Advertisement

ಮುಂಬಯಿ:5 ಅಂತಸ್ತಿನ ಕಟ್ಟಡ ಕುಸಿತ;16 ಸಾವು

10:02 AM Aug 31, 2017 | Team Udayavani |

ಮುಂಬಯಿ : ಭಾರಿ ಮಳೆ ಮತ್ತು ನೆರೆಯಿಂತ ತತ್ತರಿಸಿ ಹೋಗಿರುವ ನಗರದ ಭೆಂಡಿ ಬಜಾರ್‌ ಪ್ರದೇಶದ ಮೌಲಾನಾ ಶೌಕತ್‌ ಅಲಿ ರಸ್ತೆಯಲ್ಲಿ 5 ಅಂತಸ್ತಿನ ಕಟ್ಟಡವೊಂದು ಗುರುವಾರ ಬೆಳಗ್ಗೆ ಕುಸಿದು ಬಿದ್ದಿದ್ದು 16 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

 ಹಲವರು ಅವಶೇಷಷಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು,ಎನ್‌ಡಿಆರ್‌ಎಫ್ ಮತ್ತು ಅಗ್ನಿ ಶಾಮಕದಳದ ಸಿಬಂದಿಗಳು ರಕ್ಷಣಾ ಕಾರ್ಯ ನಿರತರಾಗಿದ್ದು ಈಗಾಗಲೇ 28ಕ್ಕೂ ಹೆಚ್ಚು ಜನರನ್ನು ರಕ್ಷಿಸಿರುವ ಬಗ್ಗೆ ವರದಿಯಾಗಿದೆ. 

ರಕ್ಷಣಾ ಕಾರ್ಯದ ವೇಳೆ ನಾಲ್ವರು ಅಗ್ನಿಶಾಮಕ ದಳದ ಸಿಬಂದಿಗಳು ಗಾಯಗೊಂಡಿದ್ದಾರೆ.

117 ವರ್ಷಗಳಷ್ಟು  ಹಳೆಯ ಕಟ್ಟಡದಲ್ಲಿ 50 ಕ್ಕೂ ಹೆಚ್ಚು ಜನರು ವಾಸವಿದ್ದರು ಎಂದು ತಿಳಿದು ಬಂದಿದೆ.  ರಕ್ಷಣೆಗೊಳಗಾದವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ. ಗಾಯಾಳುಗಳಿಗೆ ಸದ್ಯ ಜೆ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಕಳೆದ ವಾರ ನಗರದ ಸಾಕಿನಾಕಾದಲ್ಲಿ  6 ಅಂತಸ್ತಿನ ಕಟ್ಟಡ ಕುಸಿದು ಓರ್ವ ವ್ಯಕ್ತಿ  ಸಾವನ್ನಪ್ಪಿದ್ದರು.  ಕಳೆದ ತಿಂಗಳಿನಲ್ಲಿ ಘಾಟ್‌ಕೋಪರ್‌ನಲ್ಲಿ ಕಟ್ಟಡ ಕುಸಿದು 7 ಮಂದಿ ಸಾವನ್ನಪ್ಪಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next