ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಮೂವರು ಬಾಂಗ್ಲಾದೇಶದ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಮಾಹಿತಿ ಮೇರೆಗೆ ಬೆಳ್ಳಂದೂರು ಪೊಲೀ ಸರು ಬಂಧಿಸಿದ್ದಾರೆ.
ಬಾಂಗ್ಲಾದೇಶ ಮೂಲದ ಖಲೀಲ್ ಚಪ ರಾಸಿ, ಅಬ್ದುಲ್ ಖಾದರ್, ಮೊಹ ಮ್ಮದ್ ಜಹೀದ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು 10 ವರ್ಷ ಹಿಂದೆಯೇ ಬೆಂಗ ಳೂರಿಗೆ ಬಂದಿದ್ದು, ಬೆಳ್ಳಂದೂರಿ ನಲ್ಲಿ ವಾಸವಾಗಿದ್ದಾರೆ. ಖಲಿಲ್ ಚಪರಾಸಿ ಮತ್ತು ಮೊಹಮ್ಮದ್ ಜಹೀದ್ ಹೌಸ್‌ಕಿಪಿಂಗ್ ಹಾಗೂ ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದು, ಅಕ್ರಮವಾಗಿ ಗಡಿಭಾಗದಲ್ಲಿ ಮಧ್ಯಸ್ಥರ ಮೂಲಕ ದೇಶಕ್ಕೆ ಬಂದಿದ್ದಾರೆ. ಅಬ್ದುಲ್ ಖಾದರ್ ಬಳಿ ಪಾಸ್‌ಪೋರ್ಟ್, ವೀಸಾ ಪತ್ತೆಯಾಗಿದ್ದು, ಈತ ಆಗಾಗ್ಗೆ ಕೆಲಸ ನಿಮಿತ್ತ ಬಂದು ಹೋಗುತ್ತಿದ್ದಾನೆ. ಆದರೆ, ಬಾಂಗ್ಲಾದೇಶದ ನಾಗರಿಕರನ್ನು ಅಕ್ರಮವಾಗಿ ದೇಶದ ಗಡಿದಾಟಿಸುತ್ತಿದ್ದ ಎಂಬ ಮಾಹಿತಿ ಮೇರೆಗೆ ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ವಿದೇಶಿ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಪ್ರಕರಣವೊಂದರ ತನಿಖೆ ವೇಳೆ ಆರೋಪಿಗಳ ಸುಳಿವು ಸಿಕ್ಕಿತ್ತು. ಈ ಮಾಹಿತಿ ಮೇರೆಗೆ ಬೆಳ್ಳಂ ದೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.