ಮಂಡ್ಯ: ತಾಲ್ಲೂಕಿನ ಬಿ.ಹೊಸೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಸಿಕ್ಕಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದ ವಿನಯ್ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಚಿರತೆಗಳು ಮರಿ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಜಮೀನಿಗೆ ಹೋದಾಗ ಚಿರತೆ ಮರಿಗಳು ಕಂಡು ಬಂದಿವೆ.
ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ ಗ್ರಾಮಸ್ಥರು ಚಿರತೆ ಮರಿಗಳನ್ನು ರಕ್ಷಿಸಿ ವಶಕ್ಕೆ ನೀಡಿದ್ದಾರೆ. ತಾಯಿ ಚಿರತೆ ಮರಿಗಳನ್ನು ಬಿಟ್ಟು ಆಹಾರ ಅರಸಿ ಹೋಗಿದ್ದು, ಮತ್ತೆ ಬರಬಹುದು ಎಂದು ಬೋನನ್ನು ತಂದು ಇರಿಸಲಾಗಿದೆ.
ಇದನ್ನೂ ಓದಿ:ಕೋಟೆನಾಡಿನಲ್ಲಿ ರಂಗೇರಿದೆ ಉಪಕದನ:ಗುಟ್ಟು ಬಿಟ್ಟುಕೊಡದ ಮತದಾರ, ಶಿರಾ ಕಿರೀಟ ಯಾರಿಗೆ ಪಾಲಿಗೆ?
ಗ್ರಾಮದಲ್ಲಿ ಆತಂಕ
ಚಿರತೆ ಮರಿಗಳು ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಚಿರತೆಯನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಮರಿಗಳ ಜೊತೆ ಫೋಟೋ
ಚಿರತೆ ಮರಿಗಳನ್ನು ನೋಡಲು ಗ್ರಾಮಸ್ಥರು ನೆರೆದಿದ್ದರು. ಚಿರತೆ ಮರಿಗಳ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಮಕ್ಕಳು, ಯುವಕರು ಚಿರತೆ ಮರಿಗಳನ್ನು ಎತ್ತಿಕೊಂಡು ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು