Advertisement

ಎಲ್ಲೈಸಿ ನಾಮ ಬಲ ಜನರಿಗೆ ಪಂಗನಾಮ

06:00 AM Mar 14, 2018 | |

ಬೆಂಗಳೂರು: ಜೀವ ವಿಮಾ ನಿಗಮದ ಪಾಲಿಸಿಗೆ ಪ್ರೀಮಿಯಂ ಹಣ ಕಟ್ಟುವುದರ ಜತೆಗೆ ನಮ್ಮ ಕಂಪನಿಗೂ ಭಾರೀ ಮೊತ್ತದ
ಹಣ ಹೂಡಿದರೆ ನಿಮಗೆ ಅಧಿಕ ಲಾಭ ನಿಶ್ಚಿತ…

Advertisement

ಇಂತಹ ಆಕರ್ಷಣೆಯ ಮಾತುಗಳನ್ನಾಡುತ್ತ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿಯ ಪ್ರಮುಖರು ಹಣ ಲಪಟಾಯಿಸಿರುವುದು ಈಗ ಬೆಳಕಿಗೆ ಬಂದಿದೆ. ಎಲ್‌ಐಸಿ ಏಜೆಂಟರ್‌ಗಳೆಂದು ತಮ್ಮ ಆಪ್ತರನ್ನು ನಂಬಿಸಿ ಶ್ರೀನಾಥ್‌ ಮತ್ತು ಗ್ಯಾಂಗ್‌ ಪಾಲಿಸಿಗಳನ್ನು ಮಾಡಿದ್ದು ನಿಜ. ಆ ವಿಮೆ ಪಾಲಿಸಿಗಳಿಗೆ ಕಾಲಕಾಲಕ್ಕೆ ಪಾಲಿಸಿದಾರರು ಕಂತುಗಳನ್ನು ಕಟ್ಟುತ್ತಿದ್ದರು. ಕಾಲ ಕ್ರಮೇಣ ಪಾಲಿಸಿದಾರರಿಗೆ ಮತ್ತು ಈ ಗ್ಯಾಂಗಿಗೆ ಪರಸ್ಪರ ವಿಶ್ವಾಸ ಮೂಡಿತು. ಇದನ್ನೆ ಬಂಡವಾಳ ಮಾಡಿಕೊಂಡ ವಂಚಕರು ಖ್ಯಾತ ಕ್ರೀಡಾಪಟುಗಳು, ಗಣ್ಯರು
ಹಾಗೂ ಸಿರಿವಂತರಿಗೆ ಕಡಿಮೆ ಅವಧಿಯಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ನಂಬಿಸಿ ನೂರಾರು ಕೋಟಿ ರೂ. ವಂಚಿಸಿದ್ದಾರೆ.

