Advertisement

ಉಗ್ರರಿಂದ ಜೀವ ಬೆದರಿಕೆ: ಮೋದಿ ಭದ್ರತೆ ಇನ್ನಷ್ಟು ಬಿಗಿ, No Roadshow

03:42 PM Jun 26, 2018 | Team Udayavani |

ಹೊಸದಿಲ್ಲಿ : ಸಿಪಿಐ-ಎಂ ಮಾವೋವಾದಿಗಳು ಮತ್ತು ಪಾಕ್‌ ಬೆಂಬಲಿತ ಉಗ್ರ ಸಮೂಹಗಳಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯನ್ನು ಕೇಂದ್ರ ಗೃಹ ಸಚಿವಾಲಯ ಬಿಗಿಗೊಳಿಸಿದೆ.

Advertisement

2019ರ ಲೋಕಸಭಾ ಚುನಾವಣೆಗಳಿಗೆ ಇನ್ನು ಕೆಲವು ತಿಂಗಳು ಮಾತ್ರವೇ ಇದ್ದು ಪ್ರಧಾನಿ ಮೋದಿ ಅವರು ಭದ್ರತೆ ಬೆದರಿಕೆ ಕಾರಣಕ್ಕೆ ಯಾವುದೇ ರೋಡ್‌ ಶೋ ನಡೆಸದಂತೆ ಕೂಡ ಗೃಹ ಸಚಿವಾಲಯ ಸೂಚಿಸಿದೆ.

ವರದಿಗಳ ಪ್ರಕಾರ ಗೃಹ ಸಚಿವಾಲಯ ಈ ವಿಷಯದಲ್ಲಿ ರಾಜ್ಯ ಸರಕಾರಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಅವರು ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲೆಲ್ಲ ಅವರ ರಕ್ಷಣೆ ಮತ್ತು ಭದ್ರತೆಗೆ ಸಾಧ್ಯವಿರುವ ಎಲ್ಲ ಗರಿಷ್ಠ ಕ್ರಮಗಳನ್ನು ಕೈಗೊಳ್ಳುವಂತೆ ಅಲ್ಲಿನ ಸರಕಾರಗಳಿಗೆ ಸೂಚಿಸಿದೆ. 

ಭದ್ರತಾ ಅನುಮತಿ ಇಲ್ಲದೆ ಯಾವದೇ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಪ್ರಧಾನಿ ಮೋದಿ ಅವರ ಸನಿಹಕ್ಕೆ ಹೋಗುವಂತಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. 

ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಸಭೆ ಕೈಗೊಳ್ಳುವ ಸಂದರ್ಭದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ. 

Advertisement

ಪ್ರಧಾನಿ ಮೋದಿ ಅವರಿಗೆ ಬಹು ಸ್ತರಗಳ ಮತ್ತು ಭೇದಿಸಲಾಗದ Z+ ಸೆಕ್ಯುರಿಟಿ ನೀಡಲಾಗಿದ್ದು ಇದನ್ನು ಆಗಾಗ ಪರಾಮರ್ಶಿಸಲು ಸಮಿತಿಯೊಂದನ್ನು ರೂಪಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. 

ಪ್ರಧಾನಿ ಮೋದಿ ಅವರ ಭದ್ರತೆಯನ್ನು ಹೆಚ್ಚಿಸುವ ಸಭೆಯಲ್ಲಿ  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಾಲ್‌, ಕೇಂದ್ರ ಗೃಹ ಕಾರ್ಯದರ್ಶಿ  ರಾಜೀವ್‌ ಗೌಬಾ, ಗುಪ್ತಚರ ದಳದ ನಿರ್ದೇಶಕ ರಾಜೀವ್‌ ಜೈನ್‌ ಮತ್ತು ಇತರ ಉನ್ನತ ಸರಕಾರಿ ಅಧಿಕಾರಿಗಳು ಹಾಜರಿದ್ದರು.

ಮೋದಿ ಅವರಿಗೆ ಮಾವೋ ಉಗ್ರರಿಂದ ಮತ್ತು ಪಾಕ್‌ ಬೆಂಬಲಿತ ಉಗ್ರ ಸಮೂಹಗಳಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ನಿವಾಸದಲ್ಲಿ ಈ ಉನ್ನತ ಮಟ್ಟದ ಸಭೆಯನ್ನು ನಡೆಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next