Advertisement
ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ.ಕಮಲ ಮಾತನಾಡಿ, ಅಂಗನವಾಡಿ ಕೇಂದ್ರ ಗಳಲ್ಲಿಯೇ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ರಾಜ್ಯದ ಹಲವು ಕಡೆ ಮೂರ್‍ನಾಲ್ಕು ತಿಂಗಳಾದರೂ ಇನ್ನೂ ಗೌರವಧನ ನೀಡಿಲ್ಲ. ಪ್ರತಿ ತಿಂಗಳು ಗೌರವಧನ ಪಾವತಿಯಾಗುವಂತೆ ನೋಡಿ ಕೊಳ್ಳಬೇಕು ಎಂದು ಆಗ್ರಹಿಸಿದರು.
Related Articles
Advertisement
ಹಣ ಜಮೆ ತಡ:ಅಂಗನವಾಡಿ ಸಹಾಯಕಿ ಕಾರ್ಯ ಕರ್ತೆಗಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ, ಭೌಗೋಳಿಕ ವಿಸ್ತೀರ್ಣದ ಮಿತಿ ಸಡಿಲಿಸ ಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಹಿಂದೆ ಗ್ಯಾಸ್ ಸಿಲಿಂಡರ್ ಹಣವನ್ನು ನಮ್ಮ ಖಾತೆಗೆ ಒಂದೇ ಬಾರಿ ಜಮಾ ಮಾಡಲಾಗುತಿತ್ತು. ಗ್ಯಾಸ್ ಸಿಲಿಂಡರ್‌ಗೆ ಕಾರ್ಯಕರ್ತೆಯು ಹಣ ನೀಡಿ ಪಡೆದ ನಂತರ, ಬಿಲ್ಲುಗಳನ್ನು ಕಚೇರಿಗೆ ಸಲ್ಲಿಸಬೇಕು. ನಂತರ ಆರು ತಿಂಗಳಿಗೋ ಅಥವಾ ವರ್ಷದ ನಂತರ ಕಾರ್ಯಕರ್ತೆ ಖಾತೆ ಹಣ ಜಮೆ ಮಾಡಲಾಗುತ್ತಿದೆ ಎಂದು ಬೇಸರಿಸಿದರು.
ಮಾನಸಿಕ ಹಿಂಸೆ ನಿಲ್ಲಿಸಿ: ಮೊಟ್ಟೆ, ತರಕಾರಿ ಬಿಲ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಕೆಲವು ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯರಿಗೆ ನೀಡುತ್ತಿರುವ ಕಿರುಕುಳ, ಮಾನಸಿಕ ಹಿಂಸೆ ನಿಲ್ಲಬೇಕು, ಹಾಗೂ ಭಾಗ್ಯಲಕ್ಷ್ಮೀ ಅರ್ಜಿ ಪಡೆಯುವಾಗ, ಬಾಂಡ್ ನೀಡುವಾಗ ಮತ್ತು ಸಹಾಯಕಿಯರಿಗೆ ಮುಂಬಡ್ತಿ, ಅನುಕಂಪದ ಆಧಾರದಲ್ಲಿ ಆಯ್ಕೆ ಯಾದವರ ಹತ್ತಿರ ಹಣ ವಸೂಲಿ, ನ್ಯೂಟ್ರಿಕ್ಲಬ್ ನಡೆಸುತ್ತಿರುವವರ ಮೇಲೆ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸಂಘದ ಖಜಾಂಚಿ ಬಿ.ಎಸ್.ಅನುಸೂಯ ಮಾತನಾಡಿ, ಅಂಗನವಾಡಿ ನೌಕರರು ಇಲಾಖೆ ಕೆಲಸಗಳಿಗೆ ಓಡಾಡುವಾಗ ಆಗುವ ಅಪ ಘಾತಗಳಿಗೆ ಪರಿಹಾರ ನೀಡಬೇಕು. ಮಾತೃಪೂರ್ಣ ಯೋಜನೆಗೆ ಬೇಕಾಗುವ ಅಗತ್ಯ ಪಾತ್ರೆ, ಡಬಲ್ ಸಿಲಿಂಡರ್ ಮತ್ತು ದಾಖಲಾತಿ ಪುಸ್ತಕ ತುರ್ತಾಗಿ ಒದಗಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸಾವಿರಾರು ಅಂಗನವಾಡಿ ಕಾರ್ಯಕರ್ತೆ ಯರು, ಸಹಾಯಕಿಯರು ಭಾಗವಹಿಸಿದ್ದರು.