Advertisement

ಕೋವಿಡ್-19ಗೆ ಮೂರನೇ ಬಲಿ: ಕಲಬುರಗಿ ಜನತೆಯಿಂದ ಸ್ವಯಂ ನಿರ್ಬಂಧ

09:05 AM Apr 14, 2020 | Hari Prasad |

ಕಲಬುರಗಿ: ಕೋವಿಡ್-19 ಸೋಂಕಿಗೆ ಕಲಬುರಗಿ ನಗರದಲ್ಲಿ ಮೂರನೇ ಬಲಿಯಾಗಿದ್ದರಿಂದ ಜನತೆಯಲ್ಲಿ ಆತಂಕವೂ ಹೆಚ್ಚಾಗಿದೆ. ಹಲವು ಬಡಾವಣೆಗಳ ಜನರು ಸ್ವಯಂ ನಿರ್ಬಂಧದ ಮೊರೆ ಹೋಗಿದ್ದಾರೆ.

Advertisement

ಸೋಮವಾರ ಸಂಜೆ ಕೋವಿಡ್-19 ಪೀಡಿತ 55 ವರ್ಷದ ಬಟ್ಟೆ ವ್ಯಾಪಾರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ವಿಷಯ ತಿಳಿಯುತ್ತದಂತೆ ನಾಗರಿಕರು ತಮ್ಮ ಬಡಾವಣೆಗೆ ಬೇರೆ ಪ್ರದೇಶದ ಜನರು ಬಾರದಂತೆ ರಸ್ತೆ ಬಂದ್ ಮಾಡಿದ್ದಾರೆ.‌

ಬಡಾವಣೆ ಹಾಗೂ ತಾವು ವಾಸವಿದ್ದ ಗಲ್ಲಿಯ ಮುಖ್ಯ ರಸ್ತೆಗೆ ಅಡ್ಡಲಾಗಿ ಕಲ್ಲು, ಮಣ್ಣು, ತೆಂಗಿನ ಗರಿ ಹಾಕಿದ್ದಾರೆ. ಅಲ್ಲದೇ, ಹಗ್ಗಕ್ಕೆ ಕಟ್ಟಿ ಬಟ್ಟೆ ತುಣುಕುಗಳನ್ನು ನೇತು ಹಾಕಿ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 413 ಜನರ ಗಂಟಲು ಮಾದರಿಯನ್ನು ಸಂಗ್ರಹಿಸಲಾಗಿದೆ. 311 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. 13 ಜನರಿಗೆ ಕೋವಿಡ್-19 ಪಾಸಿಟಿವ್ ಇದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ.‌

ಎರಡು ವರದಿಗಳು ತಾಂತ್ರಿಕ ಕಾರಣದಿಂದ ಬಂದಿಲ್ಲ.‌ ಇನ್ನು, 87 ಮಾದರಿ‌ ಪರೀಕ್ಷಾ ವರದಿಗಳು ಬಾಕಿ ಇವೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳಿಗೆ ನೇರ ಸಂಪರ್ಕಕ್ಕೆ ಬಂದ 253 ಜನ ಹಾಗೂ ಎರಡನೇ ಸಂಪರ್ಕಕ್ಕೆ ಬಂದ 1028 ಜನರೆಂದು ಗುರುತಿಸಲಾಗಿದೆ.

Advertisement

ವಿದೇಶದಿಂದ ಜಿಲ್ಲೆಗೆ ಮರಳಿದ 488 ಜನರನ್ನು ಪತ್ತೆ ಹಚ್ಚಾಲಾಗಿದೆ.‌ 745 ಜನ 14 ದಿನಗಳ ಹೋಂ ಕ್ವಾರಂಟೈನ್ ಹಾಗೂ‌ 799 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ನಲ್ಲಿ‌ದ್ದಾರೆ. 171 ಜನ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದು, ಸ್ವಯಂ ವರದಿ ಮಾಡಿಕೊಳ್ಳುತ್ತಿದ್ದಾರೆ.‌

Advertisement

Udayavani is now on Telegram. Click here to join our channel and stay updated with the latest news.

Next