Advertisement

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು

05:42 PM Jan 17, 2021 | Team Udayavani |

ಪಣಜಿ: ಇಫಿ ಚಿತ್ರೋತ್ಸವದ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ ಯಾರು ಅತ್ಯುತ್ತಮ ಚಿತ್ರ ಪ್ರಶಸ್ತಿ ಘಗೋಲ್ಡನ್‌ ಪೀಕಾಕ್‌ ಅವಾರ್ಡ್] ಯಾರು ಪಡೆಯುತ್ತಾರೆ? ಯಾವ ದೇಶದ ಪಾಲಾಗುತ್ತದೆ ಎಂಬುದು ಸದ್ಯದ ಕುತೂಹಲ.

Advertisement

ಪ್ರತಿ ಬಾರಿ ಈ ವಿಭಾಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಹತ್ತಾರು ಕೋನಗಳಿಂದ ಅತ್ಯುತ್ತಮ ಚಿತ್ರವನ್ನು ಆಯ್ಕೆ ಮಾಡಲಾಗುತ್ತದೆ. ಇದರೊಂದಿಗೆ ಅತ್ಯುತ್ತಮ ನಟ, ನಟಿ, ನಿರ್ದೇಶಕ ಹೀಗೆ ಹಲವಾರು ಪ್ರಶಸ್ತಿಗಳಿವೆ. ಕನಿಷ್ಠ 15 ರಿಂದ 20 ಚಲನಚಿತ್ರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಈ ಬಾರಿ ಹದಿನಾಲ್ಕು ಚಿತ್ರಗಳು ಸ್ಪರ್ಧೆಯಲ್ಲಿವೆ.

ಸಿನಿ ರಸಿಕರೂ ಆಯ್ಕೆಮಾಡಿಕೊಳ್ಳುವ ಪ್ರತಿಷ್ಠಿತ ವಿಭಾಗಗಳಲ್ಲಿ ಇದೂ ಒಂದು. ಅಷ್ಟೂ ಚಿತ್ರಗಳನ್ನು ತಪ್ಪದೇ ನೋಡಿ ವಿಮರ್ಶೆ ಮಾಡಿ, ಈ ಚಿತ್ರಕ್ಕೆ ಪ್ರಶಸ್ತಿ ಬರಬಹುದು, ಈ ಕಾರಣಕ್ಕೆ ಬರಬಹುದು ಎಂದು ಕರಾರುವಕ್ಕಾಗಿ ಹೇಳುವ ಹಲವಾರು ಸಿನೆ ರಸಿಕರು ಚಿತ್ರೋತ್ಸವದಲ್ಲಿ ಕಾಣ ಸಿಗುತ್ತಾರೆ.

ಅರ್ಜೈಂಟೀನಾ ಸಿನಿಮಾ ನಿರ್ದೇಶಕ ಪ್ಯಾಬ್ಲೋ ಸೀಸರ್‌ ಈ ಬಾರಿಯ ಈ ವಿಭಾಗದ ತೀರ್ಪುಗಾರರ ಸಮಿತಿಯನ್ನು ಮುನ್ನಡೆಸುತ್ತಿರುವವರು. ಇವರೊಂದಿಗೆ ಸದಸ್ಯರಾಗಿರುವವರು ಶ್ರೀಲಂಕಾದ ಚಿತ್ರ ನಿರ್ದೇಶಕ ಪ್ರಸನ್ನ ವಿತಂಘೆ, ಆಸ್ಟ್ರಿಯಾದ ಅಬು ಬಕ್ರ್‌ ಶಾಕಿ, ಭಾರತದ ಪ್ರಿಯದರ್ಶನ್‌ ಹಾಗೂ ಬಾಂಗ್ಲಾದೇಶದ ರುಬಾಯಿತ್‌ ಹೊಸೇನ್‌.

Advertisement

ಭಾರತದ ಮೂರು ಚಿತ್ರಗಳು ಈ ಬಾರಿ ಸ್ಪರ್ಧೆಯಲ್ಲಿರುವುದು ವಿಶೇಷ. ಅಸ್ಸಾಮಿ, ಛತ್ತೀಸ್‌ಗರಿ ಹಾಗೂ ತಮಿಳು ಭಾಷೆಯ ಚಿತ್ರಗಳು ಸ್ಪರ್ಧಿಸುತ್ತಿವೆ.

