Advertisement

ಕರಾಟೆಯಲ್ಲಿ ಹುಣಸೂರು ಮಹಿಳಾ ಪದವಿ ಕಾಲೇಜಿಗೆ ಮೂರು ಪದಕ

05:49 PM Jan 17, 2022 | Team Udayavani |

ಹುಣಸೂರು: ಮೈಸೂರಿನ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆದ ಮೈಸೂರು ವಿ.ವಿ.ಯ 2021-22 ನೇ ಸಾಲಿನ ಅಂತರ ಕಾಲೇಜುಗಳ ಮಹಿಳೆಯರ ಕರಾಟೆ ಪಂದ್ಯಾವಳಿಯಲ್ಲಿ ಹುಣಸೂರು ಮಹಿಳಾ ಸರಕಾರಿ ಕಾಲೇಜಿನ  ಮೂವರು ವಿದ್ಯಾರ್ಥಿನಿಯರು ಮೂರು ಪದಕಗಳನ್ನು ಗಿಟ್ಟಿಸಿ ಸಾಧನೆ ಗೈದಿದ್ದಾರೆಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್.ಭಾಸ್ಕರ್ ತಿಳಿಸಿದ್ದಾರೆ.

Advertisement

ಪಂದ್ಯಾವಳಿಯ 61 ಕೆ.ಜಿ.ವಿಭಾಗದಲ್ಲಿ ಪ್ರಥಮ ಬಿ.ಎ.ವಿದ್ಯಾರ್ಥಿನಿಯರಾದ ಎಂ.ಎಂ. ಸುಮತಿ ಬೆಳ್ಳಿ ಪದಕ ಹಾಗೂ ಬಿ.ಎಂ ಚೈತ್ರ ಕಂಚಿನ ಪದಕವನ್ನು ಪಡೆದುಕೊಂಡರೆ, ಅಮೂಲ್ಯ 68 ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕಕ್ಕೆ ಭಾಜನರಾದರು.

ಈ ಕ್ರೀಡಾಪಟುಗಳ ಸಾಧನೆಯನ್ನು ಪ್ರಾಚಾರ್ಯ ಜ್ಞಾನಪ್ರಕಾಶ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್.ಬಾಸ್ಕರ್ ಹಾಗೂ ಅಧ್ಯಾಪಕ ವೃಂದ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು  ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next