Advertisement

ಶಿಕ್ಷಣದಿಂದ ಮಾತ್ರ ಸಮಾನತೆ ಸಮಾಜ ಸಾಧ್ಯ: ನವೀನ್

09:33 PM Jun 30, 2021 | Team Udayavani |

ತುಮಕೂರು: ಸ್ಲಂ ಜನರು ತಮ್ಮ ಮಕ್ಕಳಿಗೆ ಶಿಕ್ಷಣನೀಡಿ ಸಮಾನತೆಯ ಸಮಾಜ ನಿರ್ಮಾಣಮಾಡಲು ಸಾಧ್ಯವಾಗುತ್ತದೆ. ಸ್ಲಂಗಳ ಬಗ್ಗೆ ವ್ಯವಸ್ಥೆಇಟ್ಟುಕೊಂಡಿರುವ  ಅಭಿಪ್ರಾಯ ಬದಲಾಯಿಸಲು ನೀವು ಶಿಕ್ಷಿತರಾಗಿ ನಮ್ಮ ಮಕ್ಕಳನ್ನು ಒಳ್ಳೆಯ ಅಧಿಕಾರಿಗಳನ್ನಾಗಿ ಮಾಡಬೇಕು ಎಂದು ಸಿಪಿಐನವೀನ್‌ ತಿಳಿಸಿದರು.

Advertisement

ಸ್ವತ್ಛವಾಗಿಟ್ಟುಕೊಳ್ಳಿ: ನಗರಠಾಣೆ ವ್ಯಾಪ್ತಿಯಮಂಡಿಪೇಟೆ ಮಾರಿಯಮ್ಮ ನಗರದಲ್ಲಿ ದಲಿತರಕುಂದು-ಕೊರತೆ ಜನಸಂಪರ್ಕ ಸಭೆಯಲ್ಲಿಮಾತನಾಡಿದ ಅವರು, ಸಾಮಾಜಿಕ ವ್ಯವಸ್ಥೆಯನ್ನುಬದಲಾಯಿಸ ಬೇಕೆಂ ದರೇ ಡಾ. ಅಂಬೇಡ್ಕರ್‌ಹಾಕಿಕೊಟ್ಟಿರುವ ಶಿಕ್ಷಣದ ತಳಹದಿಯ ಮೇಲೆನಡೆಯಬೇಕು.

ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು.ಈಗ ಸ್ಮಾರ್ಟ್‌ಸಿಟಿಯಲ್ಲಿ ಇಲ್ಲಿರುವ 87ಕುಟುಂಬಗಳಿಗೆ ಅಪಾರ್ಟ್‌ಮೆಂಟ್‌ ನೀಡುತ್ತಿದ್ದು,ಅದನ್ನು ಸ್ವತ್ಛವಾಗಿಟ್ಟುಕೊಳ್ಳುವಂತೆ ತಿಳಿಸಿದರು.

ನಗರ ಪಿಎಸ್‌ಐ ಮಂಜುನಾಥ್‌ ಮಾತನಾಡಿ,ನಗರಕ್ಕೆ ಮಧ್ಯದಲ್ಲಿಯೇ ಎಸ್‌ಸಿ, ಎಸ್‌ಟಿ ಸಮುದಾಯ ಹೆಚ್ಚಿನದಾಗಿದ್ದು, ಹಾಗಾಗಿ ಮಂಡಿಪೇಟೆ,ಮಾರ್ಕೇಟ್‌ ಮತ್ತು ಬಸ್‌ ಸ್ಟಾ Âಂಡ್‌ಗಳಲ್ಲಿ ಕೆಲಸಮಾಡುತ್ತಿರುವ ಹೆಣ್ಣುಮಕ್ಕಳು ಚೌಟ್ರಿಗಳಲ್ಲಿ ಮಾಡುತ್ತಿದ್ದೀರಾ. ನಿಮಗೆ ಯಾವುದೇ ಸಮಸ್ಯೆಗಳಿದ್ದಲ್ಲಿ112ಗೆಕರೆಮಾಡಿನಮ್ಮ ಗಮನಕ್ಕೆ ತಂದರೆ ತಕ್ಷಣವೇರಕ್ಷಣೆ ನೀಡಲಾಗುವುದು ಎಂದರು.

ಸಮಾಜ ಬದಲಾವಣೆಗೆ ಸಂಘಟಿತರಾಗಿ: ಜಿಲ್ಲಾಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯಎ.ನರಸಿಂಹಮೂರ್ತಿ ಮಾತನಾಡಿ, 1989ರಲ್ಲಿಜಾರಿಗೆ ತಂದ ಎಸ್‌ಸಿ, ಎಸ್‌ಟಿ ಪ್ರತಿಬಂಧಕಕಾಯಿದೆ 2015ರಲ್ಲಿ ತಿದ್ದುಪಡಿಯಾಗಿದ್ದು,ಇದರಲ್ಲಿ ಶಿಕ್ಷೆ ಪ್ರಮಾಣ ಹಾಗೂ ಜಾತಿದೌರ್ಜನ್ಯಗಳ ಹೊಸ ಸ್ವರೂಪಗಳನ್ನು ತಿದ್ದುಪಡಿಮಾಡಲಾಗಿದೆ. ಇದರ ಬಗ್ಗೆ ಎಚ್ಚರವಹಿಸಿ ಸ್ವಾತಂತ್ರ,ಸಮಾನತೆ ಹಾಗೂ ಸಮಾಜ ಬದಲಾವಣೆಗೆ ನಾವುಸಂಘಟಿತರಾಗಬೇಕು. ಎ

Advertisement

ದುರಾಗುವ ಕೋವಿಡ್‌3ನೇ ಅಲೆಯಲ್ಲಿ ಮಕ್ಕಳನ್ನು ರಕ್ಷಿಸಬೇಕು ಎಂದರು.ಮುಖಂಡ ಕಣ್ಣನ್‌, ಮುರುಗ, ಕೃಷ್ಣ,ಗೋವಿಂದಸ್ವಾಮಿ, ಮಾದವನ್‌, ಕಾಶಿ, ರಾಜ,ಚಕ್ರಪಾಣಿ ಹಾಗೂ ನಗರಠಾಣೆಯ ಸಿಬ್ಬಂದಿಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next