Advertisement

ಗಾಂಜಾ ಮಾರುತ್ತಿದ್ದ ಮೂವರ ಬಂಧನ

11:41 AM Jan 12, 2018 | Team Udayavani |

ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ  ಸಾಫ್ಟ್ವೇರ್‌ ಉದ್ಯೋಗಿಗಳಿಗೆ ಗಾಂಜಾ ಹಾಗೂ ಇತರ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಮೂವರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ನೈಜಿರಿಯಾದ ಉಗೋಚುಕ್ವಾ ವಿಕ್ಟರ್‌ ನ್ವಾಸೋ, ಜಾನ್‌ ಮೈಸನ್‌ ಸಿಮೋನ್‌, ಉಮೇಶ್‌ಕುಮಾರ್‌ ಬಂಧಿತರು. ಮೂವರು ಆರೋಪಿಗಳು ಹಲವು ತಿಂಗಳುಗಳಿಂದ ಪರಸ್ಪರ ಪರಿಚಯವಿದ್ದು ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಓರಿಸ್ಸಾದಿಂದ ಗಾಂಜಾ ತರಿಸಿಕೊಂಡು ವಿದ್ಯಾರ್ಥಿಗಳು  ಹಾಗೂ ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು.

ಅದೇ ರೀತಿ ಇತ್ತೀಚೆಗೆ ಜೆಪಿ ನಗರದ ಸ್ವಾಭಿಮಾನಿ ಕಾರಂಜಿ ಬ್ಲಾಕ್‌ ಬಳಿ, ಮಾದಕ ವಸ್ತು ಮಾರಾಟ  ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ  ನಡೆಸಿ ಮೂವರನ್ನು  ಬಂಧಿಸಲಾಯಿತು. ಅಲ್ಲದೆ ಆರೋಪಿಗಳ ಬಳಿಯಿದ್ದ  8 ಕೆ.ಜಿ ಗಾಂಜಾ, 120 ಗ್ರಾಂ ಹಶೀಶ್‌ ಸೇರಿದಂತೆ ಮತ್ತಿತರ ಮಾದಕವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next