Advertisement
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಶೋಕ್ ಅವರು, ”FSL ವರದಿಯಲ್ಲಿ ಘೋಷಣೆ ಕೂಗಿದ್ದು ಧೃಢಪಟ್ಟ ನಂತರವೇ ಈ ಮೂವರು ಆರೋಪಿಗಳ ಬಂಧನವಾಗಿರುವುದು ಸ್ಪಷ್ಟಾಗಿದ್ದರೂ, ಸರ್ಕಾರ ಇನ್ನೂ FSL ವರದಿ ಬಹಿರಂಗ ಮಾಡದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ, ಯಾರನ್ನೂ ರಕ್ಷಿಸುತ್ತಿಲ್ಲ ಎನ್ನುವುದಾದರೆ ವರದಿ ಬಹಿರಂಗ ಮಾಡಲು ಹಿಂಜರಿಕೆ ಏಕೆ? ಎಂದು ಪ್ರಶ್ನಿಸಿದ್ದಾರೆ.
Related Articles
Advertisement
”FSL ವರದಿ ಬರುವ ಮುನ್ನವೇ ಮಾಧ್ಯಮಗಳ ಮೇಲೆ ಪಕ್ಷಪಾತ, ವಿಡಿಯೋ ತಿರುಚಿರುವ ಆರೋಪ ಹೊರಿಸಿದರಲ್ಲ ಸಚಿವ ಪ್ರಿಯಾಂಕ್ ಖರ್ಗೆಅವರೇ, ದೇಶ ವಿಭಜಕರ ಭಜನೆ ಮಾಡುವ ನಿಮಗೆ ಸಚಿವರಾಗಿ, ಶಾಸಕರಾಗಿ ಮುಂದುವರೆಯುವ ಯಾವ ಅರ್ಹತೆ, ನೈತಿಕತೆ, ಯೋಗ್ಯತೆ ಉಳಿದಿದೆ? ದೇಶದ ಸಾರ್ವಭೌಮತೆಯ ಬಗ್ಗೆ ನಿಷ್ಠೆ ಹೊಂದಿರುತ್ತೇನೆ, ರಕ್ಷಣೆ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ದೇಶದ್ರೋಹಿಗಳ ಪರ ವಹಿಸಿಕೊಳ್ಳುವ ತಾವು ಸಂವಿಧಾನ ದ್ರೋಹಿ, ದೇಶದ್ರೋಹಿ ಅಲ್ಲದೆ ಮತ್ತೇನು?” ಎಂದು ಆಕ್ರೋಶ ಹೊರ ಹಾಕಿದ್ದಾರೆ. ”FSL ವರದಿ ಬರುವ ಮುನ್ನವೇ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿಯೇ ಇಲ್ಲ ಅಂತ ನಿಮ್ಮ ಬ್ರದರ್ಸ್ ಪರ ತೀರ್ಪು ಕೊಟ್ಟುಬಿಟ್ಟರಲ್ಲ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ದೇಶದ್ರೋಹಿಗಳನ್ನು ರಕ್ಷಿಸಲು ಹೆತ್ತ ತಾಯಿಯಂತಹ ಭಾರತ ಮಾತೆಗೇ ದ್ರೋಹ ಬಗೆಯುವುದು ಮಹಾ ಪಾಪವಲ್ಲವೇ?” ಎಂದು ಆಕ್ರೋಶ ಹೊರ ಹಾಕಿದ್ದಾರೆ. ಐಜಿಪಿಗೆ ಮನವಿ
ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ಕೂಗಿರುವುದರ ಕುರಿತ ಎಫ್‍ಎಸ್‍ಎಲ್ ವರದಿ ಬಹಿರಂಗಪಡಿಸುವಂತೆ ಬಿಜೆಪಿ ನಿಯೋಗ ಇಂದು ಐಜಿಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಶಾಸಕರಾದ ರವಿ ಸುಬ್ರಹ್ಮಣ್ಯ, ಸಿ.ಕೆ. ರಾಮಮೂರ್ತಿ, ಉದಯ್ ಬಿ.ಗರುಡಾಚಾರ್, ಧೀರಜ್ ಮುನಿರಾಜು ಉಪಸ್ಥಿತರಿದ್ದರು.