Advertisement

ವೇಶ್ಯಾವಾಟಿಕೆಗಾಗಿ ಕಳ್ಳತನಕ್ಕಿಳಿದಿದ್ದ ಮೂವರ ಸೆರೆ

10:07 AM Jun 10, 2022 | Team Udayavani |

ಬೆಂಗಳೂರು: ವೇಶ್ಯಾವಾಟಿಕೆಗಾಗಿ ದ್ವಿಚಕ್ರವಾಹನ ಮತ್ತು ಸರ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಚನ್ನರಾಯಪಟ್ಟಣದ ರಮೇಶ್‌ ಅಲಿಯಾಸ್‌ ಜಾಕಿ (30), ಮಾಗಡಿ ರಸ್ತೆ ಮಾಚೋಹಳ್ಳಿಯ ಲೋಕೇಶ್‌ ಅಲಿಯಾಸ್‌ ಕಮಾಯಿ (24) ಹಾಗೂ ಅಂಚೆಪಾಳ್ಯದ ಮೊಹಮ್ಮದ್‌ ಮದಾರ್ಸಿ(23) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 7.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಆರೋಪಿಗಳು ಅನಾರೋಗ್ಯ ಪೀಡಿತ ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

ರಮೇಶ ಸುಬ್ರಹ್ಮಣ್ಯಪುರ ಠಾಣೆ ರೌಡಿಶೀಟರ್‌ ಆಗಿದ್ದಾನೆ. ಈತನ ಬಂಧನದಿಂದ 13 ಪ್ರಕರಣಗಳು ಪತ್ತೆಯಾಗಿವೆ. . ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ಸುಶಾಂತ್‌ ಅಲಿಯಾಸ್‌ ಪೈ ಎಂಬುವರ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಚನ್ನಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಮೂರು ಅಭ್ಯರ್ಥಿಗಳೂ ಗೆಲ್ಲುತ್ತಾರೆ: ಬಿಎಸ್ ವೈ ವಿಶ್ವಾಸ

Advertisement

ಇನ್ನು ಮಾಚೋಹಳ್ಳಿಯ ಲೋಕೇಶ್‌ ವಿರುದ್ಧ ಕುಂಬಳಗೊಡು ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬ್ಯಾಟರಾಯನ ಪುರ, ಹನುಮಂತನಗರ, ಬಸವನಗುಡಿ, ವೈಯಾಲಿಕಾವಲ್‌ ಠಾಣೆ ವ್ಯಾಪ್ತಿಗಳಲ್ಲಿ ನಡೆದಿದ್ದ ಸರಕಳವು ಪ್ರಕರಣ ಹಾಗೂ ಇತರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವಾಹನ ಕಳವು, ಸುಲಿಗೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ಅಂಚೆಪಾಳ್ಯದ ಮೊಹಮ್ಮದ್‌ ಮದಾರ್ಸಿ ವಿರುದ್ಧ ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಹನುಮಂತನಗರ, ತಿಲಕನಗರ, ಬಸವನಗುಡಿ, ಜೆ.ಪಿ.ನಗರ, ಕಲಾಸಿಪಾಳ್ಯ ಸೇರಿ ವಿವಿಧೆಡೆ ಸರಕಳವು, ಸುಲಿಗೆ, ದ್ವಿಚಕ್ರವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮೂವರು ಆರೋಪಿಗಳು ಪರಸ್ಪರ ಜೈಲಿನಲ್ಲಿ ಪರಿಚಯವಾಗಿದ್ದು, ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ಅವುಗಳ ಮೂಲಕ ಸರಕಳವು ಮಾಡುತ್ತಿದ್ದರು. ಬಂದ ಹಣವನ್ನು ವೇಶ್ಯಾವಾಟಿಕೆ, ಮೋಜು-ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next