Advertisement
ಪೆರಿಯಡ್ಕದಲ್ಲಿ ರಸ್ತೆ ಬದಿಯಲ್ಲಿ ಇದ್ದ ಬೃಹತ್ ದೇವದಾರು ಮರ ಹಲವು ಸಮಯದಿಂದ ವಾಲಿಕೊಂಡು ನಿಂತಿದ್ದು, ರವಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಬುಡ ಸಮೇತ ಉರುಳಿ ಬಿದ್ದಿತು. ತತ್‌ಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದರೂ ಮೂರು ತಾಸಿನ ಬಳಿಕವೂ ಅವರ ಆಗಮನ ವಾಗಲಿಲ್ಲ. ಬಳಿಕ ಸ್ಥಳೀಯ ಗ್ರಾಮ ಪಂಚಾ ಯತ್ ಸದಸ್ಯರು ಊರವರ ಸಹಕಾರದೊಂದಿಗೆ ರೆಂಬೆ, ಕೊಂಬೆಗಳನ್ನು ಕಡಿದು ಮರವನ್ನು ಬದಿಗೆ ಸರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮರ ಉರುಳುವ ಕೆಲವೇ ಕ್ಷಣಗಳಿಗೆ ಮುನ್ನ ಬೆಂಗ ಳೂರಿ ನಿಂದ ಬಸ್‌ನಲ್ಲಿ ಉಪ್ಪಿನಂಗಡಿಗೆ ಬಂದು ಬಳಿಕ ಕಾರಿ ನಲ್ಲಿ ಕೊçಲಕ್ಕೆ ತೆರಳುತ್ತಿದ್ದ ನಾಲ್ವರಿದ್ದ ಕಾರೊಂದು ಇದೇ ದಾರಿಯಿಂದ ಹಾದುಹೋಗಿತ್ತು. ಕಾರು ಸಾಗು ತ್ತಿದ್ದಂತೆಯೇ ಮರ ಉರುಳಿತು ಎಂದು ಪ್ರತ್ಯಕ್ಷದರ್ಶಿ ಸ್ಥಳೀಯರು ಘಟನೆ ಬಗ್ಗೆ ವಿವರಿಸಿದರು. ಮರ ಬಿದ್ದ ತತ್‌ಕ್ಷಣ ಅರಣ್ಯ ಇಲಾಖೆಗೆ ಮತ್ತು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಪೊಲೀಸ್ ಠಾಣೆಯ ಹೈವೇ ಪಟ್ರೋಲ್ ವಾಹನ ಕೂಡಲೇ ಸ್ಥಳಕ್ಕೆ ಬಂದರೂ ಅರಣ್ಯ ಇಲಾಖೆಯವರು ಬರಲೇ ಇಲ್ಲ. ಬಳಿಕ ಗ್ರಾ.ಪಂ. ಸದಸ್ಯ ಯು.ಕೆ. ಇಬ್ರಾಹಿಂ ಮತ್ತು ಸ್ಥಳೀಯ ಪ್ರತಾಪ್ ಅವರು ಮರ ಕೊಯ್ಯುವ ಯಂತ್ರ ವೊಂದನ್ನು ತರಿಸಿ ಗೆಲ್ಲು , ರೆಂಬೆಗಳನ್ನು ತುಂಡರಿಸಿದರು.
Related Articles
ಅಪಾಯಕಾರಿ ಮರ ತೆರವು ಮಾಡುವ ಬಗ್ಗೆ ಜನ ಸಂಪರ್ಕ ಸಭೆ, ಗ್ರಾಮ ಸಭೆ, ಪಂಚಾಯತ್ ಸಭೆಗಳ ಮೂಲಕ ಅರಣ್ಯ ಇಲಾಖೆಗೆ ತಿಳಿಸಲಾಗುತ್ತದೆ. ಆದರೆ ಇಲಾಖೆಯವರು ನಿರ್ಲಕ್ಷ é ತೋರುತ್ತ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇದೀಗ ಬಹಳ ಅಗತ್ಯದ ಕೆಲಸಕ್ಕೆ ಜರೂರಾಗಿ ಮಂಗಳೂರಿಗೆ ಹೋಗಬೇಕಾಗಿತ್ತು. ಅಮೂಲ್ಯವಾದ ಎರಡು ತಾಸು ಇಲ್ಲೇ ಕಳೆದು ಹೋಯಿತು. ನಮ್ಮ ಸಂಕಷ್ಟಗಳೂ ಅರಣ್ಯ ಇಲಾಖೆಯವರಿಗೆ ಅರ್ಥ ಆಗುವು ದಿಲ್ಲ ಎಂದು ಬಸ್ ಮತ್ತು ಇತರ ವಾಹನಗಳಲ್ಲಿ ಇದ್ದ ಪ್ರಯಾಣಿಕರು ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.
ಕೆಲವು ವಾಹನಗಳವರು ಕೊçಲದಿಂದ ಗಂಡಿಬಾಗಿಲು ರಸ್ತೆಯಾಗಿ ಉಪ್ಪಿನಂಗಡಿಗೆ ಯಾನ ಮುಂದುವರಿಸಿದ್ದರು.
Advertisement