Advertisement

ಇಲೆಕ್ಟ್ರಿಕ್‌ ರೈಲಿನ ಫ‌ೂಟ್‌ ಬೋರ್ಡ್‌ ನಿಂದ ಬಿದ್ದು ಮೂವರ ದುರ್ಮರಣ

03:40 PM Feb 23, 2017 | udayavani editorial |

ಚೆನ್ನೈ : ನಗರ ಹೊರವಲಯದ ಚೆಂಗಲ್‌ಪೆಟ್‌-ಬೀಚ್‌ ರೂಟ್‌ನಲ್ಲಿ ಚಲಿಸುತ್ತಿದ್ದ ಇಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌ (ಇಎಂಯು) ಟ್ರೈನಿನ ಫ‌ೂಟ್‌ ಬೋರ್ಡ್‌ ಮೇಲೆ ಅಪಾಯಕಾರಿಯಾಗಿ ನಿಂತು ಪ್ರಯಾಣಿಸುತ್ತಿದ್ದ ಮೂವರು ಆಕಸ್ಮಿಕವಾಗಿ ಕೆಳಕ್ಕುರುಳಿ ಬಿದ್ದು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

Advertisement

ಫ‌ೂಟ್‌ ಬೋರ್ಡ್‌ ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಓರ್ವನ ಬ್ಯಾಗ್‌ ಸಿಗ್ನಲ್‌ ಪೋಸ್ಟ್‌ಗೆ ಸಿಲುಕಿಕೊಂಡಾಗ ಚಲಿಸುತ್ತಿದ್ದ ರೈಲಿನಿಂದ ಆತನ ಸಹಿತವಾಗಿ ಇನ್ನಿಬ್ಬರು ಕೂಡ ನೆಲಕ್ಕುರುಳಿ ಬಿದ್ದು ಮೃತಪಟ್ಟರೆಂದು ದಕ್ಷಿಣ ರೈಲ್ವೆ ಮೂಲಗಳು ಹೇಳಿವೆ.

ಚೆಂಗಲ್‌ಪೆಟ್‌ – ಮದ್ರಾಸ್‌ ಬೀಚ್‌ ನಡುವಿನ ನಿಗದಿತ ನಿಲುಗಡೆಯ ಫಾಸ್ಟ್‌ ಸರ್ವೀಸ್‌ ರೈಲು ಪಳವಂತಂಗಳ್‌ ಮತ್ತು ಸೈಂಟ್‌ ಥಾಮಸ್‌ ಮೌಂಟ್‌ ರೈಲು ನಿಲ್ದಾಣದ ನಡುವೆ ಚಲಿಸುತ್ತಿದ್ದಾಗ ಈ ದಾರಣ ಅವಘಡ ಸಂಭವಿಸಿತು. ಈ ಘಟನೆಯಲ್ಲಿ ಗಾಯಗೊಂಡಿರುವ ಇನ್ನೂ ಇಬ್ಬರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next