Advertisement

ಪಾಕ್ ಪರ ಘೋಷಣೆ; ವೈರಲ್ ಆದ ವಿಡಿಯೋ ಮೂಲಕ ಗುರುತು ಪತ್ತೆ, ಮೂವರ ಬಂಧನ

02:30 PM Oct 21, 2021 | Team Udayavani |

ನವದೆಹಲಿ: ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಡಿ ಮೂವರನ್ನು ಬಂಧಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಬಾಲಿವುಡ್ ನಟಿ ಅನನ್ಯ ಪಾಂಡೆ ನಿವಾಸದ ಮೇಲೆ ಎನ್ ಸಿಬಿ ದಾಳಿ, ಫೋನ್, ಲ್ಯಾಪ್ ಟಾಪ್ ವಶಕ್ಕೆ

ಪಾಕ್ ಪರ ಘೋಷಣೆ ಕೂಗಿದ ವಿಡಿಯೋ ವೈರಲ್ ಆದ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೇ ನೋಯ್ಡಾ ಪೊಲೀಸರು ವಿಡಿಯೋ ಕುರಿತು ಪರಿಶೀಲನೆ ನಡೆಸಿದಾಗ ಅದು ಅಂದಿನ ಘಟನೆಗೆ ಸಂಬಂಧಪಟ್ಟಿರುವುದಾಗಿ ದೃಢಪಟ್ಟಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಮಾಹಿತಿಯ ಪ್ರಕಾರ, ವೈರಲ್ ಆದ ವಿಡಿಯೋದ ಆಧಾರದ ಮೇಲೆ ಮೂವರನ್ನು ಗುರುತಿಸಿ, ಬಂಧಿಸಿರುವುದಾಗಿ ನೋಯ್ಡಾ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಈದ್ ಮಿಲಾದ್ ಉನ್ ನಬಿ ಪ್ರಯುಕ್ತ ಮೆರವಣಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯುವಕರು ಪಾಕ್ ಪರ ಘೋಷಣೆ ಕೂಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next