Advertisement

ಮುಖ ಮೈಥುನದಿಂದ ಗಂಟಲು ಕ್ಯಾನ್ಸರ್‌!

07:57 AM Apr 29, 2023 | Team Udayavani |

ವಾಷಿಂಗ್ಟನ್‌: ಕಳೆದ ಎರಡು ದಶಕಗಳಿಂದ ಪಶ್ಚಿಮ ರಾಷ್ಟ್ರಗಳಲ್ಲಿ ಗಂಟಲು ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿವೆ. ಈ ಸಂಖ್ಯೆ ಅಧಿಕವಾಗಲು ಮುಖ ಮೈಥುನ (ಓರಲ್‌ ಸೆಕ್ಸ್‌) ಕೂಡ ಪ್ರಮುಖ ಕಾರಣ ಎಂದು ವರದಿಗಳು ತಿಳಿಸಿವೆ. ಗಂಟಲಗ್ರಂಥಿ ಮತ್ತು ಗಂಟಲು ಭಾಗದಲ್ಲಿ ಒರೊಫ್ಯಾರಂಜಿಯಲ್‌ ಕ್ಯಾನ್ಸರ್‌ ಆಗುತ್ತದೆ. ಈ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಹ್ಯೂಮನ್‌ ಪ್ಯಾಪಿಲೋಮ ವೈರಸ್‌(ಎಚ್‌ಪಿವಿ). ಶೇ.70ರಷ್ಟು ಗಂಟಲು ಕ್ಯಾನ್ಸರ್‌ ಪ್ರಕರಣಗಳಲ್ಲಿ ಎಚ್‌ಪಿವಿ ಪತ್ತೆಯಾಗಿದೆ.

Advertisement

ಎಚ್‌ಪಿವಿ ಬಾಯಿ ಮತ್ತು ಗಂಟಲು ಭಾಗದ ಸೋಂಕಿಗೆ ಕಾರಣವಾಗುತ್ತದೆ ಮತ್ತು ಇದರಿಂದ ಕ್ಯಾನ್ಸರ್‌ ಬೆಳೆಯುತ್ತದೆ. ಎಚ್‌ಪಿವಿ ಲೈಂಗಿಕವಾಗಿ ಹರಡುತ್ತದೆ. ಮುಖ ಮೈಥುನ ಎಚ್‌ಪಿವಿ ಸೋಂಕಿಗೆ ಕಾರಣವಾಗುತ್ತದೆ. ಆರು ಅಥವಾ ಅದಕ್ಕೂ ಹೆಚ್ಚು ಸಂಗಾತಿಗಳೊಂದಿಗೆ ಮುಖ ಮೈಥುನದಲ್ಲಿ ತೊಡುವವರಲ್ಲಿ ಗಂಟಲು ಕ್ಯಾನ್ಸರ್‌ನ ಸಾಧ್ಯತೆ 8.5 ಪಟ್ಟು ಅಧಿಕ. ಇಂದಿನ ಕಾಲದಲ್ಲಿ ಮುಖಮೈಥುನದಲ್ಲಿ ತೊಡಗುವ ಹದಿಹರೆಯದವರ ಸಂಖ್ಯೆ ಹೆಚ್ಚುತ್ತಿದೆ. ಮುಖಮೈಥುನದಿಂದ ಲೈಂಗಿಕ ಸೋಂಕು ಹರಡುವಿಕೆಯ ಅಪಾಯ ಹೆಚ್ಚಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next