Advertisement

ಕಾಶ್ಮೀರದಲ್ಲಿ  ಉಗ್ರರ ಅಟ್ಟಹಾಸ : 3 ಸೈನಿಕರು ಹುತಾತ್ಮ, ಮಹಿಳೆ ಬಲಿ 

08:57 AM Feb 23, 2017 | Team Udayavani |

ಶ್ರೀನಗರ : ಶೋಪಿಯಾನ್‌ ಜಿಲ್ಲೆಯ ಕುಂಗೂ ಎಂಬಲ್ಲಿ  ಗುರುವಾರ ಬೆಳಗ್ಗೆ ಭದ್ರತಾ ಪಡೆಗಳ ಗಸ್ತುವಾಹನವನ್ನು ಗುರಿಯಾಗಿರಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದು  ಮೂವರು ಸೈನಿಕರು ಹುತಾತ್ಮರಾಗಿದ್ದು,ಓರ್ವ ಮಹಿಳೆ ಬಲಿಯಾಗಿರುವ ಕುರಿತು ವರದಿಯಾಗಿದೆ. 

Advertisement

ಉಗ್ರರು ನಸುಕಿನ ವೇಳೆ ನಡೆಸಿದ ಹೊಂಚು ದಾಳಿಯಲ್ಲಿ 5 ಮಂದಿ ರಾಷ್ಟ್ರೀಯ ರೈಫ‌ಲ್ಸ್‌ಗೆ ಸೇರಿದ ಯೋಧರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳ ಪೈಕಿ ಇಬ್ಬರು ಹಿರಿಯ ಅಧಿಕಾರಿಗಳು ಎಂದು ತಿಳಿದು ಬಂದಿದೆ. 

ಗುಂಡಿನ ದಾಳಿಯ ವೇಳೆ ಮನೆಯೊಳಗಿದ್ದ ಮಹಿಳೆ ಬಲಿಯಾಗಿರುವುದಾಗಿ ಸೇನಾ ಪಡೆಗಳು ತಿಳಿಸಿವೆ. 

ಉಗ್ರರು ಮನ ಬಂದಂತೆ ಗುಂಡಿನ ದಾಳಿ ನಡೆಸಿದ ತಕ್ಷಣವೇ ಸೇನಾ ಪಡೆಗಳು ಪ್ರತಿ ದಾಳಿ ನಡೆಸಿದರಾದರೂ ಕತ್ತಲಿನಲ್ಲಿ ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. 

ಸ್ಥಳಕ್ಕೆ ಹೆಚ್ಚು ವರಿ ಪಡೆಗಳನ್ನು ಕರೆಸಿ  ದಾಳಿ ನಡೆಸಿದ ಉಗ್ರರಿಗಾಗಿ ಭಾರಿ ಕೂಂಬಿಂಗ್‌ ಕಾರ್ಯಾಚರಣೆ ಮುಂದುವರೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next