Advertisement

ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದ ಮೂವರ ಬಂಧನ: 2 ನಾಡಬಂದೂಕು, ಮುದ್ದುಗುಂಡು ವಶ

02:06 PM Nov 13, 2020 | keerthan |

ಹನೂರು (ಚಾಮರಾಜನಗರ) : ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿ ಬೇಟೆಗೆ ಹೊಂಚು ಹಾಕುತ್ತಿದ್ದ 3 ಜನರನ್ನು ಬಂಧಿಸುವಲ್ಲಿ ಕಾವೇರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ಗಡಿಯಂಚಿನ ಆತೂರು ಗ್ರಾಮದ ಅಯ್ಯನ್, ಮಾರೀಮುತ್ತು ಮತ್ತು ಶಿವಕುಮಾರ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಈ 3 ಜನರ ತಂಡ ಅಕ್ರಮವಾಗಿ ಗೋಪಿನಾಥಂ ವಿಭಾಗದ ಮೇಟಗಲು ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದಾರೆ.

ಇದನ್ನು ಗಮನಿಸಿದ ಗುಂಡಪಟ್ಟಿ ಕಳ್ಳಬೇಟೆ ತಡೆ ಶಿಬಿರ ಮತ್ತು ಪುಂಗಂ ಗಸ್ತಿನ ಅರಣ್ಯ ರಕ್ಷಕ ಚಂದ್ರಶೇಖರ್ ಕಂಬಾರ ಗಸ್ತಿನಲ್ಲಿರುವಾಗ ಈ ತಂಡವನ್ನು ಪತ್ತೆ ಹಚ್ಚಿ ಬಂಧನಕ್ಕೊಳಪಡಿಸಿದ್ದಾರೆ.  ಈ ವೇಳೆ ಬಂಧಿತರಿಂದ 2 ನಾಡಬಂದೂಕು, 1 ಹೋಂಡಾ ಶೈನ್ ದ್ವಿಚಕ್ರ ವಾಹನ, 2 ಕತ್ತಿ, ತಲೆ ಬ್ಯಾಟರಿ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಳಿಕ ಇವರನ್ನು ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಜಿಂಕೆ ಬೇಟೆಯಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅರಣ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next