Advertisement
ಶಿವರಾತ್ರಿ ಉಪವಾಸ ಮತ್ತು ಜಾಗರಣೆಯ ದಿನ. ಹೀಗಾಗಿ ಶಿವ ದೇವಾಲಯಗಳು ಸೇರಿದಂತೆ ಶಿವನನ್ನು ಪ್ರತಿಷ್ಠಾಪಿಸಿರುವ ದೇವಾಲಯಗಳಲಿ ಸೋಮವಾರ ರಾತ್ರಿ ಅಭಿಷೇಕ, ಪೂಜೆ ಮುಂತಾದ ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಂಡಿವೆ.
ರಾಮನಗರದಲ್ಲಿ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಪಶ್ಚಿಮಾಭಿಮುಖೀಯಾಗಿ ಅರ್ಕಾವತಿ ನದಿ ದಂಡೆಯ ಮೇಲೆ ನೆಲೆಸಿರುವ ಶ್ರೀ ಅರ್ಕೇಶ್ವರ ಸ್ವಾಮಿಯ ಸನ್ನಿದಿಯನ್ನು ಕಾಶಿಯಲ್ಲಿ ವಿಶ್ವೇಶ್ವರನಾಥನನ್ನು ದರ್ಶಿಸಿದಷ್ಟೇ ಭಾಗ್ಯ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ಈಶ್ವರನ ದರ್ಶನ ಪಡೆದು ಕೃತಾರ್ಥರಾದರು. ನಗರದ ಅರಳೇಪೇಟೆಯಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯ, ಎಂ.ಜಿ.ರಸ್ತೆಯ ಶ್ರೀ ಬಸವೇಶ್ವರ ದೇವಾಲಯ, ಐಜೂರಿನ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ತಾಲೂಕಿನ ವಿವಿದೆಡೆ ಇರುವ ಶಿವ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ತಾಲೂಕಿನ ಅವ್ವೆàರಹಳ್ಳಿಯ ಎಸ್ ಆರ್ ಎಸ್ ಬೆಟ್ಟದಲ್ಲಿಯೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಭಕ್ತರಿಂದಲೇ ಶಿವನಿಗೆ ಬಿಲ್ವಾರ್ಚನೆ: ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ರುವ ಶ್ರೀ ಜಲಕಂಠೇಶ್ವರ ಸ್ವಾಮಿಗೆ ಭಕ್ತರೇ ಸ್ವಯಂ ಬಿಲ್ವಾರ್ಚನೆ ನೆರೆವೇರಿಸುವ ಅವಕಾಶವನ್ನು ಶ್ರೀ ವಾಸವಿ ಮಹಿಳಾ ಸಂಘ ಕಲ್ಪಿಸಿತ್ತು.