ದಾವಣಗೆರೆ: ಇಲ್ಲಿನ ಕರ್ತವ್ಯ ನಿರತ ಪೊಲೀಸ್ ಪೇದೆ ಸೇರಿದಂತೆ ಮೂವರಿಗೆ ಇಂದು ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 88ಕ್ಕೇರಿದೆ.
ಇಲ್ಲಿನ ಕಂಟೈನ್ ಮೆಂಟ್ ಝೋನ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ 34 ವರ್ಷದ ಪೊಲೀಸ್ ಪೇದೆಗೂ ಸೋಂಕು ತಾಗಿರುವುದು ದೃಢವಾಗಿದೆ. ಇದಿರಂದ ಪೊಲೀಸ್ ಇಲಾಖೆಗೆ ಆತಂಕ ಶುರುವಾಗಿದೆ.
ಜೊಜತೆಗೆ 40 ವರ್ಷದ ಪುರುಷ (ರೋಗಿ-960) ಹಾಗೂ 32 ವರ್ಷದ (ರೋಗಿ-976) ವ್ಯಕ್ತಿಗೂ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸದ್ಯ ಜಿಲ್ಲೆಯಲ್ಲಿ ಸಕ್ರಿಯ ಕೋವಿಡ್-19 ಸೋಂಕಿತರು 82 ಮಂದಿ ಇದ್ದು, ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಸಂಜೆಯ ನಂತರ ರಾಜ್ಯದಲ್ಲಿ 22 ಜನರಿಗೆ ಸೋಂಕು ದೃಢವಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆಯಾಗಿದೆ. ಸೋಂಕಿನ ಕಾರಣದಿಂದ 35 ಜನರು ಸಾವನ್ನಪ್ಪಿದ್ದು, 456 ಜನರು ಗುಣಮುಖರಾಗಿದ್ದಾರೆ. ಓರ್ವ ಕೋವಿಡ್-19 ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾನೆ.