Advertisement
ಹೀಗೆ ಗುರುತಿಸಿದ ವಲಯಗಳ ಸುಮಾರು 50 ಮೀಟರ್ ಸುತ್ತ ನಿರ್ಬಂಧ ವಿಧಿಸಲಾಗಿರುತ್ತದೆ. ಸೋಂಕು ತಗುಲಿರುವ ವ್ಯಕ್ತಿ ಮನೆ ಅಕ್ಕಪಕ್ಕ ವಾಣಿಜ್ಯ ಸೇರಿದಂತೆ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಇಲ್ಲ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಪೂರ್ವ ವಲಯ 442, ಪಶ್ಚಿಮ ವಲಯ 791, ದಕ್ಷಿಣ ವಲಯ 118, ದಾಸರಹಳ್ಳಿ ವಲಯ 08, ಬೊಮ್ಮನಹಳ್ಳಿ 64, ಯಲಹಂಕ 28, ರಾಜರಾಜೇಶ್ವರಿ ನಗರ 47, ಮಹದೇವಪುರ 124 ಸ್ಥಳಗಳನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ.
Related Articles
Advertisement
ಸೋಂಕಿತರ ಓಡಾಟ!: ನಗರದಲ್ಲಿ ಸೋಂಕಿತರನ್ನು ಕರೆದೊಯ್ಯಲು ಸಕಾಲದಲ್ಲಿ ಆ್ಯಂಬುಲೆನ್ಸ್ ದೊರೆಯದ ಕಾರಣ ಹಾಗೂ ಬೆಡ್ ಕೊರತೆಯಿಂದ ಖುದ್ದಾಗಿ ಚಿಕಿತ್ಸೆಗೆ ತೆರಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳ ಮೂಲಕ ಹಾದುಹೋಗುವುದ ರಿಂದ ಸೋಂಕಿನ ಭೀತಿ ಕಾಡುತ್ತಿದೆ. ಇನ್ನು ಕನ್ನಡ -ಸಂಸ್ಕೃತಿ ಇಲಾಖೆ ಜಾನಪದ ಅಕಾ ಡೆಮಿ ಇಬ್ಬರು ಸಿಬ್ಬಂದಿಗೆ ಸೋಂಕು ತಗುಲಿದ್ದು, ಇವರ ಸಂಪರ್ಕದಲ್ಲಿದ್ದವರನ್ನು ಜಿಕೆವಿಕೆ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ಸಮ ಯಕ್ಕೆ ಊಟ, ತಿಂಡಿ ನೀಡುತ್ತಿಲ್ಲ. ಶುಚಿತ್ವ ಇಲ್ಲ. ಸೋಂಕಿತರ ಪರೀಕ್ಷೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಕೊನೇ ಬಾರಿ ತಂದೆ ಮುಖ ನೋಡಲಾಗದ ಮಗ: ಕುರುಬರಹಳ್ಳಿಯ 60 ವರ್ಷದ ವ್ಯಕ್ತಿಯೊಬ್ಬರು ಸೋಂಕಿ ನಿಂದ ಅಸುನೀಗಿದ್ದು, ವೃದ್ಧನ ಅಂತ್ಯ ಸಂಸ್ಕಾರ ಸುಮನಹಳ್ಳಿ ಯ ಚಿತಾಗಾರದಲ್ಲಿ ನೆರವೇರಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು. ತಂದೆ ಮುಖವನ್ನು ಕೊನೇ ಬಾರಿ ನೋಡಲಾಗದೆ ಅವರ ಮಗ ಸಂಕಟದಿಂದ ಕಣ್ಣೀರಿಟ್ಟ ದೃಶ್ಯ ನೆರೆದವರ ಮನಕಲುಕಿತು.