Advertisement

ಜಡ್ಜ್ ಗಳಿಗೆ ಬೆದರಿಕೆ : ಸುಪ್ರೀಂ ಕೋರ್ಟ್‌ ಕಳವಳ

06:46 PM Aug 06, 2021 | Team Udayavani |

ನವ ದೆಹಲಿ : ಜಡ್ಜ್ ಗಳಿಗೆ ಬೆದರಿಕೆ ಕರೆಗಳು ಹಾಗೂ ಅವಹೇಳನಕಾರಿ ಸಂದೇಶಗಳು ಕಳುಹಿಸುವಂಥ ಪ್ರಕರಣಗಳು ಹೆಚ್ಚುತ್ತಿವೆ. ನ್ಯಾಯಾಂಗಕ್ಕೆ ಈ ವಿಚಾರದಲ್ಲಿ ಗುಪ್ತಚರ ಸಂಸ್ಥೆ (ಐಬಿ)ಯಾಗಲೀ, ಸಿಬಿಐಯಾಗಲೀ ನೆರವಿಗೆ ಬರುತ್ತಿಲ್ಲ. ಈ ಕುರಿತು ದೂರು ಸಲ್ಲಿಸುವ ಸ್ವಾತಂತ್ರ್ಯವೂ ನ್ಯಾಯಾಂಗ ಅಧಿಕಾರಿಗಳಿಗೆ ಇಲ್ಲದಾಗಿದೆ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

Advertisement

ಜಾರ್ಖಂಡ್‌ನ‌ ಧನ್‌ ಬಾದ್‌ ನಲ್ಲಿ ಜಡ್ಜ್ ಉತ್ತಮ್‌ ಆನಂದ್‌ ಅವರನ್ನು ಆಟೋ ಡಿಕ್ಕಿ ಹೊಡೆಸಿ ಕೊಲೆ ಮಾಡಿದ ಪ್ರಕರಣದ ಬೆನ್ನಲ್ಲೇ ನ್ಯಾಯಾಲಯದಿಂದ ಈ ಅಭಿಪ್ರಾಯ ಹೊರಬಿದ್ದಿದೆ. ಜತೆಗೆ, ನ್ಯಾಯಾಂಗ ಅಧಿಕಾರಿಗಳಿಗೆ ಯಾವ ರೀತಿ ಭದ್ರತೆಯನ್ನು ಒದಗಿಸುತ್ತಿದ್ದೀರಿ ಎಂಬ ಬಗ್ಗೆ ವಿವರಣೆ ಇರುವ ಸ್ಥಿತಿಗತಿ ವರದಿ ಸಲ್ಲಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೂ ಕೋರ್ಟ್‌ ಸೂಚಿಸಿದೆ.

ಇದನ್ನೂ ಓದಿ :ಕ್ಯಾನ್ಸರ್ ಪೀಡಿತೆ ಅಕ್ಕನನ್ನು ಬದುಕಿಸಿಕೊಳ್ಳಲು ಬೀದಿಯಲ್ಲಿ ಕಾಳು ಮಾರುತ್ತಿರುವ ಪುಟ್ಟ ಬಾಲಕ

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಹೈಕೋರ್ಟ್‌ ಜಡ್ಜ್ ಗಳ ಮೇಲೆ ಕೇವಲ ದೈಹಿಕವಾಗಿ ಮಾತ್ರವಲ್ಲ, ವಾಟ್ಸ್‌ ಆ್ಯಪ್‌- ಫೇಸ್‌ ಬುಕ್‌ ಗಳಲ್ಲಿ ಅವಹೇಳನಕಾರಿ ಸಂದೇಶಗಳ ಮೂಲಕ ಮಾನಸಿಕವಾಗಿಯೂ ಬೆದರಿಕೆ ಹಾಕಲಾಗುತ್ತದೆ. ಒಂದೆರಡು ಪ್ರದೇಶಗಳಲ್ಲಿ ಈ ಬಗ್ಗೆ ಸಿಬಿಐ ತನಿಖೆಗೂ ಕೋರ್ಟ್‌ಗಳು ಆದೇಶಿಸಿವೆ. ಈ ಪೈಕಿ ಒಂದು ಕಡೆ ಸಿಬಿಐ ಏನನ್ನೂ ಮಾಡಿಲ್ಲ. ಸಿಬಿಐನ ವರ್ತನೆಯಲ್ಲಿ ಬದಲಾವಣೆಯನ್ನು ನಾವು ನಿರೀಕ್ಷಿಸಿದ್ದೆವು. ಆದರೆ, ಅವರ ವರ್ತನೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಪರಿಸ್ಥಿತಿಯೇ ಹಾಗಿದೆ ಎಂದು ಸಿಜೆಐ ಎನ್‌.ವಿ. ರಮಣ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next