Advertisement
ನೀವು ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ “ಡ್ಯುಯಲ್’ ಎಂಬ ಚಿತ್ರ ನೋಡಿರಬಹುದು ಅಥವಾ ಕೇಳಿರಬಹುದು. ಅದರಲ್ಲಿ ನಾಯಕನನ್ನು ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ಅದೇ ತರಹ ಆಟ ಆಡಿಸುತ್ತಿರುತ್ತಾನೆ. ಹೈವೇನಲ್ಲಿ ನಾಯಕ ಕಾರು ಓಡಿಸಿಕೊಂಡು ಪರ ಊರಿಗೆ ಹೋಗುವ ಸಂದರ್ಭದಲ್ಲಿ ಅವನನ್ನು ಬೆನ್ನಟ್ಟುವ ಟ್ರಕ್ ಡ್ರೈವರ್ ಒಬ್ಬ, ವಿಚಿತ್ರವಾಗಿ ಆಟ ಆಡಿಸುತ್ತಾನೆ. ನಾಯಕನಿಗೆ ದಾರಿ ಬಿಡದೆ, ಬಿಟ್ಟರೂ ಅವನ ಬೆನ್ನುಬಿಡದೆ ವಿಲಕ್ಷಣವಾಗಿ ಸೇಡು ತೀರಿಸಿಕೊಳ್ಳುತ್ತಾನೆ.
Related Articles
Advertisement
ತುಂಟತನ, ಹತಾಶೆ, ನೋವು ಎಲ್ಲವನ್ನೂ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಹಾಗೆ ನೋಡಿದರೆ, ಚಿತ್ರದಲ್ಲಿ ಪಾತ್ರಗಳು ಕಡಿಮೆಯೇ, ಆಶಿಕಾ, ಚಿಕ್ಕಣ್ಣ, ರವಿಶಂಕರ್, ಕುರಿ ಪ್ರತಾಪ್, ಸಾಧು ಕೋಕಿಲ ಹೀಗೆ ಕೆಲವೇ ಕೆಲವು ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರೇಕ್ಷಕರನ್ನು ಸಖತ್ ನಗಿಸುವುದಕ್ಕೆ ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಇದ್ದರೆ, ಅಳಿಸುವುದಕ್ಕೆ ರವಿಶಂಕರ್ ಬರುತ್ತಾರೆ.
ಇನ್ನು ಆಶಿಕಾ ಬರೀ ಗ್ಲಾಮರ್ ಗೊಂಬೆಯಷ್ಟೇ ಅಲ್ಲ, ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಬರೀ ಕಲಾವಿದರಷ್ಟೇ ಅಲ್ಲ, ತಂತ್ರಜ್ಞರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದ ಹೈಲೈಟ್ ಎಂದರೆ ಅದು ಸುಧಾಕರ್ ರಾಜ್ ಅವರ ಛಾಯಾಗ್ರಹಣ. ಪ್ರಯಾಣದ ಹಿನ್ನೆಲೆಯಲ್ಲಿ ಸಾಗುವ ಕಥೆಯಾದ್ದರಿಂದ ಸುಧಾಕರ್ ಕೆಲಸ ಹೆಚ್ಚು.
ಆ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ ಸುಧಾಕರ್. ಅರ್ಜುನ್ ಜನ್ಯ ಹಾಡುಗಳು, ಕೆ.ಎಂ. ಪ್ರಕಾಶ್ ಅವರ ಸಂಕಲನ ಮತ್ತು ವೇಗ, ಅನಿಲ್ ಅವರ ಸಂಭಾಷಣೆ ಎಲ್ಲವೂ ಗಮನಸಳೆಯುತ್ತದೆ. ಶರಣ್ ಬರೀ ನಟನಾಗಿಯಷ್ಟೇ ಅಲ್ಲ, ಡ್ಯಾನ್ಸ್‌ನಲ್ಲೂ ಗಮನಸೆಳೆಯುತ್ತಾರೆ. ಇನ್ನು ಚಿತ್ರಕ್ಕೆ ಹಾಕಿರುವ ಸೆಟ್‌ಗಳು, ನೃತ್ಯ ನಿರ್ದೇಶನ, ಕಾಸ್ಟೂಮ್‌ಗಳು … ಒಳ್ಳೆಯ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತದೆ.
ಚಿತ್ರ: ರ್‍ಯಾಂಬೋ 2ನಿರ್ದೇಶನ: ಅನಿಲ್ ಕುಮಾರ್
ನಿರ್ಮಾಣ: ಶರಣ್ ಮತ್ತು ಅಟ್ಲಾಂಟ ನಾಗೇಂದ್ರ
ತಾರಾಗಣ: ಶರಣ್, ಆಶಿಕಾ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್, ಸಾಧು ಕೋಕಿಲ ಮುಂತಾದವರು * ಚೇತನ್ ನಾಡಿಗೇರ್