Advertisement

ದಾವೂದ್‌ ಹೆಸರಲ್ಲಿ ಬೆದರಿಕೆ ಕರೆ ಮಾಡಿದ ವ್ಯಕ್ತಿ ಕೋಲ್ಕತಾದಲ್ಲಿ ಸೆರೆ

10:22 AM Sep 14, 2020 | sudhir |

ಮುಂಬಯಿ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹೆಸರಿನಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಅವರಿಗೆ ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) 49ರ ಹರೆಯದ ಕೋಲ್ಕತಾ ನಿವಾಸಿ ಪಾಲಶ್‌ ಬೋಸ್‌ನನ್ನು  ಬಂಧಿಸಿದೆ.

Advertisement

ಬಂಧಿತ ಆರೋಪಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಗೃಹ ಸಚಿವ ಅನಿಲ್‌ ದೇಶ್ಮುಖ್‌ ಅವರ ನಿವಾಸ ಗಳಿಗೂ ಕರೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ರಾಜ್ಯ ಎಟಿಎಸ್‌ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಎಟಿಎಸ್‌ ಹೇಳಿಕೆಯ ಪ್ರಕಾರ, ಬೋಸ್‌ ಸ್ವತಃ ದಾವೂದ್‌ ಇಬ್ರಾಹಿಂ ಗ್ಯಾಂಗ್‌ನ ಸದಸ್ಯನೆಂದು ಹೇಳಿ ರಾವುತ್‌ ಅವರಿಗೆ ಹಲವು ಬಾರಿ ಜೀವ ಬೆದರಿಕೆಗಳನ್ನು ಕರೆಗಳನ್ನು ಮಾಡಿದ್ದ. ಈ ಬಗ್ಗೆ ರಾವುತ್‌ ಅವರ ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 505, 506 (ಜಿಜಿ) ಮತ್ತು 507ರ ಅಡಿಯಲ್ಲಿ ಅಪರಾಧವನ್ನು ದಾಖಲಿಸಿ ತನಿಖೆ ಪ್ರಾರಂಭಿ ಸಿದ್ದರು. ತನಿಖೆ ವೇಳೆ ಆರೋಪಿ ಕೋಲ್ಕತ್ತಾದಲ್ಲಿ ಅಡಗಿದ್ದಾನೆ ಎಂದು ಎಟಿಎಸ್‌ಗೆ ಮಾಹಿತಿ ಸಿಕ್ಕಿದ್ದು. ಈ ಆಧಾರದ ಮೇಲೆ ತಂಡವು ಕೋಲ್ಕತಾ ಪೊಲೀಸರ ಸಹಾ ಯದಿಂದ ಕಾರ್ಯಾಚರಣೆ ನಡೆಸಿ ಬೋಸ್‌ನನ್ನು ಬಂಧಿಸಿದೆ.

ಬೋಸ್‌ ಬಳಿಯಿಂದ ಎರಡು ಮೊಬೈಲ್‌ ಹ್ಯಾಂಡ್‌ಸೆಟ್‌ಗಳು, ಒಂದು ಭಾರತೀಯ ಸಿಮ್‌ ಮತ್ತು ಮೂರು ಅಂತಾರಾಷ್ಟ್ರೀಯ ಸಿಮ್‌ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಎಟಿಎಸ್‌ ಅಧಿಕಾರಿ ದಯಾ ನಾಯಕ್‌ ತಿಳಿಸಿ¨ªಾರೆ. ಆರೋಪಿಯು ಈ ಅಪರಾಧವನ್ನು ಒಪ್ಪಿ ಕೊಂಡಿ¨ªಾನೆ ಎಂದು ಅ ಧಿಕಾರಿ ಹೇಳಿದ್ದಾರೆ.

ಬೋಸ್‌ ವಿಜ್ಞಾನ ಪದವೀಧರನಾಗಿದ್ದು, 15 ವರ್ಷಗಳ ಕಾಲ ದುಬಾೖನಲ್ಲಿ ಕೆಲಸ ಮಾಡಿದ್ದ. ಆತನ ಅಲ್ಲಿನ ಸಂಪರ್ಕ ಗಳನ್ನು ಪರಿಶೀಲಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ. ಆರೋಪಿ ಮಹಾರಾಷ್ಟ್ರ ರಾಜಕಾರಣಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಬಾಂದ್ರಾದಲ್ಲಿರುವ ಠಾಕ್ರೆ ನಿವಾಸ ವಾದ ಮಾತೋಶ್ರೀ ಬಗ್ಗೆ ವಿವರವನ್ನು ಗೂಗಲ್‌ನಲ್ಲಿ ಹುಡುಕಿದ್ದ. ಆತ 1999 ಮತ್ತು 2018ರ ನಡುವೆ ದುಬೈನಲ್ಲಿ ಕೆಲಸ ಮಾಡಿದ್ದ ಎಂದು ಆತ ನಮಗೆ ತಿಳಿಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ. ಸೆ. 2 ಮತ್ತು 6ರ ನಡುವೆ ಬೋಸ್‌ ಅಂತಾರಾಷ್ಟ್ರೀಯ ಸಿಮ್‌ ಕಾರ್ಡ್‌ ಬಳಸಿ ರಾಜಕಾರಣಿ ಗಳಿಗೆ ಅನೇಕ ಕರೆಗಳನ್ನು ಮಾಡಿದ್ದ. ಸೆ. 6ರಂದು ಕೇವಲ ರಾವುತ್‌ ಅವರಿಗೆ ಕರೆ ಮಾಡಿದ್ದ ಎಂದು ಎಟಿಎಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next