ಹೇಗೆ ವಂಚನೆ?: ಮುಖ್ಯವಾಗಿ ಆರೋಪಿಗಳು ಎಲ್‌ಐಸಿ ಏಜೆಂಟ್‌ಗಳಾಗಿದ್ದಾರೆ. ವಿಮೆ ಮಾಡಿಸುವ ಜನರಿಗೆ ವಿಕ್ರಂ ಇನ್‌ವೆಸ್ಟ್‌ ಮೆಂಟ್‌ ಕಂಪನಿ ಬಗ್ಗೆ ಮಾಹಿತಿ ನೀಡಿ ಹಣ ಹೂಡಿಕೆ ಮಾಡಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕಂಪನಿಯಿಂದ ಶೇ.10-15ರಷ್ಟು ಕಮಿಷನ್‌ ಪಡೆಯುತ್ತಿದ್ದರು. ಅಲ್ಲದೇ, ವಿಮೆ ಕಂತನ್ನು ಹೂಡಿಕೆಯ ಲಾಭಾಂಶದಿಂದಲೇ ಪಾವತಿಸಬಹುದು ಎಂದು ತಿಳಿಸುತ್ತಿದ್ದರು. ಹೆಚ್ಚು ವಿಮೆ ಮಾಡಿಸುತ್ತಿದ್ದ ಮಂದಿಗೆ ಹೂಡಿಕೆ ಬಗ್ಗೆ ಇಲ್ಲದ ಸ್ಕೀಂಗಳನ್ನು ಹೇಳಿ ಲಕ್ಷಾಂತರ ರೂ. ಹೂಡಿಕೆ ಮಾಡಿಸಿದ್ದಾರೆ. ಕನಿಷ್ಠ 1-2 ಲಕ್ಷ ರೂ. ಟಾರ್ಗೆಟ್‌ ಇಟ್ಟುಕೊಂಡಿದ್ದರು. ಶ್ರೀಮಂತರು, ಗಣ್ಯರಿಂದ ಕೋಟಿಗಟ್ಟಲೇ ಹೂಡಿಕೆ ಮಾಡಿಸಿದ್ದಾರೆ. ಇದಕ್ಕೆ ಸದ್ಯ ಬಂದಿರುವ ದೂರುಗಳೇ ಸಾಕ್ಷಿ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ರಣಜಿ ಆಟಗಾರರಿಗೂ ಮೋಸ: ಸೂತ್ರಂ ಸುರೇಶ್‌ ಕ್ರೀಡಾ ವರದಿಗಾರಿಕೆ ಮಾಡುವ ಸಂದರ್ಭದಲ್ಲಿ ಪರಿಚಯವಾದ ರಣಜಿ, ಅಥ್ಲೆಟಿಕ್‌
ಕ್ರೀಡಾಪಟುಗಳಿಗೆ ವಿಮೆ ಮಾಡಿಸುತ್ತಿದ್ದರು. ಇದನ್ನು ನಂಬಿದ ಕ್ರೀಡಾಪಟುಗಳು ಇನ್ನಷ್ಟು ಹಣ ಹೂಡಿಕೆ ಹಾಗೂ ಷೇರು ಖರೀದಿಗೆ
ಮುಂದಾಗಿ ವಂಚನೆಗೊಳ್ಳಗಾಗಿದ್ದಾರೆ.

