Advertisement

“ಭರಾಟೆ’ಗೆ ಮೂವರು ನಿರ್ದೇಶಕರ ಸಾಥ್‌

10:28 AM Sep 27, 2019 | Lakshmi GovindaRaju |

ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದ ಎರಡು ಹಾಡುಗಳು ಈಗಾಗಲೇ ಹಿಟ್‌ ಆಗಿದ್ದು, ಗೊತ್ತೇ ಇದೆ. ಈಗ ಚಿತ್ರತಂಡ ಹೀರೋ ಇಂಟ್ರಡಕ್ಷನ್‌ ವಿಡಿಯೋ ಸಾಂಗ್‌ ಬಿಡುಗಡೆ ಮಾಡಿದೆ. ಬುಧವಾರ ನಿರ್ದೇಶಕರಾದ ತರುಣ್‌ ಸುಧೀರ್‌, ನರ್ತನ್‌ ಹಾಗು ಮಹೇಶ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ನಿರ್ದೇಶಕ ಚೇತನ್‌ಕುಮಾರ್‌ ಬರೆದಿರುವ “ಹೀ ಇಸ್‌ ಎ ಗೈಡೋ, ರಾಜಸ್ಥಾನ್‌ ಪ್ರೈಡೋ..’ ಎಂಬ ಹಾಡಿಗೆ ಚಂದನ್‌ ಶೆಟ್ಟಿ ಧ್ವನಿಯಾಗಿದ್ದಾರೆ. ಅರ್ಜುನ್‌ ಜನ್ಯ ಸಂಗೀತವಿರುವ ಈ ಹಾಡಿಗೆ ಮುರಳಿ ನೃತ್ಯ ಸಂಯೋಜಿಸಿದ್ದಾರೆ.

Advertisement

ಇಂಟ್ರಡಕ್ಷನ್‌ ಸಾಂಗ್‌ ರಿಲೀಸ್‌ ಮಾಡಿ ಮಾತನಾಡಿದ ತರುಣ್‌ ಸುಧೀರ್‌, “ಹಾಡು ಜೋಶ್‌ಫ‌ುಲ್‌ ಆಗಿದೆ. ಅಷ್ಟೇ ಎನರ್ಜಿಯಾಗಿದೆ. ಗೆಳೆಯ ಚೇತನ್‌ ಅದ್ಭುತ ಸಾಲುಗಳನ್ನು ಪೋಣಿಸಿ ಹಾಡು ಬರೆದಿದ್ದಾರೆ. ಇಲ್ಲಿ ಎಲ್ಲವೂ ರಿಚ್‌ ಆಗಿದೆ. ಹಾಡು ನೋಡಿದಾಗ, ಶ್ರೀಮುರಳಿ ಅವರೊಂದಿಗೆ ನಿರ್ಮಾಪಕ ಸುಪ್ರಿತ್‌ ಕಾಣುತ್ತಾರೆ. ಅಷ್ಟೊಂದು ಭರ್ಜರಿಯಾಗಿ, ಅದ್ಧೂರಿಯಾಗಿ ಹಾಡು ಮೂಡಿಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಶುಭಹಾರೈಸಿದರು ತರುಣ್‌ ಸುಧೀರ್‌.

ಶ್ರೀಮುರಳಿ ಅವರಿಗೆ ನಿರ್ದೇಶಕರು ತಮ್ಮ ಇಂಟ್ರಡಕ್ಷನ್‌ ಹಾಡನ್ನು ತೋರಿಸಿರಲಿಲ್ಲವಂತೆ. ಈಗ ಹಾಡು ನೋಡಿದ ಮೇಲೆ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ ಎನ್ನುವ ಶ್ರೀಮುರಳಿ, ನಾವು ಎಷ್ಟೇ ಚೆನ್ನಾಗಿ ಕಂಡರೂ ಅದಕ್ಕೆಲ್ಲಾ ಕಾರಣ ನನ್ನ ಚಿತ್ರತಂಡ. ಎಲ್ಲಾ ಕ್ರೆಡಿಟ್‌ ಟೀಮ್‌ಗೆ ಸಲ್ಲಬೇಕು. ಈ ಚಿತ್ರದ ಎರಡು ಹಾಡುಗಳನ್ನು ಜನ ಮೆಚ್ಚಿಕೊಂಡು ಗೆಲ್ಲಿಸಿದ್ದಾಗಿದೆ. ಈ ಹಾಡನ್ನೂ ನಿಮಗೆ ಒಪ್ಪಿಸಿದ್ದೇವೆ. ನೋಡಿ, ಹರಸಿ’ ಎಂದರು ಶ್ರೀಮುರಳಿ.

ನಿರ್ದೇಶಕ ಚೇತನ್‌ಕುಮಾರ್‌ ಅವರಿಗೆ ತರುಣ್‌ ಸುಧೀರ್‌, ನರ್ತನ್‌ ಹಾಗು ಸಂತೋಷ್‌ ಆನಂದ್‌ರಾಮ್‌ ಅವರಿಂದಲೇ ಇಂಟ್ರಡಕ್ಷನ್‌ ಹಾಡನ್ನು ಬಿಡುಗಡೆ ಮಾಡಿಸುವ ಆಸೆ ಇತ್ತಂತೆ. ಅದು ಈಡೇರಿದ್ದರಿಂದ ಅವರ ಖುಷಿಗೆ ಪಾರವೇ ಇಲ್ಲವಂತೆ. ನನಗೆ ಹೀರೋ ಇಂಟ್ರಡಕ್ಷನ್‌ ಸಾಂಗ್‌ ಬರೆಯುವುದೆಂದರೆ ಖುಷಿ. ಅದರಲ್ಲೂ ಪಾತ್ರವನ್ನು ವರ್ಣಿಸುವುದು ಇನ್ನಷ್ಟು ಎನರ್ಜಿ ಕೊಡುತ್ತದೆ. ಹಾಗಾಗಿ ಈ ಹಾಡು ಅಷ್ಟೇ ಪವರ್‌ಫ‌ುಲ್‌ ಆಗಿ ಮೂಡಿಬಂದಿದೆ.

ಅರ್ಜುನ್‌ ಜನ್ಯ ಸರ್‌ಗೆ, ಗೆಳೆಯ ಚಂದನ್‌ಶೆಟ್ಟಿ ಅವರಿಗೆ ಮತ್ತು ನೃತ್ಯ ಸಂಯೋಜಿಸಿದ ಮುರಳಿ ಅವರಿಗೆ ಥ್ಯಾಂಕ್ಸ್‌ ಹೇಳ್ತೀನಿ. ಶ್ರೀಮುರಳಿ ಸರ್‌ ಕೂಡ ಬಿಸಿಲು ಲೆಕ್ಕಿಸದೆ ಸಹಕರಿಸಿ, ಒಳ್ಳೆಯ ಹಾಡು ಮೂಡಿಬರಲು ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಚೇತನ್‌. ಮಹೇಶ್‌, ಶ್ಯಾಮ್‌, ನರ್ತನ್‌ ಹಾಡಿನ ಕುರಿತು ಮಾತಾಡಿದರು. ಚಿತ್ರದ ಹಾಡಿಗೆ ಭುವನ್‌ಗೌಡ ಕ್ಯಾಮೆರಾ ಹಿಡಿದರೆ, ಚಿತ್ರಕ್ಕೆ ಗಿರಿ ಛಾಯಾಗ್ರಹಣವಿದೆ. ಅಕ್ಟೋಬರ್‌ 18 ರಂದು ಚಿತ್ರ ಬಿಡುಗಡೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next