Advertisement
ಮೃತ ವಿದ್ಯಾರ್ಥಿಗಳನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿಯ ಆಕಾಂûಾ ಪಲ್ಲಕ್ಕಿ(16), ಶ್ರೇಯಸ್ (15) ಮತ್ತು ಶ್ರೀರಾಮಪುರದ ಶಾಂತಮೂರ್ತಿ (15) ಎಂದು ಗುರುತಿಸಲಾಗಿದೆ. ಮೃತರಾಗಿರುವ ತಿಮ್ಮನಹಳ್ಳಿಯ ಇಬ್ಬರೂ ವಿದ್ಯಾರ್ಥಿಗಳು ಸಚಿವ ಜಯಚಂದ್ರ ಅವರ ರಕ್ತ ಸಂಬಂಧಿಗಳ ಮಕ್ಕಳು.
Related Articles
ಬುಧವಾರ ರಾತ್ರಿ ಎಂದಿನಂತೆ ಹಾಸ್ಟೆಲ್‌ನಲ್ಲಿ 29 ಮಂದಿ ಮಕ್ಕಳು ಊಟಕ್ಕೆ ಕುಳಿತಿದ್ದರು. ಮೃತ 3 ಮಕ್ಕಳು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುದರ್ಶನ್ (14) ಮತ್ತು ವಾಚ್‌ಮೆನ್ ರಮೇಶ್ (50) ಚಪಾತಿ ತಿನ್ನದೆ ಕೇವಲ ಅನ್ನಸಾಂಬಾರ್ ಸೇವಿಸಿದ್ದರು. ಸಾಂಬಾರು ಕಹಿಯಾಗಿದ್ದರಿಂದ ಉಳಿದವರಿಗೆ ಸೇವಿಸಬೇಡಿ ಎಂದು ಹೇಳಿ, ಅವರು ಅಲ್ಲಿಂದ ತೆರಳಿದರು. ಅಲ್ಲಿಂದ ತೆರಳುತ್ತಿದ್ದಂತೆ ಅವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿತು. ತಕ್ಷಣ ಅವರಿಗೆ ಪಟ್ಟಣದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದೊಯ್ಯಲಾಯಿತು.
Advertisement
ಮಾರ್ಗಮಧ್ಯೆ ಮೂವರು ಮಕ್ಕಳೂ ಮೃತಪಟ್ಟರು. ಉಳಿದರಿಬ್ಬರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಮಕ್ಕಳ ಪೋಷಕರು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶಾಲೆಯ ಮುಖ್ಯಸœ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‌ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ, ಅಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೆ, ಆಹಾರ ಪದಾರ್ಥಗಳನ್ನು ತಪಾಸಣೆಗಾಗಿ ಬೆಂಗಳೂರು ಲ್ಯಾಬ್‌ಗ ತೆಗೆದುಕೊಂಡು ಹೋಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ ಜಯಚಂದ್ರ, ಶಾಸಕರಾದ ಸಿ.ಬಿ ಸುರೇಶಬಾಬು, ಡಾ. ಎಸ್. ರಫೀಕ್ ಅಹಮದ್ ಮತ್ತಿತರರು ಭೇಟಿ ನೀಡಿ ಮೃತ ವಿದ್ಯಾರ್ಥಿಗಳ ಪೋಷಕರಿಗೆ ಸಾಂತ್ವನ ಹೇಳಿದರು.
ನಾಲ್ವರ ಬಂಧನ:ಹಾಸ್ಟೆಲ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ ತೋರಿದ್ದಾರೆ ಎಂದು ಅಡುಗೆ ಭಟ್ಟ ಶಿವಣ್ಣ, ಅಡುಗೆ ಸಹಾಯಕಿ ರಂಗಲಕ್ಷಿ¾à, ಹಾಸ್ಟೆಲ್ ಮೇಲ್ವಿಚಾರಕ ಸಹಾಯಕ ಜಗದೀಶ್ ಹಾಗೂ ಫುಡ್ ಇನ್‌ಚಾರ್ಜ್ ಸುಹಾಸ್ ಅವರನ್ನು ಬಂಧಿಸಲಾಗಿದೆ. ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಕ್ಸಿಜನ್, ಆಂಬ್ಯೂಲೆನ್ಸ್ ಇಲ್ಲದ್ದೆ ಮಕ್ಕಳ ಪ್ರಾಣಕ್ಕೆ ಕುತ್ತು:
ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಕ್ಕಿದ್ದರೆ ಮೂವರೂ ಮಕ್ಕಳ ಪ್ರಾಣ ಉಳಿಯುತ್ತಿತ್ತು. ಅಸ್ವಸ್ಥರಾದ ಮಕ್ಕಳಿಗೆ ಆಕ್ಸಿಜನ್ ಕೊಡಿಸಲು ವೈದ್ಯರು ಸೂಚನೆ ನೀಡಿದರಾದರೂ ಹುಳಿಯಾರು, ಚಿಕ್ಕನಾಯ್ಕನಹಳ್ಳಿ ಹಾಗೂ ತಿಪಟೂರು ಆಸ್ಪತ್ರೆಗಳಲ್ಲಿ ವಿಚಾರಿಸಿದರೆ ಎಲ್ಲಿಯೂ ಆಕ್ಸಿಜನ್ ಇರಲಿಲ್ಲ. ಆ್ಯಂಬುಲೆನ್ಸ್ ಕೂಡ ಸಿಗಲಿಲ್ಲ. ಬಾಡಿಗೆ ವಾಹನ ಮಾಡಿಕೊಂಡು ತುಮಕೂರಿಗೆ ಕರೆದೊಯ್ಯುವ ವೇಳೆಗೆ ಅವರು ಅಸುನೀಗಿದ್ದರು. ಸಾವಿನಲ್ಲೂ 25 ಮಕ್ಕಳ ಜೀವ ಉಳಿಸಿದರು:
ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದರಾದರೂ, ಸಾಂಬಾರ್ ಕಹಿಯಾಗಿದೆ ತಿನ್ನಬೇಡಿ ಎಂದು ಉಳಿದವರಿಗೆ ಹೇಳಿದ ಕಾರಣ ಇತರ 25 ಮಕ್ಕಳ ಜೀವ ಳಿಯಿತು. ಶಾಲೆಗೆ ಅಘೋಷಿತ ರಜೆ:
ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ಹಾಸ್ಟೇಲ್ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಉಳಿದ ಪೋಷಕರೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿಲ್ಲ. ಆಡಳಿತ ಮಂಡಳಿ ಕೂಡ ಗುರುವಾರ ಬೆಳಗ್ಗೆ ವ್ಯಾನ್ ವ್ಯವಸ್ಥೆ ಮಾಡದ ಕಾರಣ ವಿದ್ಯಾರ್ಥಿಗಳಾರೂ ಶಾಲೆಗೆ ಹಾಜರಾಗಿರಲಿಲ್ಲ.