ಎಲ್‌ಐಸಿ ಅಧಿಕಾರಿಗಳ ಬಗ್ಗೆಯೂ ಕ್ರಮ?: ಬಂಧಿತರ ಸಿಡಿಆರ್‌ ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ಆರೋಪಿಗಳ ಜತೆಯಲ್ಲಿ ಎಲ್‌
ಐಸಿಯ ನೌಕರ ಸಿಬ್ಬಂದಿ ಶಾಮೀಲು ಆಗಿರುವುದು ಕಂಡು ಬಂದರೆ ಅವರ ವಿರುದಟಛಿವೂ ಪ್ರತ್ಯೇಕ ದೂರು ದಾಖಲಿಸಿಕೊಂಡು
ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಏಜೆಂಟ್‌ ಹೆಸರಲ್ಲಿ ವಂಚನೆ ಕಾನೂನು ಬಾಹಿರ
ಎಲ್‌ಐಸಿ ಏಜೆಂಟ್‌ಗಳು ವಿಮಾ ಪಾಲಿಸಿ ಮಾಡಲು ಅಧಿಕೃತವಾಗಿ ಭಾರತೀಯ ವಿಮಾ ನಿಗಮ ಅನುಮತಿ ನೀಡಿರುತ್ತದೆ. ಇದರೊಂದಿಗೆ ಬೇರೆ ವ್ಯವಹಾರ ಮಾಡಲು ಅವಕಾಶವಿದೆ. ಆದರೆ, ಏಜೆಂಟ್‌ ಹೆಸರಿನಲ್ಲಿ ವಂಚನೆ ಮಾಡುವುದು ಕಾನೂನು ಬಾಹಿರ. ಈ ಸಂಬಂಧ ಉದಯವಾಣಿ ಎಲ್‌ಐಸಿ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದಾಗ, ಆ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಅವರು ಯಾರು, ಯಾಕೆ, ಹೇಗೆ ವಂಚಿಸಿದ್ದಾರೆ ಎಂಬುದು ಗೊತ್ತಿಲ್ಲ. ಹೀಗಾಗಿ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ಆ ಅಧಿಕಾರಿ ಉತ್ತರಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್‌ ಅಧಿಕಾರಿಯೊಬ್ಬರು, ಭಾರ ತೀಯ ವಿಮಾ ನಿಗ ಮದ ಅಧಿಕಾರಿಗಳು ದೂರು ನೀಡಿದಲ್ಲಿ ಆರೋಪಿಗಳ ವಿರುದ್ಧ ಮತ್ತೂಂದು ದೂರು ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ರದ್ದು ಪಡಿಸಲು ಆಗಲ್ಲ
ಬೆಂಗಳೂರಿನ ಪುರಭವನ ಬಳಿಯಿರುವ ಭಾರತೀಯ ವಿಮಾ ನಿಗಮ ವಿಭಾಗ 1ರಲ್ಲಿ ಸೂತ್ರಂ ಸುರೇಶ್‌ ಏಜೆಂಟ್‌ ಆಗಿದ್ದಾನೆ. ಇತರೆ
ಆರೋಪಿಗಳು ಸಹ ಇದೇ ಶಾಖೆ ಅಥವಾ ಇತರೆ ಶಾಖೆಗಳಲ್ಲಿ ಏಜೆಂಟ್‌ಗಳಾಗಿದ್ದಾರೆ. ಆದರೆ, ಆರೋಪದ ಮೇಲೆ ಏಜೆಂಟ್‌
ಪರವಾನಗಿಯನ್ನು ರದ್ದು ಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಕೋರ್ಟ್‌ ಅಪರಾಧಿ ಎಂದು ಆದೇಶಿಸಿದ ಮರು ಕ್ಷಣವೇ
ಆರೋಪಿಯ ಪರವಾನಗಿ ರದ್ದು ಪಡಿಸಬಹುದು. ಮತ್ತೂಂದೆಡೆ ಸೂತ್ರಂ ಸುರೇಶ್‌ ಹಾಗೂ ಶ್ರೀನಾಥ್‌ ಭಾರತೀಯ ವಿಮಾ ನಿಗಮದ
ಎಲ್ಲ ಹಿರಿಯ ಅಧಿಕಾರಿಗಳ ಜತೆ ವಿಶ್ವಾಸಗಳಿಸಿಕೊಂಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ ಎನ್ನಲಾಗಿದೆ.

ಮಲೇಷ್ಯಾಕ್ಕೆ ರಫ್ತು
ವಿಕ್ರಮ್‌ ಇನ್‌ವೆಸ್ಟ್‌ ಮೆಂಟ್‌ ಕಂಪನಿ ಹೆಸರಿನಲ್ಲಿ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿರುವ ಆರೋಪಿಗಳು ಈರುಳ್ಳಿ, ಮೆಣಸಿನಕಾಯಿ, ತಾಮ್ರ, ಸತು ಲೋಹಗಳ ರಫ್ತು ವಹಿವಾಟಿನ ಮೇಲೆ ಹೂಡಿಕೆ ಮಾಡುವುದಾಗಿ ವಂಚಿಸಿದ್ದಾರೆ. ವಿಕ್ರಂ ಗ್ಲೋಬಲ್‌ ಕಮಾಡಿಟಿಸ್‌ ಹೆಸರಿನ ಕಂಪನಿ ಆರಂಭಿಸಿದ್ದ ರಾಘವೇಂದ್ರ, ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಮಲೇಷ್ಯಾಕ್ಕೆ ರಫ್ತು ಮಾಡುತ್ತಿದ್ದ. ಅದೇ ಮಳಿಗೆಯಲ್ಲಿ 2008ರಲ್ಲಿ ವಿಕ್ರಂ ಇನ್‌ವೆಸ್ಟ್‌ ಮೆಂಟ್‌ ಕಂಪೆನಿ ಆರಂಭಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next