Advertisement

ಮುಂಗಾರು ಪೂರ್ವ ಮಳೆಯ ಆರ್ಭಟ: ಸಿಡಿಲಿಗೆ ಮೂವರು ಬಲಿ

11:01 AM May 05, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಮುಂದುವರಿದಿದ್ದು, ಗುರುವಾರ ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ. 

Advertisement

ಧಾರವಾಡ ತಾಲೂಕಿನ ಯಾದವಾಡ ಗ್ರಾಮ ಸರಹದ್ದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ನೇಮಿನಾಥ ಬಾಳೇಶ ಅಲಸಂದಿ (23) ಎಂಬುವರು ಅಸುನೀಗಿದ್ದಾರೆ. ಇವರ ಜೊತೆಗಿದ್ದ ಅದೇ ಗ್ರಾಮದ ಪ್ರವೀಣ ತುಪ್ಪದ (23) ಎಂಬುವರು ಗಾಯಗೊಂಡಿದ್ದಾರೆ. ಇದೇ ವೇಳೆ, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮದ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಪ್ರಕಾಶ ಸಿದಟಛಿಪ್ಪ ಕರಡಿಗುಡ್ಡ (32) ಹಾಗೂ ಭೀರಪ್ಪ ಭರಮಪ್ಪ ಅರಿಶಿನಗೋಡಿ (17) ಎಂಬುವರು ಅಸುನೀಗಿದ್ದಾರೆ.

6 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಈ ಮಧ್ಯೆ, ಬಾಳೆಹೊನ್ನೂರು ಮತ್ತು ಹಾಸನದಲ್ಲಿ ರಾಜ್ಯದಲ್ಲಿಯೇ ಅಧಿಕ, 4 ಸೆಂ.ಮೀ.ಗಳಷ್ಟು ಮಳೆ ಸುರಿದರೆ, ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ, 40.6ಡಿ.ಸೆ.ತಾಪಮಾನ ದಾಖಲಾಯಿತು. ರಾಜ್ಯದ ಕೆಲವೆಡೆ ಶುಕ್ರವಾರವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next