Advertisement

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

07:53 PM Jan 05, 2025 | Team Udayavani |

ಮೂಲ್ಕಿ: ಕಳೆದ 24 ವರ್ಷಗಳ ಹಿಂದೆ ಮೂಲ್ಕಿ ಠಾಣಾ ವ್ಯಾಪ್ತಿಯ ಕಿಲ್ಪಾಡಿಯಲ್ಲಿ ಅಕ್ರಮ ಪ್ರವೇಶ ಮತ್ತು ಜೀವಬೆದರಿಕೆ ಹಾಗೂ ಸೊತ್ತು ನಾಶ ಆರೋಪದಡಿ ನ್ಯಾಯಲಾಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಿಲ್ಪಾಡಿ ಗ್ರಾಮದ ನಿವಾಸಿ ಕಿಶೋರ್‌ ಕುಮಾರ್‌ನನ್ನು ಮೂಲ್ಕಿ ಪೊಲೀಸರು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

2000ರ ಮಾ. 22ರಂದು ಆರೋಪಿ ಕಿಲ್ಪಾಡಿ ಗ್ರಾಮದ ಕಲ್ಲಗುಡ್ಡೆಯಲ್ಲಿ ಅಕ್ರಮವಾಗಿ ಸುಧಾಕರ ಭಂಡಾರಿ ಅವರ ಜಾಗದ ಮರಗಳನ್ನು ಕಡಿದ ಆರೋಪದಲ್ಲಿ ನ್ಯಾಯಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಜ. 3ರಂದು ಮೂಲ್ಕಿ ಎಸ್‌.ಐ. ಅನಿತಾ ಅವರು ಖಚಿತ ಮಾಹಿತಿ ಪಡೆದು ಸಿಬಂದಿ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next