ ಬಿತ್ತನೆ, ಬೀಜ, ರಸಗೊಬ್ಬರ, ಬೆಳೆ ಪರಿಸ್ಥಿತಿ ಬಗ್ಗೆ ಮತ್ತುಬೆಳೆಯಲಾಗುವ ಮಿಶ್ರ ಬೆಳೆಗಳ ಬಗ್ಗೆ ತಾಲೂಕುವಾರು, ಅಂಕಿ-ಅಂಶಗಳನ್ನು ಕ್ರೂಢೀಕರಿಸಬೇಕು. ತೋಟಗಾರಿಕೆ ಇಲಾಖೆಯವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ಪ್ರೋತ್ಸಾಹ ಧನ,ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.
ಜಿಲ್ಲೆಯಲ್ಲಿ ಗ್ರಾಮೀಣಕುಡಿಯುವ ನೀರು ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿಕಾರ್ಯ, ಹೂಳೆತ್ತುವುದು, ಕಾಲುವೆ ನಿರ್ವಹಣೆ ಸೇರಿದಂತೆ ನೀರಾವರಿಗೆ ಸಂಬಂಧಿಸಿದ ಎಲ್ಲಕಾರ್ಯಕ್ರಮ ಹಾಗೂ ಮೂಲಸೌಕರ್ಯಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಲಿಂಕ್ ಡಾಕ್ಯುಮೆಂಟ್‌ನಡಿ ಲೋಕೋಪಯೋಗಿಇಲಾಖೆಗೆ 797,99 ಲಕ್ಷ ರೂ. ಅಕ್ಷರ ದಾಸೋಹ-8879,93 ಲಕ್ಷರೂ., ಸಾಮಾನ್ಯ ಶಿಕ್ಷಣ-17,397.12 ಲಕ್ಷ ರೂ., ಜನಶಿಕ್ಷಣ-60.11ಲಕ್ಷ ರೂ., ಕ್ರೀಡಾ ಮತ್ತು ಯುವಜನ ಸೇವೆಗಳು-111.69 ಲಕ್ಷರೂ., ಕಲೆ ಮತ್ತು ಸಂಸ್ಕೃತಿ 6 ಲಕ್ಷ ರೂ., ವೈದ್ಯಕೀಯ ಮತ್ತು ಜನಾರೋಗ್ಯ-5978 ಲಕ್ಷ ರೂ., ಕುಟುಂಬ ಕಲ್ಯಾಣ-3479.45 ಲಕ್ಷರೂ., ಆಯುಷ್ -593.85 ಲಕ್ಷ ರೂ., ಪರಿಶಿಷ್ಟ ಜಾತಿ ಕಲ್ಯಾಣ2919.89 ಲಕ್ಷ ರೂ., ಪರಿಶಿಷ್ಟ ಪಂಗಡ ಕಲ್ಯಾಣ-1090.74 ಲಕ್ಷರೂ. ಹಿಂದುಳಿದ ವರ್ಗಗಳ ಕಲ್ಯಾಣ-5386.26 ಲಕ್ಷ ರೂ.ಅಲ್ಪಸಂಖ್ಯಾತರ ಕಲ್ಯಾಣ 499.83 ಲಕ್ಷ ರೂ., ಉದ್ಯೋಗ ಮತ್ತುಕೌಶಲ್ಯಾಭಿವೃದ್ಧಿ-83.91 ಲಕ್ಷ ರೂ., ಮಹಿಳಾ ಮತ್ತು ಮಕ್ಕಳಅಭಿವೃದ್ಧಿ- 303,72 ಲಕ್ಷ ರೂ., ಕೃಷಿ-309.5 ಲಕ್ಷ ರೂ., ಭೂಸಾರಮತ್ತು ಜಲ ಸಂರಕ್ಷಣೆ-133.20 ಲಕ್ಷ ರೂ., ತೋಟಗಾರಿಕೆ-799.93ಲಕ್ಷ ರೂ., ಪಶುಸಂಗೋಪನೆ-533.80 ಲಕ್ಷ ರೂ., ಮೀನುಗಾರಿಕೆ-188.82 ಲಕ್ಷ ರೂ., ಅರಣ್ಯ(ಸಾಮಾಜಿಕ)-996.47 ಲಕ್ಷ ರೂ. ಸಹಕಾರ-3 ಲಕ್ಷ ರೂ.ಗಳುಹಾಗೂ ಇತರೆ ಸೇರಿದಂತೆ ಒಟ್ಟು540.58.29ಲಕ್ಷ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಲಾಯಿತು. ಜಿಪಂಸಿಇಒ ಡಾ.ಕೆ. ವಿದ್ಯಾಕುಮಾರಿ ಹಾಗೂ ವಿವಿಧ ಇಲಾಖಾಅಧಿಕಾರಿಗಳು ಇದ್ದರು.