ಕಾನ್ಪುರ : ಇಲ್ಲಿನ ಅಕ್‌ಬರ್‌ಪುರ ಆರ್‌ಟಿಓ ಕಚೇರಿಯ ಎದುರೇ ಜನರಿಗೆ ನಕಲಿ ಲೈಸನ್ಸ್‌ಗಳನ್ನು ನೀಡುವ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಸಿಬಂದಿಯೋರ್ವರು ಡ್ರೈವರ್ ಸೋಗಿನಲ್ಲಿ ಗ್ಯಾಂಗ್ ಸದಸ್ಯರನ್ನು ಭೇಟಿಯಾಗಿ ತನಗೆ ಡ್ರೈವಿಂಗ್ ಲೈಸನ್ಸ್ ನೀಡುವಂತೆ ಕೇಳಿದಾಗ ಅವರು ಒಂದು ಫೋಟೋಗ್ರಾಫ್ ಮತ್ತು 400 ರೂ. ಕೊಡುವಂತೆ ಕೇಳಿದರು. ಅದನ್ನು ಕೊಟ್ಟ ತಾಸೊಳಗೆ ಆ ಗ್ಯಾಂಗ್ ಸದಸ್ಯರು ನಕಲಿ ಡ್ರೈವಿಂಗ್ ಲೈಸನ್ಸನ್ನು ಕೊಟ್ಟರು.
ಒಡನೆಯೇ ಪೊಲೀಸರು ನಕಲಿ ಡ್ರೈವಿಂಗ್ ಲೈಸನ್ಸ್ ನೀಡುವ ಗ್ಯಾಂಗಿನ ಮೂವರು ಸದಸ್ಯರಾದ ಅಜಿತ್, ಚಂದ್ರಶೇಖರ್ ಮತ್ತು ವಿಕಾಸ್ ದ್ವಿವೇದಿ ಎಂಬವರನ್ನು ಸೆರೆ ಹಿಡಿದರು.
ಪೊಲೀಸರು ಬಂಧಿತರಿಂದ ಮೂರು ಪ್ರಿಂಟರ್‌ಗಳು, ಮೂರು ಲ್ಯಾಪ್ ಟಾಪ್‌ಗ್ಳು, ಮೂರು ಸಿಪಿಯುಗಳು, ನಾಲ್ಕು ನಕಲಿ ಡ್ರೈವಿಂಗ್ ಲೈಸನ್ಸ್‌ಗಳು, 15 ವಾಹನಗಳ ನಕಲಿ ಡ್ರೈವಿಂಗ್ ಲೈಸನ್ಸ್‌ಗಳು, 2 ಪೆನ್ ಡ್ರೈವ್‌ಗಳು ಮತ್ತು ಇತರ ಕೆಲವು ದಾಖಲೆ ಪತ್ರಗಳನ್ನು ಅವರಿಂದ ವಶಪಡಿಸಿಕೊಂಡರು.
ನಕಲಿ ಡ್ರೈವಿಂಗ್ ಲೈಸನ್ಸ್ ನೀಡುವ ಈ ದಂಧೆಯಲ್ಲಿ ತಾವು ಬಹಳ ದೀರ್ಘ ಕಾಲದಿಂದ ತೊಡಗಿಕೊಂಡಿರುವುದಾಗಿ ಬಂಧಿತರ ಪೊಲೀಸರಲ್ಲಿ ಬಾಯಿಬಿಟ್ಟರು.