Advertisement

ಧರ್ಮ ಒಡೆಯುವರನ್ನು ಹೊರ ಹಾಕಿ

03:22 PM Feb 05, 2018 | |

ಬಸವನಬಾಗೇವಾಡಿ: ವೀರಶೈವ ಲಿಂಗಾಯತ ಬೇರೆ-ಬೇರೆ ಅಲ್ಲ. ಆದರೆ ಅದರ ಇಬ್ಟಾಗಕ್ಕೆ ಕೆಲವರು ನಿಂತುಕೊಂಡಿದ್ದಾರೆ. ಇದಕ್ಕೆ ಸಮಾಜ ಸೊಪ್ಪು ಹಾಕದೆಯೇ ಧರ್ಮ ಒಡೆಯುವವರನ್ನೆ ಸಮಾಜದಿಂದ ಹೊರ ಹಾಕುವ ಕಾರ್ಯ ಮಾಡಬೇಕಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

Advertisement

ಯಾಳವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಭ್ರಮರಾಂಭಾ ಮಲ್ಲಿಕಾರ್ಜುನ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದ್ವಾರಬಾಗಿಲು,ದ್ವೀಪಸ್ತಂಭ, ಪಾದಗಟ್ಟಿ ಹಾಗೂ ಭವ್ಯರಥದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಣ್ಣನ ವಚನಗಳನ್ನು ಸಂಪೂರ್ಣ ಅಧ್ಯಯನ ಮಾಡದೆಯೇ ತಮ್ಮ ಅನುಕೂಲಕ್ಕೆ ಬೇಕಾದಂತಹ ಕೆಲವು
ವಚನ ಆಯ್ಕೆ ಮಾಡಿಕೊಂಡು ಧರ್ಮ ಒಡೆಯುವ ಕಾರ್ಯಕ್ಕೆ ಕೆಲವರು ಕೈ ಹಾಕಿದ್ದು ಸರಿಯಲ್ಲ. ಶರಣರು ಮೂರ್ತಿ ಪೂಜೆಯನ್ನು ಬೇಡ ಎಂದಿಲ್ಲ. ಆದರೆ ಇಂದು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮೂರ್ತಿ ಪೂಜೆ ಮಾಡಬೇಡಿ, ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ಇದಕ್ಕೆ ಜನರು ಜಾಗೃತಿಯಿಂದ ಹೆಜ್ಜೆ ಇಡಬೇಕಾಗಿದೆ ಎಂದರು.

ಕರಿಭಂಟನಾಳ ಹಿರೇಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಲಿಂಗದಾರವಿಲ್ಲದ ಕೆಲ ಸಂಶೋಧಕರು ವೀರಶೈವ-ಲಿಂಗಾಯತ ಬೇರೆ-ಬೇರೆ ಎಂದು ಹೇಳುತ್ತಿದ್ದಾರೆ. ಆದರೆ ವೀರಶೈವ-ಲಿಂಗಾಯತ ಒಂದೆ ನಾಣ್ಯದ ಎರಡು ಮುಖಗಳಿದಂತೆ ಎಂದರು.

ಬಾಗಲಕೋಟೆಯ ರಾಮಾರೂಢ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರಂತ ಆದರ್ಶ ಅನುಕರಣೆ ಮಾಡಿದರೆ ಬದುಕಿನಲ್ಲಿ ಸಾಧಕನಾಗಲೂ ಸಾಧ್ಯವಿದೆ ಎಂದರು. ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ, ರವಿ ಕೊಟ್ರಗಸ್ತಿ ಮಾತನಾಡಿದರು. ಆಲಮೇಲದ ಗುರುಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಯಾಳವಾರದ ಕಾಶೀನಾಥ ಸ್ವಾಮೀಜಿ ವೇದಿಕೆಯಲ್ಲಿದ್ದರು.

Advertisement

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಬಿ.ಎಸ್‌. ಪಾಟೀಲ (ಯಾಳಗಿ), ರಾಜುಗೌಡ ನಾಡಗೌಡ್ರ, ಸಾಹೇಬಗೌಡ ದೊಡಮನಿ, ಆನಂದಗೌಡ ದೊಡಮನಿ, ಎಸ್‌.ಎಸ್‌. ಛಾಯಾಗೋಳ, ಬಾಳಾಸಾಹೇಬಗೌಡ ಪಾಟೀಲ, ದೊಡ್ಡಪ್ಪಗೌಡ ಹಾದಿಮನಿ, ಸುರೇಶಗೌಡ ಪಾಟೀಲ, ಎಂ.ಸಿ. ನ್ಯಾಮಣ್ಣವರ, ಪಿ.ಎಸ್‌. ಪಾಟೀಲ, ಬಾಪುಗೌಡ ಪಾಟೀಲ, ನಾನಾಗೌಡ ಹಾದಿಮನಿ, ಗುರಲಿಂಗಪ್ಪ ಮಾನ್ವಿ, ಗದಗಯ್ಯ ಹಿರೇಮಠ, ಅರವಿಂದ ನಾಗರಾಳ, ಅಪ್ಪಣಗೌಡ ಮೂಲಿಮನಿ, ಸಿದ್ದರಾಮ ಜಯವಾಡಗಿ, ಸೋಮನಗೌಡ ಕೇಶಟ್ಟಿ ಇದ್ದರು.

ಶೇಷಾಚಲ ಹವಾಲ್ದಾರ್‌ ಸ್ವಾಗತಿಸಿದರು. ಬಿ.ವೈ. ಭಂಟನೂರ, ಎಸ್‌.ಎಸ್‌. ಥಬ್ಬಣ್ಣವರ ನಿರೂಪಿಸಿದರು.
ಐ.ಬಿ. ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next