Advertisement

ಬೆಂಗಳೂರಿಗೆ ಬಂದ ಮೂವರಲ್ಲಿ ಬ್ರಿಟನ್ ರೂಪಾಂತರಿ ಕೋವಿಡ್ ವೈರಸ್ ಪತ್ತೆ!

01:26 PM Dec 29, 2020 | keerthan |

ಬೆಂಗಳೂರು: ಹೊಸ ರೂಪಾಂತರಿತ ಕೋವಿಡ್ ಸೋಂಕಿನ ಆತಂಕ ಹೆಚ್ಚುತ್ತಿರುವ ಸಮಯದಲ್ಲೇ ಭಾರತಕ್ಕೆ ಆಗಮಿಸಿರುವ ಆರು ಜನರಲ್ಲಿ ಬ್ರಿಟನ್ ರೂಪಾಂತರಿತ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

Advertisement

ಅದರಲ್ಲೂ ಬೆಂಗಳೂರಿಗೆ ಆಗಮಿಸಿರುವ ಮೂವರಲ್ಲಿ ಈ ಕೋವಿಡ್ ಸೋಂಕು ಕಾಣಿಸಿಕಂಡಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ನಿಮ್ಹಾನ್ಸ್ ನಲ್ಲಿ ನಡೆದ ವಂಶವಾಹಿನಿ ಪರೀಕ್ಷೆಯಿಂದ ಮೂವರಿಗೆ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿರುವುದು. ಈ ಮೂವರು ಪ್ರಯಾಣಿಕರನ್ನು ಆಸ್ಪತ್ರೆಯ ಐಸೋಲೇಷನ್ ವಾರ್ಡನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಇಂಗ್ಲೆಂಡ್ ನಿಂದ ಬಂದ 2,127 ಪ್ರಯಾಣಿಕರ ಪೈಕಿ 1,766 ಮಂದಿಯನ್ನು ಪತ್ತೆಮಾಡಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 27 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿತ್ತು. ಇವರಿಗೆ ತಗುಲಿರುವುದು ಬ್ರಿಟನ್ ರೂಪಾಂತರವೇ ಎಂಬುದನ್ನು ತಿಳಿಯಲು ನಿಮ್ಹಾನ್ಸ್ ನಲ್ಲಿ ವಂಶವಾಹಿನಿ ಪರೀಕ್ಷೆ ನಡೆಯುತ್ತಿತ್ತು.

ಹೈದರಾಬಾದ್​ನ ಸೆಲ್ಯುಲಾರ್​ ಆ್ಯಂಡ್ ಮಾಲಿಕ್ಯುಲಾರ್ ಬಯಾಲಜಿ ಸೆಂಟರ್​ ನಲ್ಲಿ ಇಬ್ಬರಿಗೆ ಹೊಸ ಮಾದರಿಯ ಕೋವಿಡ್ ಪತ್ತೆಯಾಗಿರುವುದು ದೃಢವಾಗಿದೆ. ಇನ್ನೊಂದು ಪ್ರಕರಣ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ದೃಢಪಟ್ಟಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next