ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿರುವ ಕಾರಣ ಪರಿಸರ ಮಲಿನಗೊಳ್ಳುತ್ತಿದೆ.
Advertisement
ಪೈಚಾರ್‌ನಿಂದ ಸೋಣಂಗೇರಿ – ಬೆಳ್ಳಾರೆ ರಸ್ತೆಯಲ್ಲಿ ಸಾಗಿದರೆ ಬೇಂಗಮಲೆ ಸಮೀಪ ಈ ರಸ್ತೆ ಬೆಳ್ಳಾರೆ ಮತ್ತುಚೊಕ್ಕಾಡಿಗೆ ಕವಲೊಡೆಯುತ್ತದೆ. ಈ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ಕೋಳಿ ತ್ಯಾಜ್ಯ, ಊಟಕ್ಕೆ ಬಳಸಿದ
ತಟ್ಟೆಗಳು, ಹಳಸಲು ಆಹಾರ, ಕೊಳೆತ ತರಕಾರಿ ರಾಶಿ ಹಾಕಿದ್ದರಿಂದ ಗಬ್ಬು ವಾಸನೆ ಬೀರುತ್ತಿದೆ. ರಸ್ತೆಯಲ್ಲಿ ದಿನನಿತ್ಯ
ಸಾವಿರಾರು ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಪ್ರಯಾಣಿಸಬೇಕಾಗಿದೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ.
ಅನೇಕ ವರ್ಷಗಳಿಂದ ಕಿಡಿಗೇಡಿಗಳು ಇಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ.
ಪಂಚಾಯತ್ ಸದಸ್ಯರೇ ಒಬ್ಬ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆತನಿಂದ ಗ್ರಾಮ ಪಂಚಾಯತ್‌ಗೆ ದಂಡ ಕಟ್ಟಿಸಿಕೊಂಡರೂ ಯಾವುದೇ ಪರಿಣಾಮ ಬೀರಿಲ್ಲ. ಕಸ ಎಸೆಯುವ ಕಿಡಿಗೇಡಿ ಕೃತ್ಯ ಮುಂದುವರಿದಿದೆ. ಯಾರ ಕೃತ್ಯ?
ಈ ತ್ಯಾಜ್ಯ ಎಸೆಯುವ ಪ್ರದೇಶ ಜಾಲ್ಸೂರು ಮತ್ತು ಐವರ್ನಾಡು ಗ್ರಾಮ ಪಂಚಾಯತ್‌ನ ಗಡಿಭಾಗವಾಗಿದೆ. ಐವ
ರ್ನಾಡು ಗ್ರಾ.ಪಂ.ಗೆ ಸೇರಿದ ಭಾಗದಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚು. ಇಲ್ಲಿ ಕೋಳಿ ತ್ಯಾಜ್ಯವೇ ಜಾಸ್ತಿ ಪ್ರಮಾಣದಲ್ಲಿರುವ
ಕಾರಣ ಕೋಳಿ ಸಾಗಾಟ ನಡೆಸುವವರ ಮೇಲೆಯೇ ಸ್ಥಳೀಯರಿಗೆ ಹೆಚ್ಚು ಅನುಮಾನವಿದೆ.
Related Articles
ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಬೇಕೆಂದು ನಾವು ತುಂಬಾ ಪ್ರಯತ್ನ ಮಾಡುತ್ತಿದ್ದೇವೆ. ಒಂದು ತಿಂಗಳ ಹಿಂದೆ ಸಾಮೂಹಿಕ ಸ್ವತ್ಛತೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ತ್ಯಾಜ್ಯ ಎಸೆಯುವವರಿಗೆ ದೇವರೇ ಒಳ್ಳೆಯ ಬುದ್ಧಿ ಕೊಟ್ಟು ತ್ಯಾಜ್ಯ ಎಸೆಯದಂತೆ ಮಾಡಲಿ.
– ರಾಜೀವಿ ಪರ್ಲಿಕಜೆ,
ಐವರ್ನಾಡು ಗ್ರಾಪಂ ಅಧ್ಯಕ್ಷರು
Advertisement
ನಾಗರಾಜ್ ಎನ್.ಕೆ. ಕಡಬ