Advertisement

ಪೌರ ಕಾರ್ಮಿಕರಿಗೆ ಮೂರು ಸಾವಿರ ಮನೆ

04:27 PM Sep 30, 2020 | Suhan S |

ರಾಯಚೂರು: ಪೌರ ಕಾರ್ಮಿಕರಿಗಾಗಿ ಮೂರು ಸಾವಿರ ಮನೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದ ಕೂಡಲೇ ಆದ್ಯತಾನುಸಾರ ಮನೆಗಳ ಹಂಚಿಕೆ ಮಾಡಲಾಗುವುದು ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲ ತಿಳಿಸಿದರು.

Advertisement

ನಗರದ ಅತ್ತನೂರು ಫಂಕ್ಷನ್‌ ಹಾಲ್‌ನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್‌-19 ಸೋಂಕಿನ ಸಂದರ್ಭದಲ್ಲೂ ನಗರದ ಸ್ಪತ್ಛತೆಗೆ ಶ್ರಮಿಸಿದ ಪೌರ ಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರ ಹಿತರಕ್ಷಣೆಯೇ ನಮ್ಮ ಮೊದಲಾದ್ಯತೆಯಾಗಿದೆ. ಶೇ.22.75 ಸೇರಿದಂತೆ ಇತರೆ ಅನುದಾನದಲ್ಲಿ ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಒದಗಿಲಾಗುವುದು. ಪೌರ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಸೇರಿದಂತೆ ಅವರ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಮಾತನಾಡಿ, ಪೌರ ಕಾರ್ಮಿಕರು ಕೋವಿಡ್ ಹಾಗೂ ಮಳೆ ನೀರಿನಿಂದ ಎದುರಾಗಿದ್ದ ಸಮಸ್ಯೆ ನಿವಾರಿಸಲು ನಿರ್ವಹಿಸಿದ ಸೇವೆ ಅಪಾರ. ಕೋವಿಡ್ ಪ್ರಾರಂಭದಲ್ಲಿ ಚಿಕಿತ್ಸೆ, ಸೋಂಕಿತರ ಪತ್ತೆ ಮಾಡಿ ಚಿಕಿತ್ಸೆ ಒದಗಿಸಲು ಪೌರ ಕಾರ್ಮಿಕರು ದೊಡ್ಡ ಸಹಾಯ ಮಾಡಿದ್ದಾರೆ. ಅವರ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದರು. ಇದೇ ವೇಳೆ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆರ್‌ಡಿಎ ಅಧ್ಯಕ್ಷ ವೈ.

ಗೋಪಾಲರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್‌, ನಗರಸಭೆ ಪೌರಾಯುಕ್ತ ಡಾ| ದೇವಾನಂದ ದೊಡ್ಡಮನಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಹಂಪಯ್ಯ ಪಾಟೀಲ, ಮಲ್ಲೇಶ, ನಗರಸಭೆ ಎಇಇ ಶμ, ಶಫಿಯುದ್ದೀನ್‌, ಜೈಪಾಲರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ಕೋವಿಡ್‌-19 ಸಂಕಷ್ಟದಲ್ಲಿ ತಂದೆ-ತಾಯಿ, ಸಂಬಂಧಗಳನ್ನು ಮುಟ್ಟಲು ಆಗದಂಥ ಸ್ಥಿತಿ ಇತ್ತು. ಅಂಥ ವೇಳೆಯೂ ಪೌರ ಕಾರ್ಮಿಕರು ಮನೆ-ಮನೆಗೆ ತೆರಳಿ ಜನರಿಗೆ ಒದಗಿಸಿದ ಸೇವೆ ದೊಡ್ಡದು. ಪೌರ ಕಾರ್ಮಿಕರ ಸಮಸ್ಯೆ ಬಗೆ ಹರಿಸಲು ಜಿಲ್ಲಾಧಿಕಾರಿಗಳು, ಪೌರ ಕಾರ್ಮಿಕರ ಸಂಘಟನೆಗಳೊಂದಿಗೆ ಚರ್ಚಿಸಲಾಗಿದೆ. ಹಂತ ಹಂತವಾಗಿ ಇತ್ಯರ್ಥಪಡಿಸಲಾಗುವುದು. -ಡಾ| ಶಿವರಾಜ ಪಾಟೀಲ, ನಗರ ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next