ಹೊಸಪೇಟೆ: ಟ್ರಾನ್ಸ್ ಫಾರ್ಮರ್‌ಗೆ ಹಾಕಲು ಬಳಸುತ್ತಿದ್ದ ಲಕ್ಷಾಂತರ ರೂ. ಮೌಲ್ಯ ಬೆಲೆಬಾಳುವ ಆಯಿಲ್ ಹಾಗೂ ಗ್ರೀಸ್ ಕದಿಯುತ್ತಿದ್ದ ಮೂವರು ಕಳ್ಳರನ್ನು ನಗರದ ಗ್ರಾಮೀಣ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಮಂಜುನಾಥ (30), ಮುಸ್ತಾಕ್ ಖೈಯಿಯಾ (25) ಹಾಗೂ ದಾವಣಗೆರೆ ಮೂಲದ ಸಿ ಗಜೇಂದ್ರ (29) ಬಂಧಿತ ಆರೋಪಿಗಳು.
ನಗರದ ಹೊರವಲಯದ ಜಂಬುನಾಥಹಳ್ಳಿ ಪ್ರದೇಶದಲ್ಲಿ ಸಂಗ್ರಹಿಸಿಟ್ಟದ್ದ 16,09,300 ರೂ. ಬೆಲೆಬಾಳುವ 70 ಬ್ಯಾರೆಲ್ ಆಯಿಲ್, 8, 50,000 ರೂ. ಬೆಲೆಬಾಳುವ 17 ಬ್ಯಾರೆಲ್ ಗ್ರೀಸ್ ಹಾಗೂ 7 ಲಕ್ಷ ರೂ. ಬೆಲೆ ಬಾಳುವ ಬೊಲೇರೋ ಪಿಕ್ ಅಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹೇಳಿಕೆ ತಿರುಚಿದ್ದಕ್ಕೆ ಸಚಿವ ಗಡ್ಕರಿ ಕೆಂಡ: ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ
ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ಠಾಣೆ ಪಿಐ ಶ್ರೀನಿವಾಸ ಮೇಟಿ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಮಂಜುನಾಥ ಮೇಟಿ, ಕೊಟ್ರೇಶ ಜಿ, ಅಡೆವಪ್ಪ ಕಬ್ಬಳ್ಳಿ, ಸಣ್ಣಗಾಳಪ್ಪ, ಕೊಟ್ರೇಶ ಎ, ಚಂದ್ರಪ್ಪ ಬಿ, ನಾಗರಾಜ ಬಿ, ಸಂತೋಷ್ ಕುಮಾರ್ ಹಾಗೂ ಅಬ್ದುಲ್ ನಜೀರ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.