Advertisement

ಇಂದಿನಿಂದ ತ್ರಿರಾಷ್ಟ್ರಗಳ ನೌಕಾ ಪರಾಕ್ರಮ; ಮಲಬಾರ್ ಪ್ರದರ್ಶನ

03:50 AM Jul 10, 2017 | Harsha Rao |

ಹೊಸದಿಲ್ಲಿ: ಗಡಿ ತಕರಾರಿನ ಹಿಂದೂ ಮಹಾಸಾಗರದಲ್ಲಿ ಭಾರತ-ಅಮೆರಿಕ- ಜಪಾನ್‌ ರಾಷ್ಟ್ರಗಳ ಸಮರಾಭ್ಯಾಸ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿದೆ. ಅತ್ತ ಚೀನ ಮತ್ತು ಪಾಕಿಸ್ಥಾನ ಭಾರತವನ್ನು ಕೆಣಕುತ್ತಿರುವಂತೆಯೇ ನಡೆಯುತ್ತಿರುವ ಈ ಅಭ್ಯಾಸ ಹೆಚ್ಚು ಗಮನ ಸೆಳೆದಿದೆ.

Advertisement

ಬಂಗಾಲ ಕೊಲ್ಲಿಯಲ್ಲಿ ಸಮರಾಭ್ಯಾಸ ನಡೆಯಲಿದೆ. 1992ರಿಂದ ಭಾರತ ಮತ್ತು ಅಮೆರಿಕ ನಡುವೆ ಜಂಟಿ ಸಮರಾಭ್ಯಾಸ ಶುರುವಾಗಿತ್ತು. 1998ರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ ಸಮರಾಭ್ಯಾಸ ಸ್ಥಗಿತಗೊಂಡಿತು. ಈ ಬಾರಿಯ ಸಮರಾಭ್ಯಾಸದಲ್ಲಿ  20ಕ್ಕೂ ಅಧಿಕ ಯುದ್ಧ ನೌಕೆಗಳು ಭಾಗವಹಿಸಲಿವೆ.

ಈ ಬಾರಿಯ ಮಹತ್ವ: ದಕ್ಷಿಣ ಚೀನ ಸಮುದ್ರ ವ್ಯಾಪ್ತಿ ಯಲ್ಲಿರುವ ದ್ವೀಪ ಸಮೂಹದ ಮೇಲೆ ಚೀನ ಈಗಾಗಲೇ ಸ್ಥಾಪಿಸಿದ ಆಧಿಪತ್ಯಕ್ಕೆ ನಿಯಂತ್ರಣ ಹೇರುವುದು.  ಪಾಕಿ ಸ್ಥಾನಕ್ಕೆ ಬೆಂಬಲ ಕೊಡದಂತೆ ಪರೋಕ್ಷ ಎಚ್ಚರಿಕೆ ಹಾಗೂ ಭಾರತ-ಚೀನ ನಡುವಿನ ಹಾಲಿ ಗಡಿ ತಂಟೆಯ ಮೇಲೆ ಪ್ರಭಾವ ಬೀರುವುದು.

ಚೀನವೇ ಗುರಿ ಏಕೆ?
– ಯಾವುದೇ ಮೂರನೇ ಪಕ್ಷ ಅಥವಾ ರಾಷ್ಟ್ರವನ್ನು ಗುರಿಯಾಗಿರಿಸಿಕೊಂಡು ತ್ರಿಪಕ್ಷೀಯ ಸಮರಾಭ್ಯಾಸ ಅಲ್ಲವೆಂದು ಹೇಳಿದರೂ ಭಾರತ, ಅಮೆರಿಕ, ಜಪಾನ್‌ ಗುರಿ ಚೀನವೇ.
– ಉಗ್ರರಿಗೆ ಪೋಷಣೆ ನೀಡುತ್ತಿರುವ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಬೇಕು ಎನ್ನುವುದು ಭಾರತದ ವಾದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನ ಪಾಕ್‌ಗೆ ಬೆಂಬಲ ನೀಡುತ್ತಿರುವುದರಿಂದ ಅದರ ವಿರುದ್ಧ ವ್ಯೂಹ ರಚಿಸಲು ಭಾರತಕ್ಕೆ  ಅಮೆರಿಕ, ಜಪಾನ್‌ ಬೆಂಬಲ ಬೇಕು.
– ದಕ್ಷಿಣ ಸಮುದ್ರ ಚೀನದಲ್ಲಿ ಚೀನ ನೆಲೆ ವಿಸ್ತರಿಸುವುದನ್ನು ತಡೆಯುವುದು ಅಮೆರಿಕದ ಆದ್ಯತೆ. ಅದಕ್ಕೆ  ಭಾರತ-ಜಪಾನ್‌ಗಳ ಮೂಲಕ ಆ ದೇಶಕ್ಕೆ ಎಚ್ಚರಿಕೆ ನೀಡುವುದು ಅಮೆರಿಕದ ಗುರಿ.