ಇದನ್ನೂ ಓದಿ:ವಿಶ್ವ ಸಿನಿಮಾ ವಿಭಾಗ : 50 ಚಿತ್ರಗಳ ದೊಡ್ಡ ಪಟ್ಟಿ !

ಪೋರ್ಚುಗಲ್‌ ನ ಟಿಯಾಗೋ ಗೆಡೆಸ್‌ ನ ದಿ ಡೊಮೇನ್‌, ಬಲ್ಗೇರಿಯಾದ ಕಮೇನ್‌ ಕಲೇವ್‌ ನ ಫೆಬ್ರವರಿ, ಫ್ರಾನ್ಸ್‌ನ ನಿಕೋಲಸ್ ಮೌರಿಯ ಮೈ ಬೆಸ್ಟ್‌ ಪಾರ್ಟ್‌, ಐರ್‌ ಲ್ಯಾಂಡ್‌ನ ಪಿಯೊಟ್ರ್‌ ದಾಮಲೆವಿಸ್ಕಿಯ ಐ ನೆವರ್‌ ಕ್ರೈ, ಚಿಲಿಯ ಲಿನೊರ್ಡೊ ಮೆಡೆಲ್‌ ನ ಲಾ ವಿರೊನಿಕಾ, ಸೌತ್‌ ಕೊರಿಯಾದ ಶಿನ್‌ ಸುವೊನ್ ನ ಲೈಟ್‌ ಫಾರ್‌ ದಿ ಯೂತ್, ಸ್ಪೇನ್‌ ನ ಲುಯಿಸ್‌ ಪ್ಯಾಟಿನೊ ನ ರೆಡ್‌ ಮೂನ್‌, ಇರಾನ್‌ ನ ಆಲಿ ಗವಿತಾನ್‌ ನ ಡ್ರೀಮ್‌ ಅಬೌಟ್‌ ಸೊಹ್ರಾಬ್‌, ಇರಾನಿನ ರಮೀನ್‌ ರಸೊಲಿಯ ದಿ ಡಾಗ್ಸ್‌ ಡಿಡ್‌ ನಾಟ್‌ ಸ್ಲೀಪ್‌, ತೈವಾನ್‌ನ ಕೊಚೆನ್‌ ನೆನ್‌ ನ ದಿ ಸೈಲೆಂಟ್‌ ಫಾರೆಸ್ಟ್‌ ಭಾರತದ ಕೃಪಾಲ್‌ ಕಲಿತಾ ರ ಬ್ರಿಡ್ಜ್‌, ಸಿದ್ಧಾರ್ಥ ತ್ರಿಪಾಠಿಯ ಎ ಡಾಗ್‌ ಆ್ಯಂಡ್‌ ಹಿಸ್‌ ಮ್ಯಾನ್‌ ಹಾಗೂ ಗಣೇಶ್‌ ವಿನಾಯಕನ್‌ ನ ಥಾಯನ್ ಚಿತ್ರ ಸ್ಪರ್ಧೆಯಲ್ಲಿವೆ.

ಅತ್ಯುತ್ತಮ ಚಿತ್ರಕ್ಕೆ ನಲವತ್ತು ಲಕ್ಷ ರೂ ಹಾಗೂ ಗೋಲ್ಡನ್‌ ಪೀಕಾಕ್‌ ಪಾರಿತೋಷಕ, ಅತ್ಯುತ್ತಮ ನಿರ್ದೇಶಕನಿಗೆ ಹದಿನೈದು ಲಕ್ಷ ರೂ. ಹಾಗೂ ರಜತ ಪಾರಿತೋಷಕ, ಅತ್ಯುತ್ತಮ ನಟ ಮತ್ತು ನಟಿಯರಿಗೆ ತಲಾ ಹತ್ತು ಲಕ್ಷ ರೂ ಹಾಗೂ ಪಾರಿತೋಷಕವಿರುತ್ತದೆ. ಇದಲ್ಲದೇ ತೀರ್ಪುಗಾರರ ವಿಶೇಷ ಪ್ರಶಸ್ತಿಯೂ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next