Advertisement

ಮುಗನೂರು ತ್ರಿವಳಿ ಕೊಲೆ: ಐವರ ಬಂಧನ

12:32 PM Jul 18, 2017 | Team Udayavani |

ಸೇಡಂ: ತಾಲೂಕಿನ ಮುಗನೂರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ತ್ರಿವಳಿ ಕೊಲೆ ಪ್ರಕರಣ ಸೋಮವಾರ ತೀವ್ರ ಸ್ವರೂಪ ಪಡೆದಿತ್ತು.

Advertisement

ಸೋಮವಾರ ಮಧ್ಯಾಹ್ನ ಮೃತರ ದೇಹ ಪಟ್ಟಣಕ್ಕೆ ಆಗಮಿಸುತ್ತಲೇ ಕಲಬುರಗಿ-ಚಿಂಚೋಳಿ ಕ್ರಾಸ್‌ ಬಳಿ ಜಮಾಯಿಸಿದ್ದ ಕೋಲಿ ಸಮಾಜದ ನೂರಾರು ಜನ ಗಂಟೆಗಟ್ಟಲೇ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕೊಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು. ಕೊಲೆಗೆ ಪ್ರೋತ್ಸಾಹಿಸಿದವರನ್ನು ಗಡಿಪಾರು ಮಾಡಬೇಕು ಮತ್ತು ಮರಣದಂಡನೆ ವಿಧಿ ಸಬೇಕು. ಕೊಲೆಯಾದ ಕುಟುಂಬಕ್ಕೆ ತಲಾ 25 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಾಜಿ ಜಿಪಂ ಸದಸ್ಯೆ ಶೋಭಾ ಬಾಣಿ ಮಾತನಾಡಿ, ಕೊಲೆಗಡುಕರು ಮುಗನೂರ ಈ ಪರಿಸರದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದರು. ಆದರೂ ಪೊಲೀಸರು ಗಮನಹರಿಸಿಲ್ಲ. ಇಂತಹ ಚಟುವಟಿಕೆ ಮುಂದೆ ದೊಡ್ಡ ಪ್ರಕರಣವಾಗಬಲ್ಲವು ಎನ್ನುವ ಪರಿವೆಯೂ ಅವರಿಗಿರಲಿಲ್ಲವೇ? ಕೂಡಲೇ ಅನ್ಯಾಯ ಮಾಡಿದವರಿಗೆ ಮರಣದಂಡನೆ ವಿಧಿಸಬೇಕು, ಮೃತರ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು
ಎಚ್ಚರಿಸಿದರು.

ಕೋಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡ ಶರಣಪ್ಪ
ತಳವಾರ, ಕೋಲಿ ಸಮಾಜ ಜಿಲ್ಲಾಧ್ಯಕ್ಷ ರವಿರಾಜ ಕೊರವಿ, ಯಾದಗಿರಿ ಅಧ್ಯಕ್ಷ ಉಮೇಶ ಮುದ್ನಾಳ, ಮುಕ್ರಂಖಾನ್‌, ಮಾಜಿ ಜಿಪಂ ಸದಸ್ಯ ಶ್ರೀನಾಥ ಪಿಲ್ಲಿ, ರಾಜಗೋಪಾಲರೆಡ್ಡಿ, ಸಿದ್ದು ಬಾನಾರ, ಜಗನ್ನಾಥ ಪಾಟೀಲ, ತಾಲೂಕಾಧ್ಯಕ್ಷ ಭೀಮರಾವ ಅಳ್ಳೊಳ್ಳಿ, ಯುವ ಸೇನೆ ಅಧ್ಯಕ್ಷ ರುದ್ರು ಪಿಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಬಿಗಿ ಬಂದೋಬಸ್ತ್ 
ಮುಗನೂರ ತ್ರಿವಳಿ ಕೊಲೆ ಪ್ರಕರಣದಿಂದಾಗಿ ಸೋಮವಾರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಐಜಿಪಿ ಅಲೋಕಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಎಸ್‌ಪಿ ಶಶಿಕುಮಾರ ಗ್ರಾಮದಲ್ಲೇ ಬಿಡಾರ ಹೂಡಿದ್ದಾರೆ. ಸಿಪಿಐ ಪಂಚಾಕ್ಷರಿ ಸಾಲಿಮಠ, ತಮ್ಮಾರಾಯ ಪಾಟೀಲ, ಪ್ರಭು ದುಧಗಿ, ಪಿಎಸ್‌ಐಗಳಾದ ನಟರಾಜ ಲಾಡೆ, ಪಟೇಲ,
ಸಂತೋಷ ರಾಠೊಡ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next