ಗುಪ್ತಚರ ನೌಕೆ ನಿಯೋಜಿಸಿದ ಚೀನ
ಸಮರಾಭ್ಯಾಸದಲ್ಲಿ ಜಪಾನ್‌ ಭಾಗವಹಿಸಿದ್ದು ಚೀನವನ್ನು ಕೆರಳಿಸಿದೆ. ಡ್ರೋನ್‌ ಮೂಲಕ ಯಾವ ರೀತಿ ಅಭ್ಯಾಸ ನಡೆಯಲಿದೆ ಮತ್ತು ತನ್ನ ಅತಿ ದೊಡ್ಡ ಗುಪ್ತಚರ ನೌಕೆಯನ್ನೇ ಅಭ್ಯಾಸ ಪ್ರದೇಶಕ್ಕೆ ಈಗಾಗಲೇ ಕಳುಹಿಸಿದೆ.

Advertisement

ನೌಕೆಗಳ ಹೆಸರು
ಭಾರತ:
ಐಎನ್‌ಎಸ್‌ ವಿಕ್ರಮಾದಿತ್ಯ- ಭಾರತದ ನೌಕಾಪಡೆಯ ದೊಡ್ಡ ಯುದ್ಧ ವಿಮಾನ ವಾಹಕ ನೌಕೆ ಮಿಗ್‌ 29ಕೆ ಕೂಡ ಇರಲಿದೆ, 02- ಶಿವಾಲಿಕ್‌ ಬಹು ಹಂತದ ಯುದ್ಧ ನೌಕೆ, ಐಎನ್‌ಎಸ್‌ ಜ್ಯೋತಿ, ಪಿ8ಐ ಕಡಲ ಸಂಬಂಧಿ ಯುದ್ಧ ವಿಮಾನ, ಸಬ್‌ಮೆರಿನ್‌ ದಾಳಿ ಎದುರಿಸುವ ಸಣ್ಣ ನೌಕೆಗಳು.

ಅಮೆರಿಕ: ಯುಎಸ್‌ಎಸ್‌ ನಿಮಿಟ್ಜ್- ವಿಶ್ವದ ಅತ್ಯಂತ ದೊಡ್ಡ ಯುದ್ಧ ನೌಕೆ, ಯುಎಸ್‌ಎಸ್‌ ಪ್ರಿನ್ಸ್‌ಟನ್‌- ಕ್ಷಿಪಣಿ ವಾಹಕ ನೌಕೆ, ಯುಎಸ್‌ಎಸ್‌ ಹೊವಾರ್ಡ್‌,  ಶೌಪ್‌ ಮತ್ತು ಕಿಡ್‌ ಕ್ಷಿಪಣಿ ನಾಶಕ ನೌಕೆಗಳು, ಲಾಸ್‌ ಏಂಜಲಿಸ್‌- ಸಬ್‌ಮೆರಿನ್‌, ಪಿ-8ಎ ಪೊಸೈಡಾನ್‌- ಯುದ್ಧ ವಿಮಾನ.

ಜಪಾನ್‌: ಜೆಎಸ್‌ ಇಜೊ¾à- ಯುದ್ಧ ನೌಕೆ, ಜೆಎಸ್‌ ಸಜಾನಮಿ- ಯುದ್ಧ ನೌಕೆ.

Advertisement

Udayavani is now on Telegram. Click here to join our channel and stay updated with the latest news.

Next