Advertisement

ಇಸ್ರೋದಿಂದ 3 ಹೊಸ ಕೋರ್ಸ್‌ಗಳು

03:37 AM Jun 16, 2021 | Team Udayavani |

ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ), ತಾನು ಸದ್ಯದಲ್ಲೇ ಆರಂಭಿಸಲಿರುವ ಮೂರು ಆನ್‌ಲೈನ್‌ ಸರ್ಟಿಫಿಕೆಟ್‌ ಕೋರ್ಸ್‌ಗಳಿಗಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಬಳಸುವ ವಿವಿಧ ತಂತ್ರಜ್ಞಾನಗಳನ್ನು ನೇರವಾಗಿ ಇಸ್ರೋದ ವಿಜ್ಞಾನಿಗಳಿಂದಲೇ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ.

Advertisement

ಕೋರ್ಸ್‌ ಹೆಸರು, ವಿವರ
ಮೆಷಿನ್‌ ಲರ್ನಿಂಗ್‌: ರೇಡಿಯೋಮೆಟ್ರಿ, ಜಿಯೋಮೆಟ್ರಿಕ್‌ ಕರೆಕ್ಷನ್ಸ್‌, ಚಿತ್ರಗಳನ್ನು ಅರ್ಥ ಮಾಡಿಕೊಳ್ಳುವ ಬಗೆ, ಫ‌ಝಿ ತಂತ್ರಜ್ಞಾನ ಆಧಾರಿತ ಮೆಷಿನ್‌ ಲರ್ನಿಂಗ್‌ ಮುಂತಾದ ವಿಚಾರಗಳನ್ನು ಕಲಿಯಬಹುದು. ವಿದ್ಯಾರ್ಥಿಗಳಿರುವಾಗಲೇ ಇಂಥ ಕೋರ್ಸ್‌ಗಳನ್ನು ಮಾಡುವುದರಿಂದ ಮುಂದೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಪೂರ್ವಭಾವಿಯಾಗಿ ಸೂಕ್ತ ಜ್ಞಾನ ಲಭಿಸಲಿದೆ.

ಅರ್ತ್‌ ಅಬ್ಸರ್ವೇಶನ್‌ ಫಾರ್‌ ಕಾರ್ಬನ್‌ ಸೈಕಲ್‌: ಭೂ ಪರಿವೀಕ್ಷಣೆಯ ವಿವಿಧ ಆಯಾಮಗಳು, ಆರ್‌ಎಸ್‌ ಹಾಗೂ ಜಿಐಎಸ್‌ ಆಧಾರಿತ ಕಾರ್ಬನ್‌ ಅಸೆಸೆ¾ಂಟ್‌ಗಳನ್ನು ಕಲಿಯಬಹುದು. ಕಾರ್ಬನ್‌ ಸೈಕ್ಲಿಂಗ್‌ ಆಧಾರಿತ ಭೂ ಪರಿವೀಕ್ಷಣೆಯಲ್ಲಿ ಇ.ಒ.ನ ಪಾತ್ರ, ಇಂಗಾಲದ ವಿನಿಮಯ, ಇಂಗಾಲದ ಹರಿವನ್ನು ಹೆಚ್ಚಿಸುವ ಹಾಗೂ ಮಾಡೆಲಿಂಗ್‌, ಕಾರ್ಬಲ್‌ ಪೂಲ್‌ ಅಸೆಸ್ಮೆಂಟ್ ನಲ್ಲಿ ಸಸ್ಯವರ್ಗವನ್ನು ಬೆಳೆಸುವ ವಿಧಾನದಲ್ಲಿ ಭೂ ಪರಿವೀಕ್ಷಣೆಯ ಪಾತ್ರ, ಭೂಮಿಯಲ್ಲಿನ ಇಂಗಾಲದ ಕಣಗಳ ಸಂರಕ್ಷಣೆಯಲ್ಲಿ ಭೂ ಪರಿವೀಕ್ಷಣೆಯ ಮಹತ್ವ – ಇವುಗಳನ್ನು ಕಲಿಯಬಹುದು.

ವೆಬ್‌ ಜಿಐಎಸ್‌ ತಂತ್ರಜ್ಞಾನ: ವೆಬ್‌ ಆಧಾರಿತ ಜಿಯೋ ಇನಾ#ರ್ಮೇಶನ್‌ ಸಿಸ್ಟಂ (ಜಿಐಎಸ್‌) ಕೋರ್ಸ್‌, ವಿದ್ಯಾರ್ಥಿಗಳಿಗೆ ಈ ತಂತ್ರಜ್ಞಾನ ವಿವಿಧ ಆಯಾಮ ಗಳನ್ನು ಪರಿಚಯ ಮಾಡಿಕೊಡಲಿದೆ. ಜೂ. 21ರಂದು ಆರಂಭವಾ ಗುವ ಈ ಕೋರ್ಸ್‌ ಜು. 2ರಂದು ಮುಕ್ತಾಯವಾಗಲಿದೆ. ಈ ಕೋರ್ಸ್‌ಗೆ ಐಐಆರ್‌ನ ವೆಬ್‌ಸೈಟ್‌ನ ಮೂಲಕ ದಾಖಲಾಗಬಹುದು. ತರಗತಿಗಳನ್ನು ಅದೇ ವೆಬ್‌ಸೈಟ್‌ನಲ್ಲೇ ಬಿತ್ತರಿಸಲಾಗುತ್ತದೆ.

ವೈಶಿಷ್ಟ್ಯಗಳೇನು?
– ಈ ಕೋರ್ಸ್‌ಗಳಿಗೆ ಯಾವುದೇ ಶುಲ್ಕವಿಲ್ಲ
– ಆನ್‌ಲೈನ್‌ ತರಗತಿಗಳು
– ಕೋರ್ಸ್‌ನ ಅವಧಿ 4ರಿಂದ 12 ದಿನ ಮಾತ್ರ
– ಪ್ರತೀ ಅಭ್ಯರ್ಥಿಗಳಿಗೂ ಕೋರ್ಸ್‌ ಅಂತ್ಯದಲ್ಲಿ ಪ್ರಮಾಣಪತ್ರ
– ಕೋರ್ಸ್‌ಗಳ ಲಭ್ಯತೆ ಜೂ. 21ರಿಂದ ಜು. 5- 9

Advertisement

ಯಾರು ಅರ್ಜಿ ಸಲ್ಲಿಸಬಹುದು?
ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕೋರ್ಸ್‌ಗಳಲ್ಲಿ ಭಾಗವಹಿಸ ಬೇಕಾದ ವಿದ್ಯಾರ್ಥಿಗಳು, ತಾವು ಸಲ್ಲಿಸುವ ಅರ್ಜಿಯ ಮೇಲೆ ತಮ್ಮ ಕಾಲೇಜು ಅಥವಾ ವಿಶ್ವವಿದ್ಯಾನಿಲ ಯಗಳ ಮುಖ್ಯಸ್ಥರಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ.

Advertisement

Udayavani is now on Telegram. Click here to join our channel and stay updated with the latest news.

Next