Advertisement

ದೇಶದ್ರೋಹದ ಆರೋಪ: ಸೌದಿಯ ಮೂವರು ರಾಜಕುಮಾರರ ಬಂಧನ

10:58 AM Mar 08, 2020 | keerthan |

ರಿಯಾದ್: ದೇಶದ್ರೋಹದ ಆರೋಪದ ಮೇರೆಗೆ ಸೌದಿ ಅರೇಬಿಯಾದ ಮೂವರು ರಾಜಕುಮಾರರನ್ನು ಸೌದಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಸೌದಿಯ ಅಧಿಕಾರದಲ್ಲಿರುವ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಆಡಳಿತದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಸಿದ್ದಾರೆ ಎಂದು ವರದಿಯಾಗಿದೆ.

Advertisement

ರಾಜಕುಮಾರ ಅಹಮದ್ ಬಿನ್ ಅಬ್ದುಲ್ ಅಜಿಜ್ ಅಲ್ ಸೌದ್, ಆತನ ಸಹೋದರ ಕಿಂಗ್ ಸಲ್ಮಾನ್ ಮತ್ತು ಮೊಹಮ್ಮದ್ ಬಿನ್ ನಾಯೆಫ್ ರನ್ನು ಶುಕ್ರವಾರ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ ಎಂದು ವಾಲ್ ಸ್ಟ್ರಿಟ್ ಜರ್ನಲ್ ವರದಿ ಮಾಡಿದೆ.

ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡಾ ಈ ಬಗ್ಗೆ ವರದಿ ಮಾಡಿದ್ದು, ಈ ಮೂವರೊಂದಿಗೆ  ಪ್ರಿನ್ಸ್ ನಾಯೆಫ್ ರೊಂದಿಗೆ ಅವರ ಕಿರಿಯ ಸಹೋದರ ಪ್ರಿನ್ಸ್ ನವಾಫ್ ಬಿನ್ ನಯೇಫ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದಿದೆ.

ಆದರೆ ಸೌದಿ ಅರೇಬಿಯಾ ಅಧಿಕಾರಿಗಳು ಈ ವಿಷಯದ ಬಗ್ಗೆ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next