ಆಳಂದ: ಆಳಂದ ಹಾಗೂ ಅಫಜಲಪುರ ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಂದ ಆಯಿಲ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ನರೋಣಾ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಶಖಾಪುರ ಪಾರ್ದಿ ತಾಂಡಾದ ವಿಜಯ ಭೀಮರಾವ್ ಪವಾರ, ಚೋಟು ಸಾವಳು ಕಾಳೆ, ಅಂಬೇವಾಡ ಗ್ರಾಮದ ಪರಮೇಶ್ವರ ಲಾಡಪ್ಪ ಹೂಗಾರ ಎನ್ನುವರನ್ನು ಬಂಧಿಸಲಾಗಿದೆ.
ಈ ಆರೋಪಿಗಳು ನರೋಣಾ ಪೊಲೀಸ್ ಠಾಣೆ ವ್ಯಾಪ್ತಿ ಒಳಗೊಡಂತೆ ಆಳಂದ, ಮಾದನಹಿಪ್ಪರಗಾ, ನಿಂಬರ್ಗಾ, ರೇವೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಒಂಭತ್ತು ಪ್ರಕರಣಗಳಲ್ಲಿ ಈ ಆರೋಪಿತರು ಭಾಗಿಯಾಗಿದ್ದಾರೆ.
ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಆಯಿಲ್ ಕಳ್ಳತನವಾಗುತ್ತಿದ್ದ ಕುರಿತು ಸುತ್ತಮುತ್ತಲಿನ ಕೆಲ ರೈತರು ಮಾದನಹಿಪ್ಪರಗಾ, ನರೋಣಾ, ಆಳಂದ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಹೆಚ್ಚುವರಿ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ರವಿಂದ್ರ ಶಿರೂರ ಮಾರ್ಗದರ್ಶನ, ಸಿಪಿಐ ಮಂಜುನಾಥ ನೇತೃತ್ವದಲ್ಲಿ ನರೋಣಾ ಠಾಣೆ ಪಿಎಸ್‌ಐ ವಾತ್ಸಲ್ಯ, ತನಿಖಾ ವಿಭಾಗದ ಪಿಎಸ್‌ಐ ಸೈಯದ್ ಮೆಹಬೂಬ್ ನೇತೃತ್ವದಲ್ಲಿ ಸಿಬ್ಬಂದಿ ಭಗವಂತರಾಯ, ಶಾಂತಕುಮಾರ, ರೇವಣಸಿದ್ಧಪ್ಪ, ಸತಿಶ್ಚಂದ್ರ, ಶರಣು, ಬಸವರಾಜ, ಶಿವಾಜಿ, ರವಿಂದ್ರ ಕೂಡಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ತಂಡ ಪತ್ತೆ ಕಾರ್ಯ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿ ಕಳ್ಳತನಕ್ಕೆ ಬಳಿಸಿದ ಕ್ರೂಸರ್ ವಾಹನ, ಎಂಟು ಪ್ಲ್ಯಾಸ್ಟಿಕ್ ಕ್ಯಾನ್, ಪ್ಲ್ಯಾಸ್ಟಿಕ್ ಪೈಪ್, ನಾಲ್ಕು ಸಾವಿರ ರೂ. ಮಗದು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.