Advertisement
ಬಾಲಿವುಡ್ ನಟಿ ಸನ್ನಿ ಲಿಯೋನ್ ಬರುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಸೇರಿ ಮೂರು ಪ್ರಮುಖ ಕಾರಣಗಳನ್ನು ನೀಡಿ ನಗರ ಪೊಲೀಸ್ ಆಯುಕ್ತರು ಕಾರ್ಯಕ್ರಮಕ್ಕೆ ಅನುಮತಿ ಕೊಡಲಾಗದು ಎಂದು ಹೇಳಿದ್ದಾರೆ.
Related Articles
Advertisement
ಕೇರಳದಲ್ಲಿ ಅಹಿತಕರ ಘಟನೆಗಳು: ನಟಿ ಸನ್ನಿ ಲಿಯೋನ್‌ರ ಇದೇ ಮಾದರಿಯ ಕಾರ್ಯಕ್ರಮ ಕೇರಳದಲ್ಲಿ ಆಯೋಜನೆಗೊಂಡಿದ್ದಾಗ ಅಲ್ಲಿ ಬಹಳಷ್ಟು ಅಹಿತಕರ ಘಟನೆಗಳು ನಡೆದಿದ್ದವು. ಅಲ್ಲದೆ, ಕಾರ್ಯಕ್ರಮದ ದಿನದಂದು ಯುವಕ, ಯುವತಿಯರು ಮದ್ಯಪಾನ ಮಾಡಿ ಆಚರಣೆಯಲ್ಲಿ ತೊಡಗಿಕೊಳ್ಳುವುದು ಮತ್ತು ಸಮಾಜಘಾತುಕ ವ್ಯಕ್ತಿಗಳು ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು,
ಸ್ಥಳದಲ್ಲಿ ದಾಂಧಲೆ ನಡೆಸುವುದು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವತಿಯರು ಮತ್ತು ಮಹಿಳೆಯರ ಜತೆ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಹಣ ವಾಪಸ್: ಬಾಲಿವುಡ್ ನಟಿ ಸನ್ನಿ ಲಿಯೋನ್ ನೋಡಲು 3ರಿಂದ 8 ಸಾವಿರ ರೂ. ಕೊಟ್ಟು “ಬುಕ್ ಮೈ ಶೋ’ ಮೂಲಕ ಟಿಕೆಟ್ ಖರೀದಿಸಿದವರ ಹಣ ಸದ್ಯದಲ್ಲೇ ಅವರ ಖಾತೆ ಸೇರಲಿದೆ. ಪೊಲೀಸ್ ಇಲಾಖೆ ಅಧಿಕೃತವಾಗಿ ಕಾರ್ಯಕ್ರಮ ರದ್ದು ಪಡಿಸಿದ ಹಿನ್ನೆಲೆಯಲ್ಲಿ ವೆಬ್‌ಸೈಟ್ ನಿರ್ವಾಹಕರಿಗೆ ಇ-ಮೇಲ್ ಮೂಲಕ ಸಂಪರ್ಕಿಸಿದ್ದು, ಟಿಕೆಟ್ ಖರೀದಿಸಿದವರ ಖಾತೆಗೆ ಸಂಪೂರ್ಣ ಹಣ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಇನ್ನು 3-4 ದಿನಗಳಲ್ಲಿ ಹಣ ವಾಪಸ್ ಆಗಲಿದೆ ಎಂದು ಕಾರ್ಯಕ್ರಮ ಆಯೋಜಕ ಹರೀಶ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಆ ಮೂರು ಕಾರಣಗಳು…-ಸನ್ನಿ ನೈಟ್ಸ್ ಕಾರ್ಯಕ್ರಮಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಕೊಡಲು ಸಾಧ್ಯವಿಲ್ಲ
-ಬೆಸ್ಕಾಂ, ಸ್ಥಳೀಯ ಪ್ರಾಧಿಕಾರದಿಂದ ಯಾವುದೇ ರೀತಿ ಅನುಮತಿ ಪಡೆದಿಲ್ಲ
-ಕಾರ್ಯಕ್ರಮದ ಕುರಿತು ಆಯೋಜಕರು ಸಮರ್ಪಕ ರೂಪುರೇಷೆ ಸದ್ಧಪಡಿಸಿಲ್ಲ ಎಂ.ಜಿ, ಬ್ರಿಗೇಡ್ ರಸ್ತೆಗಳಲ್ಲಿ ಪ್ರತ್ಯೇಕ ಪಥ!
ಬೆಂಗಳೂರು: ಕಳೆದ ವರ್ಷ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಈ ಬಾರಿಯ ಆಚರಣೆಗೆ ವಿಶೇಷ ಭದ್ರತೆ ಒದಗಿಸಲು ಸಿದ್ಧತೆ ನಡೆಸಿರುವ ಪೊಲೀಸ್ ಇಲಾಖೆ, ಮಹಾತ್ಮ ಗಾಂಧಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಪುರುಷರು ಮತ್ತು ಮಹಿಳೆಯರ ಓಡಾಟಕ್ಕೆ ಪ್ರತ್ಯೇಕ ಪಥ ನಿಗದಿಪಡಿಸಲು ಚಿಂತನೆ ನಡೆಸಿದೆ. ಆದರೆ, ನಗರ ಪೊಲೀಸ್ ಆಯುಕ್ತರು ಸಮ್ಮತಿ ಸೂಚಿಸಿದ ನಂತರವೇ ಈ ಹೊಸ ಮಾದರಿಯ ಭದ್ರತೆ ಅನುಷ್ಠಾನಕ್ಕೆ ತರುವುದಾಗಿ ಕೇಂದ್ರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಪ್ರತ್ಯೇಕ ಬ್ಯಾರಿಕೇಡ್: ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಎರಡು ಪಥಗಳನ್ನು ನಿರ್ಮಿಸಲಾಗುತ್ತದೆ. ಶೇ.70ರಷ್ಟು ಸ್ಥಳದಲ್ಲಿ ಪುರುಷರು ಹಾಗೂ ಶೇ.30ರಷ್ಟು ಸœಳದಲ್ಲಿ ಮಹಿಳೆಯರಿಗೆ ಮೀಸಲಿರಿಸಲಾಗುವುದು. ಜತೆಗೆ 12 ಅಡಿ ಎತ್ತರದ 15 ವೀಕ್ಷಣಾ ಗೋಪುರಗಳು (ವಾಚ್ ಟವರ್), 500 ಸಿಸಿಟಿವಿ ಕ್ಯಾಮೆರಾಗಳು ಹಾಗೂ 200 ಫೋಕಲ್ ಲೈಟ್‌ಗಳನ್ನು ಈ ರಸ್ತೆಗಳಲ್ಲಿ ಅಳವಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ. ಭದ್ರತೆ ಸಂಬಂಧ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಕೆಲ ಅಧಿಕಾರಿಗಳು ಪ್ರತ್ಯೇಕ ಪಥಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಆಯುಕ್ತರಿಂದ ಇನ್ನೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎನ್ನಲಾಗಿದೆ.