Advertisement

ಯಾದಗಿರಿ: ಕ್ವಾರಂಟೈನ್ ನಲ್ಲಿದ್ದ ಮೂವರು ಕಾರ್ಮಿಕರಿಗೆ ಕೋವಿಡ್-19 ಸೋಂಕು ದೃಢ

12:53 PM May 17, 2020 | keerthan |

ಯಾದಗಿರಿ: ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಮೂವರು ಕಾರ್ಮಿಕರಿಗೆ ಕೋವಿಡ್-19 ದೃಢಪಟ್ಟಿದೆ.

Advertisement

ಈಗ ಥಾಣೆಯಿಂದ ಬಂದ ಇಬ್ಬರಿಗೆ ಮತ್ತು ಮುಂಬೈನಿಂದ ಓರ್ವನಿಗೆ ಸೋಂಕು ದೃಢವಾಗಿದೆ. ಥಾಣೆಯಿಂದ ಬಂದ 30 ವರ್ಷ ಮತ್ತು 34 ವರ್ಷದ ಇಬ್ಬರು ಪುರುಷರು ಮತ್ತು ಮುಂಬೈನಿಂದ ಬಂದ 22 ವರ್ಷದ ಯುವಕನಿಗೆ ಸೋಂಕು ತಾಗಿರುವುದು ದೃಢವಾಗಿದೆ.

ಕಳೆದ ಮೇ.12ರಂದು ಮೊದಲ ಬಾರಿಗೆ ಸುರಪುರ ನಗರಕ್ಕೆ ಗುಜರಾತ್ ನ ಅಹಮದಾಬಾದ್ ನಿಂದ ಆಗಮಿಸಿದ ದಂಪತಿ 33 ವರ್ಷದ ಮಹಿಳೆ P- 867, 38 ವರ್ಷದ ಪುರುಷ P- 868 ಸೋಂಕು ಕಾಣಿಸಿತ್ತು.

ಹಸಿರು ಪಟ್ಟಿಯಲ್ಲಿದ್ದ ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರ, ಬೆಂಗಳೂರಿನಿಂದ ಕಾರ್ಮಿಕರು ಆಗಮಿಸಿದ್ದು ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದ್ದು ಈದೀಗ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿರುವವರಿಗೆ ಸೋಂಕು ದೃಢವಾಗಿದೆ.

ಸಾಮಾನ್ಯವಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿ ಎಲ್ಲರೂ ಸಾಮೂಹಿಕವಾಗಿಯೇ ಇರುವುದರಿಂದ ಅವರು ದಾಖಲಾದಾಗಿನಿಂದ ಅವರ ಪ್ರಾಥಮಿಕ ಸಂಪರ್ಕದಲ್ಲಿ ಎಷ್ಟು ಜನ ಬಂದವರು ಮತ್ತು ದ್ವಿತೀಯ ಸಂಪರ್ಕ ಹೊಂದಿದವರು ಎಷ್ಟು ಎನ್ನುವುದು ತಲೆನೋವು ತಂದಿದೆ.

Advertisement

ಮುನ್ನೆಚ್ಚರಿಕೆಯಾಗಿ ಕ್ವಾರಂಟೈನ್ ನಲ್ಲಿ ಇವರೊಟ್ಟಿಗೆ ವಾಸವಿದ್ದ ವೇಳೆ ಸಂಪರ್ಕಕ್ಕೆ ಬಂದ ಎಲ್ಲರನ್ನು ಪ್ರತ್ಯೇಕವಾಗಿರಿಸುವ ಸಾಧ್ಯತೆಗಳಿವೆ.

ಇಷ್ಟು ದಿನ ಕಳೆದರು ಜಿಲ್ಲೆಯಲ್ಲಿ ಕೋವಿಡ್-19 ಭಯಯಿರಲಿಲ್ಲ. ಇದೀಗ ಲಾಡ್ ಡೌನ್ ಸಡಿಲಿಕೆ ವೇಳೆಯಲ್ಲಿಯೇ ಸರಕು ಸಾಗಾಣೆ ವಾಹನದಲ್ಲಿ ಅಹಮದಾಬಾದ್ ನಿಂದ ಬಂದ ದಂಪತಿಗಳು ಸೋಂಕು ತಂದರೆ, ಇದೀಗ ಮಹಾರಾಷ್ಟ್ರ ದಿಂದ ಬಂದವರು ಮುಳುವಾಗಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಗಳು ವಲಸೆ ಕಾರ್ಮಿಕರಿಗೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ಅವರಿದ್ದಲ್ಲಿಯೇ ವ್ಯವಸ್ಥೆ ಮಾಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲವೇನೊ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next